news18-kannada Updated:June 27, 2020, 4:15 PM IST
ಪೊಲೀಸ್ ಆಯುಕ್ತ ಭಾಸ್ಕರ್ ರಾವ್
ಬೆಂಗಳೂರು (ಜೂನ್ 27); ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಹೋಟೆಲ್, ಮಾಲ್, ಶಾಪ್ ಮತ್ತು ಅಂಗಡಿ ಮಾಲೀಕರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ನಿಯಂತ್ರಣಕ್ಕಾಗಿ ರಾಷ್ಟ್ರಾದ್ಯಂತ ಲಾಕ್ಡೌನ್ ಘೋಷಣೆ ಮಾಡಲಾಗಿತ್ತು. ಇದೀಗ ಲಾಕ್ಡೌನ್ ಹಂತಹಂತವಾಗಿ ಸಡಿಲಗೊಳಿಸಲಾಗಿದ್ದು, ಹೋಟೆಲ್, ಮಾಲ್, ಶಾಪ್ ಹಾಗೂ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಆದರೆ, ಲಾಕ್ಡೌನ್ ಸಡಿಲಿಕೆಯಾದ ನಂತರ ಬೆಂಗಳೂರಿನಂತಹ ಮಹಾ ನಗರದಲ್ಲಿ ಕೊರೋನಾ ಸೋಂಕು ದಿನೇ ದಿನೇ ಅಧಿಕವಾಗುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಬೆಂಗಳೂರು ನಗರ ಆಯುಕ್ತ ಭಾಸ್ಕರ್ ರಾವ್, "ಎಲ್ಲಾ ಹೋಟೆಲ್, ಮಾಲ್, ಶಾಪ್, ಬ್ಯಾಂಕ್, ಅಂಗಡಿಗಳಿಗೆ ಭೇಟಿ ನೀಡುವವರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಅಕಸ್ಮಾತ್ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ, ಪೊಲೀಸರು ಶಾಪ್ ಗಳ ಮೇಲೆ ರೈಡ್ ಮಾಡುತ್ತಾರೆ. ಅಲ್ಲದೆ, ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : Petrol Price: ಪೆಟ್ರೋಲ್, ಡಿಸೇಲ್ ನಿರಂತರ ದರ ಏರಿಕೆ; ಕಾಂಗ್ರೆಸ್ ಕಾರ್ಯಕರ್ತರಿಂದ ಬೈಕ್ ಶವಯಾತ್ರೆ ನಡೆಸಿ ಪ್ರತಿಭಟನೆ
ಪೊಲೀಸರು ಈಗಾಗಲೇ ಮುನ್ನೆಚ್ಚರಿಕೆ ತೆಗೆದುಕೊಳ್ಳದ ಅಂಗಡಿ ಮುಗ್ಗಟ್ಟುಗಳನ್ನು ರೈಡ್ ಮಾಡಿದ್ದಾರೆ. ಅಲ್ಲದೆ, ಮಾಸ್ಕ್ ಧರಿಸದೆ ರಸ್ತೆಯಲ್ಲಿ ಓಡಾಡುವವರಿಗೂ ದಂಡ ವಿಧಿಸಲಾಗುತ್ತಿದೆ.
First published:
June 27, 2020, 3:57 PM IST