• Home
  • »
  • News
  • »
  • coronavirus-latest-news
  • »
  • ಪಾದರಾಯನಪುರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್‌; ಪ್ರಕರಣಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ

ಪಾದರಾಯನಪುರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಕೇಸ್‌; ಪ್ರಕರಣಗಳು ಮತ್ತಷ್ಟು ಹೆಚ್ಚುವ ಸಾಧ್ಯತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bangalore Coronavirus Updates: ಪಾದರಾಯನಪುರ 10ನೇ ಕ್ರಾಸ್ ನಲ್ಲಿ ವಾಸವಿದ್ದ ವ್ಯಕ್ತಿಯಲ್ಲಿ ಈ ಹಿಂದೆಯೇ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಆದರೆ, ಇಂದು ಆತನ ಪತ್ನಿ ಸೇರಿದದಂತೆ ಇನ್ನೂ ಇಬ್ಬರಿಗೆ ಪಾಸಿಟಿವ್ ಬಂದಿರುವುದು ಇದೀಗ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ.

ಮುಂದೆ ಓದಿ ...
  • Share this:

ಬೆಂಗಳೂರು (ಮೇ 08); ಚಾಮರಾಜಪೇಟೆ ಪಾದರಾಯನಪುರದಲ್ಲಿ ಮತ್ತೊಂದು ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಕೊರೋನಾ ಭೀತಿಯಿಂದಾಗಿ ಈಗಾಗಲೇ ಸೀಲ್‌ಡೌನ್ ಆಗಿರುವ ಪಾದರಾಯನಪುರದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬರಲಿದೆ ಎನ್ನಲಾಗುತ್ತಿದೆ. ಪಾದರಾಯನಪುರ 10ನೇ ಕ್ರಾಸ್ ನಲ್ಲಿ ವಾಸವಿದ್ದ ವ್ಯಕ್ತಿಯಲ್ಲಿ ಈ ಹಿಂದೆಯೇ ಕೊರೋನಾ ಪಾಸಿಟಿವ್ ಪತ್ತೆಯಾಗಿತ್ತು. ಈತ ಈ ಹಿಂದೆ ಪಾದರಾಯನಪುರದಲ್ಲಿ ಆರೋಗ್ಯ ಕಾರ್ಯಕರ್ತರ ವಿರುದ್ಧ ನಡೆದ ಗಲಾಟೆಯಲ್ಲಿ ಭಾಗಿಯಾಗಿದ್ದ ಎನ್ನಲಾಗುತ್ತಿದೆ.


ಆದರೆ, ಇಂದು ಆತನ ಪತ್ನಿ ಸೇರಿದದಂತೆ ಇನ್ನೂ ಇಬ್ಬರಿಗೆ ಪಾಸಿಟಿವ್ ಬಂದಿರುವುದು ಇದೀಗ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ತಲೆನೋವಿನ ಸಂಗತಿಯಾಗಿದೆ.


ಇತ್ತೀಚಿನ ದಿನಗಳಲ್ಲಿ ಪಾದರಾಯನಪುರ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಹೆಸರು. ಈ ಹಿಂದೆ ಕೊರೋನಾ ಸೋಂಕಿತರನ್ನು ಕ್ವಾರಂಟೈನ್ ಮಾಡಲು ಆಗಮಿಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿಗಳ ವಿರುದ್ಧ ಇಲ್ಲಿನ ಸ್ಥಳೀಯರು ಹಲ್ಲೆಗೆ ಮುಂದಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 120ಕ್ಕೂ ಹೆಚ್ಚು ಜನರನ್ನು ಬಂಧಿಸಿ ರಾಮನಗರ ಜೈಲಿನಲ್ಲಿ ಇಡಲಾಗಿತ್ತು.


ಆದರೆ, ಬಂಧಿತರಲ್ಲೂ ಕೆಲವರಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಅವರನ್ನು ಮತ್ತೆ ಬೆಂಗಳೂರಿನ ಹಜ್‌ ಭವನಕ್ಕೆ ಸ್ಥಳಾಂತರಿಸಲಾಗಿತ್ತು. ಈ ನಡುವೆ ಮತ್ತೆ ಮತ್ತೆ ಪಾದರಾಯನಪುರದಲ್ಲೇ ಹೆಚ್ಚು ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿರುವುದು ಇಲ್ಲಿನ ನಿವಾಸಿಗಳಲ್ಲೂ ಆತಂಕಕ್ಕೆ ಕಾರಣವಾಗಿದೆ.


ಇದನ್ನೂ ಓದಿ : ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆ; ಕುಡಿದ ಅಮಲಿನಲ್ಲಿ ಕೊಲೆಯಾದ ರೌಡಿಶೀಟರ್‌

Published by:MAshok Kumar
First published: