ನನಗೆ ಕೊರೋನಾ ಇದೆ, ಹತ್ರ ಬನ್ನಿ; ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ರಂಪಾಟ ಮಾಡಿದ ಟೆಕ್ಕಿಯೀಗ ಪೊಲೀಸರ ಅತಿಥಿ

ಬೆಂಗಳೂರಿನ ಯಶವಂತಪುರದಲ್ಲಿ ನಿನ್ನೆ ಈ ಹೈಡ್ರಾಮ ನಡೆದಿದೆ. ನಡುರಾತ್ರಿ ರಸ್ತೆ ಮಧ್ಯೆ ಗಲಾಟೆ ಮಾಡಿದ ವಿಜಯಪುರ ಮೂಲದ ಸಚಿನ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್​ನನ್ನು ಪೊಲೀಸರು ಬಂಧಿಸಿದ್ದಾರೆ.

news18-kannada
Updated:March 26, 2020, 8:29 AM IST
ನನಗೆ ಕೊರೋನಾ ಇದೆ, ಹತ್ರ ಬನ್ನಿ; ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ರಂಪಾಟ ಮಾಡಿದ ಟೆಕ್ಕಿಯೀಗ ಪೊಲೀಸರ ಅತಿಥಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾ. 26): ನನಗೆ ಕೊರೋನಾ ವೈರಸ್​ ಇದೆ. ಯಾರಾದ್ರೂ ಹತ್ರ ಬರ್ತೀರಾ? ಎಂದು ಬುಧವಾರ ರಾತ್ರಿ ರಸ್ತೆ ಮಧ್ಯೆ ನಿಂತು ರಂಪಾಟ ಮಾಡುತ್ತಿದ್ದ ಸಾಫ್ಟ್​ವೇರ್ ಇಂಜಿನಿಯರ್ ಈಗ ಬೆಂಗಳೂರಿನ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಯಶವಂತಪುರದಲ್ಲಿ ನಿನ್ನೆ ಮಧ್ಯರಾತ್ರಿ ಈ ಹೈಡ್ರಾಮ ನಡೆದಿದೆ. ಈ ವಿಚಾರ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನ್ನನ್ನು ಎಳೆದುಕೊಂಡು ಹೋಗುತ್ತಾರೆಂಬ ಭಯದಲ್ಲಿ ಯಾರಾದರೂ ನನ್ನ ಹತ್ತಿರ ಬಂದರೆ ಅವರಿಗೂ ಕೊರೋನಾ ಬರುತ್ತದೆ ಎಂದು ನಾಟಕ ಮಾಡಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಡುರಾತ್ರಿ ರಸ್ತೆ ಮಧ್ಯೆ ಗಲಾಟೆ ಮಾಡಿದ ವಿಜಯಪುರ ಮೂಲದ ಸಚಿನ್ ಎಂಬ ಸಾಫ್ಟ್‌ವೇರ್ ಇಂಜಿನಿಯರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದ ಸ್ಥಳೀಯರ ಬಳಿ ಹೋಗಿ ನಂಗೆ ಕೊರೋನಾ ‌ಇದೆ, ಹತ್ರ ಬನ್ನಿ ಎಂದು ಪುಂಡಾಟ ಮಾಡುತ್ತಿದ್ದ ಸಚಿನ್ ವರ್ತನೆಯಿಂದ ಅಲ್ಲಿನ ಜನರು ಹೆದರಿದ್ದರು. ಹೀಗಾಗಿ, ಪೊಲೀಸರಿಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸಚಿನ್​ಗೆ ಥಳಿಸಿ, ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.

ಇದನ್ನೂ ಓದಿ: ಆಹಾರ ಅಭಾವ ತಲೆದೋರದಂತೆ ಸಕಲ ಸಿದ್ಧತೆ; ದಿನದ 24 ಗಂಟೆ ದಿನಸಿ ಅಂಗಡಿ ತೆರೆಯಲು ಅವಕಾಶ

ಸಚಿನ್ ಕೆಲ ಮಾದರಿಯ ಡ್ರಗ್ಸ್ ಸೇವಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ಆಟೋ ಡ್ರೈವರ್​ಗಳ ಮೇಲೂ ಸಚಿನ್ ಹಲ್ಲೆ ನಡೆಸಿದ್ದಾನೆ. ಯಶವಂತಪುರದ ಪೊಲೀಸರ ವಶದಲ್ಲಿರುವ ಸಚಿನ್​ನನ್ನು ವಿಚಾರಣೆ ನಡೆಸಲಾಗುತ್ತಿದೆ.
First published: March 26, 2020, 8:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading