ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ; ಇಂದು ಬರೋಬ್ಬರಿ 4,169 ಕೋವಿಡ್ ಕೇಸ್ ಪತ್ತೆ; ಬೆಂಗಳೂರಿನಲ್ಲಿ 2,344 ಸೋಂಕಿತರು!

Karnataka Coronavirus Updates: ಕರ್ನಾಟಕದಲ್ಲಿ ಇಂದು 4,169 ಹೊಸ ಕೊರೋನಾ ಕೇಸುಗಳು ಪತ್ತೆಯಾಗಿವೆ. ಇಂದು ಬೆಂಗಳೂರೊಂದರಲ್ಲೇ 2,344 ಕೊರೋನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿವೆ.

Sushma Chakre | news18-kannada
Updated:July 16, 2020, 8:22 PM IST
ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ; ಇಂದು ಬರೋಬ್ಬರಿ 4,169 ಕೋವಿಡ್ ಕೇಸ್ ಪತ್ತೆ; ಬೆಂಗಳೂರಿನಲ್ಲಿ 2,344 ಸೋಂಕಿತರು!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 16): ರಾಜ್ಯದಲ್ಲಿ ಕೊರೋನಾ ಕೇಸ್​ಗಳು ಹೆಚ್ಚಾಗಿರುವುದರಿಂದ ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಲಾಕ್​ಡೌನ್ ಘೋಷಿಸಲಾಗಿದೆ. ಆದರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಏರಿಕೆಯಾಗುತ್ತಲೇ ಇದೆ.ಕರ್ನಾಟಕದಲ್ಲಿ ಇಂದು ಮೊದಲ ಬಾರಿಗೆ ಕೊರೋನಾ ಸೋಂಕಿತರ ಸಂಖ್ಯೆ 4 ಸಾವಿರದ ಗಡಿ ದಾಟಿದೆ. ಬೆಂಗಳೂರೊಂದರಲ್ಲೇ 2,344 ಕೊರೋನಾ ಕೇಸ್​ಗಳು ಪತ್ತೆಯಾಗಿದೆ. ಬೆಂಗಳೂರಿನಲ್ಲಿ ಲಾಕ್​ಡೌನ್ ಘೋಷಿಸಿದ ಬಳಿಕ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಲವಾಗುತ್ತಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಕರ್ನಾಟಕದಲ್ಲಿ ಕಳೆದೊಂದು ವಾರದಿಂದ 2 ಸಾವಿರದ ಗಡಿಯಲ್ಲಿದ್ದ ಕೊರೋನಾ ಸೋಂಕಿತರ ಸಂಖ್ಯೆ ನಿನ್ನೆ 3 ಸಾವಿರದ ಗಡಿ ದಾಟಿತ್ತು. ಇಂದು ನಿನ್ನೆಗಿಂತ ಇನ್ನೂ 1 ಸಾವಿರ ಹೊಸ ಕೇಸ್​ಗಳು ಪತ್ತೆಯಾಗಿದೆ. ಈ ಮೂಲಕ ರಾಜ್ಯದ ಸೋಂಕಿತರ ಸಂಖ್ಯೆ 50 ಸಾವಿರದ ಗಡಿ ದಾಟಿದೆ.

ಕರ್ನಾಟಕದಲ್ಲಿ ಇಂದು 4,169 ಹೊಸ ಕೊರೋನಾ ಕೇಸುಗಳು ಪತ್ತೆಯಾಗಿವೆ. ಇಂದು ಬೆಂಗಳೂರೊಂದರಲ್ಲೇ 2,344 ಕೊರೋನಾ ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕರ್ನಾಟಕದ ಒಟ್ಟು ಸೋಂಕಿತರ ಸಂಖ್ಯೆ 51,422ಕ್ಕೆ ಏರಿಕೆಯಾಗಿವೆ. ಸದ್ಯಕ್ಕೆ 30,655 ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 1263 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ಇದುವರೆಗೂ ಒಟ್ಟಾರೆ 19,729 ರೋಗಿಗಳು ಡಿಸ್ಚಾರ್ಜ್ ಆದಂತಾಗಿದೆ. ಇಂದು ಕೊರೋನಾದಿಂದಾಗಿ 104 ರೋಗಿಗಳು ಸಾವನ್ನಪ್ಪುವ ಮೂಲಕ ರಾಜ್ಯದಲ್ಲಿ 1032 ರೋಗಿಗಳು ಕೊರೋನಾಗೆ ಬಲಿಯಾಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಪ್ರಯೋಗ: ಬೆಳ್ತಂಗಡಿಯಲ್ಲಿ ಕೊರೋನಾ ಸೋಂಕಿತರಿಗಾಗಿ ಪ್ರತ್ಯೇಕ ಆಸ್ಪತ್ರೆ

ಇಂದು ಬೆಂಗಳೂರಿನಲ್ಲಿ 2,344 ಕೊರೋನಾ ಕೇಸ್​ಗಳು ಪತ್ತೆಯಾಗುವ ಮೂಲಕ ಮತ್ತೊಮ್ಮೆ ಸಿಲಿಕಾನ್​ ಸಿಟಿಗೆ ಕೊರೋನಾ ಆಘಾತ ನೀಡಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಂಗಳವಾರ ರಾತ್ರಿಯಿಂದ ಬೆಂಗಳೂರಿನಲ್ಲಿ ಲಾಕ್​ಡೌನ್ ಘೋಷಿಸಿರುವ ಬೆನ್ನಲ್ಲೇ ಇಂದು ಬೆಂಗಳೂರಿನಲ್ಲಿ ದಾಖಲೆಯ ಕೊರೋನಾ ಕೇಸುಗಳು ಪತ್ತೆಯಾಗಿರುವುದು ಇನ್ನಷ್ಟು ಆತಂಕ ಮೂಡಿಸಿದೆ.

ಇಂದು ಬೆಂಗಳೂರಿನಲ್ಲಿ ಅತಿಹೆಚ್ಚು ಕೊರೋನಾ ಸೋಂಕಿತರ ಸಂಖ್ಯೆ ಪತ್ತೆಯಾಗಿದೆ. ಬೆಂಗಳೂರಿನಲ್ಲಿ 2,344, ದಕ್ಷಿಣ ಕನ್ನಡ- 238, ಧಾರವಾಡ- 176, ವಿಜಯಪುರ- 144, ಮೈಸೂರು- 130, ಕಲಬುರ್ಗಿ- 123 ಕೊರೋನಾ ಕೇಸುಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಇಂದು 70 ರೋಗಿಗಳು ಕೊರೋನಾದಿಂದಾಗಿ ಸಾವನ್ನಪ್ಪಿದ್ದಾರೆ.
Published by: Sushma Chakre
First published: July 16, 2020, 8:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading