Bangalore Lockdown: ಮಂಗಳವಾರದಿಂದ ಸ್ತಬ್ಧವಾಗಲಿರುವ ಬೆಂಗಳೂರು; ಮತ್ತೆ ಊರಿನತ್ತ ಮುಖಮಾಡಿದ ಕಾರ್ಮಿಕ ವರ್ಗ

Bengaluru Lockdown: ಭಾನುವಾರ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಹೀಗಾಗಿ ಇಡೀ ನಗರ ಸ್ತಬ್ಧವಾಗಿತ್ತು. ಹೀಗಾಗಿ ಇನ್ನೂ ಎರಡು ದಿನದಲ್ಲಿ ಪ್ರತಿಯೊಬ್ಬರು ಅವರವರ ಊರಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದೇ ಕಾರಣಕ್ಕೆ ಪ್ರಯಾಣಿಕರು ಇಂದು ಬೆಳಗ್ಗೆಯಿಂದ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾದು ನಿಂತಿದ್ದಾರೆ.

news18-kannada
Updated:July 13, 2020, 8:25 AM IST
Bangalore Lockdown: ಮಂಗಳವಾರದಿಂದ ಸ್ತಬ್ಧವಾಗಲಿರುವ ಬೆಂಗಳೂರು; ಮತ್ತೆ ಊರಿನತ್ತ ಮುಖಮಾಡಿದ ಕಾರ್ಮಿಕ ವರ್ಗ
ರಾತ್ರಿಯಿಂದಲೇ ಬಸ್‌ ನಿಲ್ದಾಣದಲ್ಲಿ ಜಮಾಯಿಸಿರುವ ಜನ.
  • Share this:
ಬೆಂಗಳೂರು (ಜುಲೈ 13); ರಾಜ್ಯದಲ್ಲಿ ಕೊರೋನಾ ಸೋಂಕು ಮಿತಿಮೀರುತ್ತಿರುವ ಹಿನ್ನೆಲೆಯಲ್ಲಿ ಇದನ್ನು ತಡೆಯುವ ಸಲುವಾಗಿ ರಾಜ್ಯ ಸರ್ಕಾರ ಮಂಗಳವಾರದಿಂದ ಮತ್ತೆ ಒಂದು ವಾರಗಳ ಕಾಲ ಲಾಕ್‌ಡೌನ್ ಘೋಷಿಸಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು ಒಂದು ವಾರಗಳ ಕಾಲ ಲಾಕ್‌ಡೌನ್ ಆಗಲಿವೆ. ಪರಿಣಾಮ ರಾಜ್ಯ ರಾಜಧಾನಿಯಲ್ಲಿ ನೆಲೆಸಿರುವ ಕಾರ್ಮಿಕ ವರ್ಗದ ಜನ ಈಗಾಗಲೇ ತಮ್ಮ ಊರಿನ ಕಡೆಗೆ ಮುಖಮಾಡಿದ್ದಾರೆ.

ಬೆಂಗಳೂರಿನಲ್ಲಿ ನೆಲೆಸಿರುವ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು ಸೇರಿದಂತೆ ಇತರೆ ಜಿಲ್ಲೆಗಳ ಕಾರ್ಮಿಕ ವರ್ಗದ ಜನ ಈಗಾಗಲೇ ತಮ್ಮ ಊರಿಗೆ ಹೊರಟು ನಿಂತಿದ್ದಾರೆ. ಪರಿಣಾಮ ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ತುಮಕೂರು ರಸ್ತೆಯಲ್ಲಿ ಲಗೇಜ್ ಸಮೇತ ಜನ ಬಸ್‌ಗಳಿಗಾಗಿ ಕಾದು ನಿಂತಿರುವ ದೃಶ್ಯಗಳು ಕಂಡು ಬರುತ್ತಿದೆ.

Malleshwaram Shop owners take Self lockdown decision to control Coronavirus
ಸಾಂದರ್ಭಿಕ ಚಿತ್ರ


ಭಾನುವಾರ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು. ಹೀಗಾಗಿ ಇಡೀ ನಗರ ಸ್ತಬ್ಧವಾಗಿತ್ತು. ಹೀಗಾಗಿ ಇನ್ನೂ ಎರಡು ದಿನದಲ್ಲಿ ಪ್ರತಿಯೊಬ್ಬರು ಅವರವರ ಊರಿಗೆ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಇದೇ ಕಾರಣಕ್ಕೆ ಪ್ರಯಾಣಿಕರು ಇಂದು ಬೆಳಗ್ಗೆಯಿಂದ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗೆ ಕಾದು ನಿಂತಿದ್ದಾರೆ. ಹೀಗಾಗಿ ಬಸ್‌ಗಳು ಸಹ ಪ್ರಯಾಣಿಕರನ್ನು ತಲುಪಿಸಲು ಸಿದ್ದವಾಗಿ ನಿಂತಿವೆ.

Interstate bus route will begin from June 17 In Karnataka,
ಕೆಎಸ್​ಆರ್​ಟಿಸಿ


ರಾಜ್ಯದಲ್ಲೂ ಕೊರೋನಾ ಆರ್ಭಟ ತಾರಕಕ್ಕೇರಿದೆ. ರಾಜ್ಯ ಆರೋಗ್ಯ ಇಲಾಖೆ ಭಾನುವಾರ ಸಂಜೆ ವೇಳೆಗೆ ನೀಡಿರುವ ಅಂಕಿಅಂಶದ ಪ್ರಕಾರ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದಲ್ಲಿ 71 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. 2,627 ಪ್ರಕರಣಗಳು ದಾಖಲಾಗಿವೆ. ರಾಜ್ಯಾದ್ಯಂತ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 38,843ಕ್ಕೆ ತಲುಪಿದ್ದು, ಸಾವಿನ ಪ್ರಮಾಣ 684ಕ್ಕೆ ಏರಿದೆ.

ಸಾಂದರ್ಭಿಕ ಚಿತ್ರ
ಈವರೆಗೆ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದವರ ಸಂಖ್ಯೆ 15,409 ಇದೆ. ಇದರೊದಿಗೆ ರಾಜ್ಯದಲ್ಲಿ ಈಗ ಸಕ್ರಿಯ ಪ್ರಕರಣಗಳ ಸಂಖ್ಯೆ 22,746ಕ್ಕೆ ಮುಟ್ಟಿದೆ. ಐಸಿಯುನಲ್ಲಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಈಗ 532 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದೇ ಕಾರಣಕ್ಕೆ ಹಲವಾರು ತಜ್ಞರು "ರಾಜ್ಯದಲ್ಲಿ ಕೊರೋನಾ ಸೋಂಕನ್ನು ನಿಯಂತ್ರಿಸಲು ಲಾಕ್‌ಡೌನ್‌ ಏಕೈಕ ಮಾರ್ಗ. ಹೀಗಾಗಿ ರಾಜ್ಯ ಸರ್ಕಾರ ರಾಜ್ಯಾದ್ಯಂತ ಮತ್ತೆ ಲಾಕ್‌ಡೌನ್‌ ಘೋಷಣೆ ಮಾಡಬೇಕು" ಎಂದು ಒತ್ತಾಯಿಸಿದ್ದರು.

siddaramaiah is not my enemy we made a strategy to defeat 15 Disqualified MLAs in this Assembly Bypolls says HD Kumaraswamy in Bangalore
ಎಚ್.ಡಿ. ಕುಮಾರಸ್ವಾಮಿ-ಸಿದ್ದರಾಮಯ್ಯ.


ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಹೆಚ್‌.ಡಿ. ಕುಮಾರಸ್ವಾಮಿ ಸಹ, "ಈ ಹಿಂದೆ ಅನಗತ್ಯ ಸಂದರ್ಭದಲ್ಲಿ ದೇಶವನ್ನು ಲಾಕ್‌ಡೌನ್ ಮಾಡಿ, ಇದೀಗ ಸೋಂಕು ಅಧಿಕವಾಗುತ್ತಿರುವ ಸಂದರ್ಭದಲ್ಲಿ ಲಾಕ್‌ಡೌನ್ ತೆರವು ಮಾಡಿರುವುದು ಸರಿಯಲ್ಲ. ಇದರಿಂದ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ದ್ವಿಗುಣವಾಗುತ್ತಿದೆ. ವಾಣಿಜ್ಯ-ವಹಿವಾಟಿಗಿಂತಲೂ ಜನ ಆರೋಗ್ಯ ಮತ್ತು ಜೀವ ಮುಖ್ಯ" ಎಂದು ಆಗ್ರಹಿಸಿದ್ದರು

ಈ ಹಿನ್ನೆಲೆಯಲ್ಲಿ ಶನಿವಾರ ವಾಣಿಜ್ಯ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಸರ್ಕಾರಿ ಅಧಿಕಾರಿಗಳ ಜೊತೆಗೆ ಸರಣಿ ಸಭೆ ನಡೆಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಮುಂದಿನ ಮಂಗಳವಾರದಿಂದ ಒಂದು ವಾರಗಳ ಕಾಲ ಲಾಕ್‌ಡೌನ್‌ ಘೋಷಣೆ ಮಾಡುವ ನಿರ್ಧಾರಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರಕ್ಕೆ ತಜ್ಞರು ಮೆಚ್ಚುಗೆ ಸೂಚಿಸಿದ್ದಾರೆ.
Published by: MAshok Kumar
First published: July 13, 2020, 8:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading