ರಜೆ ಇದೆ ಎಂದು ನಂದಿಬೆಟ್ಟಕ್ಕೆ ಹೋಗೋ ಮುನ್ನ ಎಚ್ಚರ; ನಿಮಗೆ ಎದುರಾಗಲಿದೆ ದೊಡ್ಡ ಶಾಕ್

ರಜೆ ಇದೆ ಎಂದು ನೀವು ಪಿಕ್​ನಿಕ್​ಗೋಸ್ಕರ ನಂದಿ ಬೆಟ್ಟಕ್ಕೆ ಹೋಗೋ ಪ್ಲಾನ್​ ಮಾಡಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ! ಏಕೆಂದರೆ ನಿಮಗೆ ಅಲ್ಲಿ ನಿರಾಸೆ ಕಾಡೋದು ಕಟ್ಟಿಟ್ಟ ಬುತ್ತಿ.

news18-kannada
Updated:March 14, 2020, 8:28 AM IST
ರಜೆ ಇದೆ ಎಂದು ನಂದಿಬೆಟ್ಟಕ್ಕೆ ಹೋಗೋ ಮುನ್ನ ಎಚ್ಚರ; ನಿಮಗೆ ಎದುರಾಗಲಿದೆ ದೊಡ್ಡ ಶಾಕ್
ನಂದಿ ಬೆಟ್ಟ
  • Share this:
ಬೆಂಗಳೂರು (ಮಾ.14): ಮಾರಣಾಂತಿಕ ಕೊರೋನಾ ವೈರಸ್​ಗೆ ರಾಜ್ಯದಲ್ಲಿ ಮೊದಲ ಬಲಿಯಾಗುತ್ತಿದ್ದಂತೆ ಕರ್ನಾಟಕ ಸರ್ಕಾರ ಎಚ್ಚೆತ್ತುಕೊಂಡಿದ್ದು, ಹತ್ತಾರು ಮಹತ್ವದ ನಿರ್ಧಾರ ಕೈಗೊಂಡಿದೆ. ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಅಕ್ಷರಶಃ ಕರ್ನಾಟಕವನ್ನೇ ಬಂದ್ ಮಾಡುವ ಆದೇಶ ಹೊರಡಿಸಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದೆ. ಬಹುತೇಕ ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ರಜೆ ಇದೆ ಎನ್ನುವ ಕಾರಣಕ್ಕೆ ಅನೇಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ರಜೆ ಇದೆ ಎಂದು ನೀವು ಪಿಕ್​ನಿಕ್​ಗೋಸ್ಕರ ನಂದಿ ಬೆಟ್ಟಕ್ಕೆ ಹೋಗೋ ಪ್ಲಾನ್​ ಮಾಡಿದ್ದರೆ ಅದನ್ನು ಇಂದೇ ಬಿಟ್ಟುಬಿಡಿ! ಏಕೆಂದರೆ ನಿಮಗೆ ಅಲ್ಲಿ ನಿರಾಸೆ ಕಾಡೋದು ಕಟ್ಟಿಟ್ಟ ಬುತ್ತಿ.

ರಾಜ್ಯದಲ್ಲಿ ಕೊರೋನಾ ಎಮರ್ಜೆನ್ಸಿ ಘೋಷಿಸಿದ ಬೆನ್ನಲ್ಲೇ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಬೆಟ್ಟವನ್ನು ಒಂದು ವಾರ ಕಾಲ ಬಂದ್​ ಮಾಡಲಾಗಿದೆ. ಹೀಗಾಗಿ ಪಿಕ್​ನಿಕ್​ಗೆ ತೆರಳಿದವರಿಗೆ ನಿರಾಸೆ ಉಂಟಾಗಿದೆ.

ರಜೆ ಇದೆ ಎನ್ನುವ ಕಾರಣಕ್ಕೆ ಇಂದು ಒಂದೇ ದಿನ ಸುಮಾರು 15 ಸಾವಿರಕ್ಕೂ ಹೆಚ್ಚು ಪ್ರವಾಸಿಗರು  ನಂದಿ ಬೆಟ್ಟಕ್ಕೆ ಆಗಮಿಸಿದ್ದರು. ಆದರೆ, ಕೊರೊನಾ ವೈರಸ್ ಸೊಂಕು ಹರಡುವುದನ್ನು  ತಡೆಗಟ್ಟಲು ಇಂದಿನಿಂದ 23-03-2020ರ ಸೋಮವಾರದವರೆಗೆ ನಂದಿ ಬೆಟ್ಟವನ್ನು ಬಂದ್ ಮಾಡಲಾಗಿದೆ. ಈ ವಿಚಾರ ಗೊತ್ತಿಲ್ಲದೆ ನಂದಿ ಬೆಟ್ಟಕ್ಕೆ ತೆರಳಿದವರಿಗೆ ನಿರಾಸೆ ಉಂಟಾಗಿದೆ. ಸಾರ್ವತ್ರಿಕ ರಜಾ ದಿನಗಳಲ್ಲಿ 6 ರಿಂದ 7 ಸಾವಿರ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಆದರೆ, ಈ ಸಂಖ್ಯೆ ಇಂದು ದುಪ್ಟಟ್ಟಾಗಿತ್ತು.

ಇದನ್ನೂ ಓದಿ: ರಾಜ್ಯದಲ್ಲಿ ಕೊರೋನಾ ಭೀತಿ: ಇಂದಿನಿಂದ ಬಹುತೇಕ ಎಲ್ಲವೂ ಸ್ತಬ್ಧ; ಏನಿರತ್ತೆ? ಏನಿರಲ್ಲ?

ದೊಡ್ಡ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಕೊರೋನಾ ಸುಲಭವಾಗಿ ಹರಡುತ್ತದೆ. ಇದನ್ನು ತಡೆಯಲೆಂದೇ ರಾಜ್ಯ ಸರ್ಕಾರ ಬಂದ್​ ಆದೇಶ ಹೊರಡಿಸಿದೆ. ರಜೆ ಇರುವ ಕಾರಣಕ್ಕೆ ಅನೇಕರು ಪಿಕ್​ನಿಕ್​ಗೋಸ್ಕರ ನಂದಿ ಬೆಟ್ಟಕ್ಕೆ ಬರುತ್ತಾರೆ ಎಂಬುದನ್ನು ಗಮನಿಸಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತ  ಈ ಆದೇಶ ಹೊರಡಿಸಿದ್ದಾರೆ.
First published:March 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading