Karnataka Coronavirus: ಕರ್ನಾಟಕದಲ್ಲಿ ಸಮುದಾಯಕ್ಕೆ ಹರಡೇಬಿಟ್ಟಿತು ಕೊರೋನಾ; 9,352 ರೋಗಿಗಳ ಸೋಂಕಿನ ಮೂಲ ಇನ್ನೂ ನಿಗೂಢ!

Coronavirus Karnataka Updates: ಕರ್ನಾಟಕದಲ್ಲಿ ಬರೋಬ್ಬರಿ 9,352 ಕೊರೋನಾ ಸೋಂಕಿತರ ಸೋಂಕಿನ ಮೂಲ ಇದುವರೆಗೂ ಪತ್ತೆಯಾಗಿಲ್ಲ. ಈ ರೀತಿ ಸೋಂಕಿನ ಮೂಲ ತಿಳಿಯದೇ ಇರುವುದೇ ಸಮುದಾಯಕ್ಕೆ ಹರಡುವಿಕೆಯ ಲಕ್ಷಣ.

news18-kannada
Updated:July 6, 2020, 11:11 AM IST
Karnataka Coronavirus: ಕರ್ನಾಟಕದಲ್ಲಿ ಸಮುದಾಯಕ್ಕೆ ಹರಡೇಬಿಟ್ಟಿತು ಕೊರೋನಾ; 9,352 ರೋಗಿಗಳ ಸೋಂಕಿನ ಮೂಲ ಇನ್ನೂ ನಿಗೂಢ!
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 6): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ವಿಪರೀತ ಹೆಚ್ಚಾಗುತ್ತಿದೆ. ಬೆಂಗಳೂರು ಕೊರೋನಾ ಹಾಟ್​ಸ್ಪಾಟ್​ ಆಗಿ ಬದಲಾಗಿದ್ದು, ಪ್ರತಿದಿನ 1 ಸಾವಿರಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗುತ್ತಿವೆ. ಕರ್ನಾಟಕದಲ್ಲಿ ಕೊರೋನಾ ಇನ್ನೂ ಸಮುದಾಯಕ್ಕೆ ಹರಡಿಲ್ಲ ಎಂದು ರಾಜ್ಯ ಸರ್ಕಾರ ತೇಪೆ ಹಚ್ಚುವ ಕಾರ್ಯ ಮಾಡುತ್ತಿದ್ದರೂ ಕರ್ನಾಟಕದಲ್ಲಿ ಕೊರೋನಾ ಕಮ್ಯುನಿಟಿಗೆ ಹರಡಿರುವುದು ಖಚಿತವಾಗಿದೆ.

ಕರ್ನಾಟಕದಲ್ಲಿ 2-3 ದಿನಗಳಿಂದ 1 ಸಾವಿರಕ್ಕೂ ಅಧಿಕ ಕೊರೋನಾ ಸೋಂಕಿತ ಪ್ರಕರಣಗಳು ವರದಿಯಾಗುತ್ತಿವೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,925 ಕೊರೋನಾ ಕೇಸ್​ಗಳು ದಾಖಲಾಗಿವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ರಾಜ್ಯದಲ್ಲಿ ಬರೋಬ್ಬರಿ 9,352 ಕೊರೋನಾ ಸೋಂಕಿತರ ಸೋಂಕಿನ ಮೂಲ ಇದುವರೆಗೂ ಪತ್ತೆಯಾಗಿಲ್ಲ. ಹೀಗೆ ಯಾವುದೇ ಮೂಲಗಳಿಲ್ಲದ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಇದನ್ನೂ ಓದಿ: Karnataka Rain: ಕರ್ನಾಟಕದಲ್ಲಿ ಇನ್ನೈದು ದಿನ ಭಾರೀ ಮಳೆ; ಮಲೆನಾಡು, ಕರಾವಳಿ, ಕೊಡಗು, ಬೆಳಗಾವಿಯಲ್ಲಿ ಯೆಲ್ಲೋ ಅಲರ್ಟ್​

ಈ ರೀತಿ ಸೋಂಕಿನ ಮೂಲ ತಿಳಿಯದೇ ಇರುವುದೇ ಸಮುದಾಯಕ್ಕೆ ಹರಡುವಿಕೆಯ ಲಕ್ಷಣ. ಮನೆಯಲ್ಲೇ ಇದ್ದು, ಎಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡವರಲ್ಲೂ ಕಾಣಿಸಿಕೊಳ್ಳುತ್ತಿದೆ ಕೊರೋನಾ. ಕರ್ನಾಟಕದಲ್ಲಿ ಇದುವರೆಗೂ 23,474 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇವರಲ್ಲಿ ರೋಗಲಕ್ಷಣ ಇಲ್ಲದವರ ಸಂಖ್ಯೆ 9,352. ಸೋಂಕಿತರ ಪೈಕಿ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪ್ರಯಾಣದ ಹಿನ್ನೆಲೆ ಇರುವವರ ಸಂಖ್ಯೆ 6,903.

ಸೋಂಕಿತರ ಸಂಪರ್ಕಕ್ಕೆ ಬಂದವರು 4,293, ಐಎಲ್ಐ ಸೋಂಕಿತರು 1,900, ಸಾರಿ ಸೋಂಕಿತರು 449, ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಇರುವವರು 577. ಹೀಗಾಗಿ, ಸರ್ಕಾರ ಒಪ್ಪಿಕೊಳ್ಳದಿದ್ದರೂ ಕರ್ನಾಟಕದಲ್ಲಿ ಕೊರೋನಾ ಸಮುದಾಯಕ್ಕೆ ಹರಡಿರುವುದು ಖಚಿತ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
Published by: Sushma Chakre
First published: July 6, 2020, 11:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading