HOME » NEWS » Coronavirus-latest-news » BANGALORE CORONAVIRUS BENGALURU PEOPLE SHOPPING FOR UGADI FESTIVAL 2021 IN KR MARKET WITHOUT WEARING MASK SCT

Ugadi 2021: ಯುಗಾದಿ ಹಿನ್ನೆಲೆ ಕೆ.ಆರ್​. ಮಾರ್ಕೆಟ್​ನಲ್ಲಿ ಜನಸಾಗರ; ಮಾಸ್ಕ್ ಹಾಕದವರ ಮೇಲೆ ಮಾರ್ಷಲ್​ಗಳ ಹದ್ದಿನ ಕಣ್ಣು

Bangalore Coronavirus | ಬೆಂಗಳೂರಿನ ಕೆ.ಆರ್​. ಮಾರ್ಕೆಟ್​ನಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹೂವು, ಹಣ್ಣು,‌ ತರಕಾರಿ ಖರೀದಿಸಲು ಮುಗಿಬಿದ್ದ ಜನರು ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿದ್ದಾರೆ.

news18-kannada
Updated:April 13, 2021, 8:43 AM IST
Ugadi 2021: ಯುಗಾದಿ ಹಿನ್ನೆಲೆ ಕೆ.ಆರ್​. ಮಾರ್ಕೆಟ್​ನಲ್ಲಿ ಜನಸಾಗರ; ಮಾಸ್ಕ್ ಹಾಕದವರ ಮೇಲೆ ಮಾರ್ಷಲ್​ಗಳ ಹದ್ದಿನ ಕಣ್ಣು
ಕೆ.ಆರ್. ಮಾರುಕಟ್ಟೆ
  • Share this:
ಬೆಂಗಳೂರು (ಏ. 13): ಬೆಂಗಳೂರಿನಲ್ಲಿ ಇಂದು ಯುಗಾದಿ ಹಬ್ಬದ ಸಂಭ್ರಮ ಜೋರಾಗಿದೆ. ಮುಂಜಾನೆಯಿಂದಲೇ ಕೆ.ಆರ್​. ಮಾರುಕಟ್ಟೆಯಲ್ಲಿ ಹಣ್ಣು, ಹೂವು, ತರಕಾರಿಗಳ ಖರೀದಿಗೆ ಜನರು ಜಮಾಯಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಸಂಖ್ಯೆ ಹೆಚ್ಚಳವಾಗಿದ್ದು, ಕೆ.ಆರ್​. ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿರುವುದರಿಂದ ಕೊರೊನಾ ಸೋಂಕಿಗೆ ಆಹ್ವಾನ ನೀಡಿದಂತಾಗಿದೆ. ಹೀಗಾಗಿ, ಕೆ.ಆರ್. ಮಾರ್ಕೆಟ್​ನಲ್ಲಿ ಮಾರ್ಷಲ್​ಗಳು ಕೊರೋನಾ ನಿಯಮಗಳನ್ನು ಮೀರುವ ಜನರ ಮೇಲೆ ನಿಗಾ ವಹಿಸಿದ್ದಾರೆ.

ಕೆ.ಆರ್​. ಮಾರ್ಕೆಟ್​ನಲ್ಲಿ ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಹೂವು, ಹಣ್ಣು,‌ ತರಕಾರಿ ಖರೀದಿಸಲು ಮುಗಿಬಿದ್ದ ಜನರು ಮಾಸ್ಕ್, ಸಾಮಾಜಿಕ ಅಂತರವಿಲ್ಲದೆ ಓಡಾಡುತ್ತಿದ್ದಾರೆ. ಹಬ್ಬಕ್ಕೆ ಖರೀದಿ ಮಾಡಲು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಕೆಟ್​ಗೆ ಆಗಮಿಸಿದ ಸಾಮಾಜಿಕ ಅಂತರವಿಲ್ಲದೆ ಒಬ್ಬರಿಗೊಬ್ಬರು ಮುಟ್ಟಿಕೊಂಡು ಓಡಾಡುತ್ತಿದ್ದಾರೆ.

ಮಾರುಕಟ್ಟೆ, ಸಭೆ, ಸಮಾರಂಭಗಳಲ್ಲಿ ಜನರು ಹೆಚ್ಚಾಗಿ ಸೇರುತ್ತಿದ್ದು, ಕೊರೊನಾ ಕೇಸ್ ನಲ್ಲಿ ಸಿಲಿಕಾನ್ ಸಿಟಿಯದ್ದೇ ಸಿಂಹಪಾಲಾಗಿದೆ. ಹೀಗಾಗಿ, ಕೆ‌.ಆರ್‌ ಮಾರ್ಕೆಟ್‌ನಲ್ಲಿ ಮಾರ್ಷಲ್​ಗಳು ಫೀಲ್ಡ್​ಗೆ ಇಳಿದಿದ್ದಾರೆ. ಮಾಸ್ಕ್ ಹಾಕದವರ ಮೇಲೆ ದಂಡ ಹಾಕುತ್ತಿದ್ದಾರೆ. ದಂಡ ಹಾಕುವ ಬಗ್ಗೆ ಮಾರ್ಷಲ್​ಗಳ ಜೊತೆ ಜನರ ವಾಗ್ವಾದ ನಡೆಯುತ್ತಿದ್ದು, ಮಾಸ್ಕ್ ಹಾಕಕ ಕಾರಣ ಓರ್ವ ವ್ಯಕ್ತಿಯನ್ನು ಮಾರ್ಷಲ್ ಹಿಡಿದಿದ್ದಾರೆ. ದಂಡ ಕಟ್ಟಿ ಎಂದು ಸೂಚನೆ ನೀಡಿದರೂ ದಂಡ ಕಟ್ಟದೆ ಅಲ್ಲಿಂದ ಕಾಲ್ಕಿತ್ತ ವ್ಯಕ್ತಿ ದಂಡ ಕಟ್ಟುವಂತೆ ಮಾರ್ಷಲ್ ಹಿಂಬಾಲಿಸಿದರೂ ಮುಂದೆ‌ ಹೋಗುತ್ತಲೇ ಕರ್ಚೀಫ್ ಮುಖಕ್ಕೆ ಕಟ್ಟಿಕೊಂಡು ತಪ್ಪಿಸಿಕೊಂಡು ಓಡಿ ಹೋಗಿದ್ದಾನೆ.

ನಗರದಲ್ಲಿ ಕೋವಿಡ್ ಹರಡುವಿಕೆ ಪ್ರತಿನಿತ್ಯ ಏಳು ಸಾವಿರದ ಗಡಿ ದಾಟಿದೆ. ತಾಂತ್ರಿಕ ಸಲಹಾ ಸಮಿತಿ ಕೊಟ್ಟಿರುವ ಸಲಹೆ ಪ್ರಕಾರ ಏಪ್ರಿಲ್ ಅಂತ್ಯಕ್ಕೆ ನಗರದಲ್ಲಿ ಸೋಂಕು ಅನೂಹ್ಯವಾಗಿ ದಾಖಲಾಗಲಿದ್ದು, ಮತ್ತೊಮ್ಮೆ ಲಾಕ್ ಡೌನ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಬಿಬಿಎಂಪಿ ಸಭೆ ನಡೆಸಿ ತಂತ್ರ ರೂಪಿಸುತ್ತಿದೆ.
Published by: Sushma Chakre
First published: April 13, 2021, 8:43 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories