ಬಿ.ಎಸ್. ಯಡಿಯೂರಪ್ಪಗೂ ಕೊರೋನಾ ಭೀತಿ; ಸಿಎಂ ಮನೆ, ಗೃಹ ಕಚೇರಿಯ 10 ಸಿಬ್ಬಂದಿಗೆ ಸೋಂಕು ಪತ್ತೆ

CM BS Yediyurappa: ಮುಖ್ಯಮಂತ್ರಿ ಯಡಿಯೂರಪ್ಪನವರ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್, ಇಬ್ಬರು ಎಸ್ಕಾರ್ಟ್​, ಧವಳಗಿರಿ ನಿವಾಸದಲ್ಲಿ ಅಡುಗೆ ಮಾಡುವವನಿಗೆ, ಒಬ್ಬ ಕಾರು ಚಾಲಕನಿಗೆ ಸೇರಿ ಒಟ್ಟು 10 ಜನರಿಗೆ ಕೊರೋನಾ ಸೋಂಕು ಹರಡಿದೆ.

news18-kannada
Updated:July 10, 2020, 11:44 AM IST
ಬಿ.ಎಸ್. ಯಡಿಯೂರಪ್ಪಗೂ ಕೊರೋನಾ ಭೀತಿ; ಸಿಎಂ ಮನೆ, ಗೃಹ ಕಚೇರಿಯ 10 ಸಿಬ್ಬಂದಿಗೆ ಸೋಂಕು ಪತ್ತೆ
ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಜು. 10): ಬೆಂಗಳೂರಿನಲ್ಲಿ ಪ್ರತಿದಿನ 1 ಸಾವಿರಕ್ಕೂ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಕೊರೋನಾ ಆತಂಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನೂ ಬಿಟ್ಟಿಲ್ಲ. ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮತ್ತಿಬ್ಬರು ಸಿಬ್ಬಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿಯ ಟೆಲಿಫೋನ್ ಆಪರೇಟರ್, ಇಬ್ಬರು ಎಸ್ಕಾರ್ಟ್​, ಧವಳಗಿರಿ ನಿವಾಸದಲ್ಲಿ ಅಡುಗೆ ಮಾಡುವವನಿಗೆ, ಒಬ್ಬ ಕಾರು ಚಾಲಕನಿಗೆ ಸೇರಿ ಸಿಎಂ ಯಡಿಯೂರಪ್ಪ ಸುತ್ತಮುತ್ತಲಿರುವ ಒಟ್ಟು 10 ಜನರಿಗೆ ಕೊರೋನಾ ಸೋಂಕು ಹರಡಿದೆ. ಈ ಹಿನ್ನೆಲೆಯಲ್ಲಿ ಸಿಎಂ ಗೃಹ ಕಚೇರಿ ಕೃಷ್ಣಾ, ಕಾವೇರಿ ನಿವಾಸವನ್ನು ಸ್ಯಾನಿಟೈಸ್ ಮಾಡಲಾಗಿದೆ.

ಇದನ್ನೂ ಓದಿ: Coronavirus Updates Bangalore: ಕೊರೋನಾ ನಿಯಂತ್ರಿಸುವಲ್ಲಿ ಬಿಬಿಎಂಪಿ ಸಂಪೂರ್ಣ ವಿಫಲ; ಆಕ್ರೋಶ ಹೊರಹಾಕಿದ ದಿನೇಶ್​ ಗುಂಡೂರಾವ್ ಹೆಂಡತಿ

ಬೆಂಗಳೂರಿನಲ್ಲಿರುವ ಸಿಎಂ ಗೃಹ ಕಚೇರಿ ಕೃಷ್ಣಾ ಕಚೇರಿಯಲ್ಲಿ ಇಂದು ಮತ್ತಿಬ್ಬರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ, ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧಕ್ಕೆ ಹೋಗದೆ ಮನೆಯಲ್ಲೇ ಇರಲು ನಿರ್ಧರಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ನಿವೃತ್ತಿ ಹೊಂದಿದ ವಿಧಾನ ಪರಿಷತ್ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮವಿತ್ತು. ಆದರೆ, ಆ ಕಾರ್ಯಕ್ರಮಕ್ಕೆ‌ ತೆರಳದೇ ಯಡಿಯೂರಪ್ಪ ಮನೆಯಲ್ಲೇ ಉಳಿದುಕೊಂಡಿದ್ದಾರೆ.

ಇಂದು ಇಡೀ ದಿನ ಕಾವೇರಿ ನಿವಾಸದಲ್ಲಿ ಉಳಿಯಲಿರುವ ಸಿಎಂ ಯಡಿಯೂರಪ್ಪ ಯಾವುದೇ ಸಭೆಗಳನ್ನು ಮಾಡದೆ ಇರಲು ನಿರ್ಧರಿಸಿದ್ದಾರೆ. ಕೊರೋನಾ ಪಾಸಿಟಿವ್​ನಿಂದ ಸಿಎಂ ಗೆ ಆತಂಕ ಶುರುವಾಗಿದೆ. ಸಿಎಂ ಕಾವೇರಿ ನಿವಾಸ, ಖಾಸಗಿ ನಿವಾಸ ಧವಳಗಿರಿ ಹಾಗೂ ಸಿಎಂ ಕಚೇರಿಯಲ್ಲೂ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಸಿಎಂ ಚೇರಿಗಳ ಒಟ್ಟು 10 ಜನರಿಗೆ ಕೊರೋನಾ ಪಾಸಿಟಿವ್ ಬಂದಿದೆ.

 
Published by: Sushma Chakre
First published: July 10, 2020, 11:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading