ಬೆಂಗಳೂರು (ಜು. 8): ರಾಜ್ಯದಲ್ಲಿ ಕೊರೋನಾ ಆತಂಕ ಯಾರನ್ನೂ ಬಿಟ್ಟಿಲ್ಲ. ಜನರ ಸುರಕ್ಷತೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಇಲಾಖೆಯಲ್ಲೂ ಕೊರೋನಾ ಆತಂಕ ಹೆಚ್ಚಾಗಿದೆ. ಈಗಾಗಲೇ ರಾಜ್ಯಾದ್ಯಂತ ಎಲ್ಲ ಪೊಲೀಸರಿಗೂ ಕೊರೋನಾ ತಪಾಸಣೆ ಮಾಡಲಾಗುತ್ತಿದೆ. ಇದರ ನಡುವೆ ಬೆಂಗಳೂರಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತೊಂದು ಎಡವಟ್ಟು ಮಾಡಿದ್ದಾರೆ. ಆ ಒಂದು ಎಡವಟ್ಟಿನಿಂದ ಮನೆ ಮಂದಿಗೆಲ್ಲಾ ಈಗ ಕೊರೋನಾ ಸೋಂಕಿನ ಭಯ ಶುರುವಾಗಿದೆ.
ಬೆಂಗಳೂರಿನ ಚಾಮರಾಜಪೇಟೆ ಕಾನ್ಸ್ಟೇಬಲ್ಗೆ ಜೂನ್ 26 ರಂದು ಕೊರೋನಾ ಪಾಸಿಟಿವ್ ಬಂದಿತ್ತು. ಕೂಡಲೇ ಸೋಂಕಿತ ಪೊಲೀಸ್ ಕಾನ್ಸ್ಟೇಬಲ್ ಅವರನ್ನು ರವಿಶಂಕರ್ ಗುರೂಜಿ ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲು ಮಾಡಲಾಗಿತ್ತು. ಅಲ್ಲಿಯೇ ಚಿಕಿತ್ಸೆ ಸಹ ನೀಡಲಾಗಿತ್ತು. ಇದಾದ ಬಳಿಕ ಜುಲೈ 3ರಂದು ಕೋವಿಡ್ ಕೇರ್ ಸೆಂಟರ್ ಪೊಲೀಸ್ ಪೇದೆಯನ್ನು ಬಿಡುಗಡೆ ಸಹ ಮಾಡಲಾಗಿತ್ತು. ಆದರೆ, ಇಲ್ಲಿ ಆರೋಗ್ಯ ಅಧಿಕಾರಿಗಳು ಆತನನ್ನು ಮನೆಗೆ ಕಳಿಸುವ ಮುನ್ನ ಕೊರೋನಾ ತಪಾಸಣೆ ಸಹ ಮಾಡಿಲ್ಲ. ಬದಲಾಗಿ ನಿಮಗೆ ಯಾವುದೇ ಸೋಂಕಿನ ಲಕ್ಷಣಗಳಿಲ್ಲ, ಆರಾಮಾಗಿ ಮನೆಗೆ ಹೋಗಿ ಎಂದು ಹೇಳಿ ಕಳುಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ