ಕ್ವಾರಂಟೈನ್ ನಿಯಮ ಪಾಲಿಸಿದರೂ ದಂಡ ತಪ್ಪಿಲ್ಲ; ಬೆಂಗಳೂರಿನವರಿಗೆ ಹೊಸ ಸಮಸ್ಯೆ

Bengaluru Coronavirus: ಎಫ್ಐಆರ್ ರಗಳೆ ತಪ್ಪಿಸಿಕೊಳ್ಳೋಕೆ ಮಾತಾಡದೇ ಫೈನ್ ಕಟ್ಟುತ್ತಿರುವ ಅನೇಕರು ರಾಜಧಾನಿಯಲ್ಲಿದ್ದಾರೆ. 14 ದಿನಗಳ ಕ್ವಾರಂಟೈನ್ ಮುಗಿದ ಮೇಲೂ ಹೊರಗೆ ಓಡಾಡಲು ಹೆದರುವಂತ ಪರಿಸ್ಥಿತಿ ಎದುರಾಗಿದೆ. ಅವಧಿ ಮುಗಿದಿದೆ ಎಂದು ನಿರೂಪಿಸಲು ಜನರ ಬಳಿ ಯಾವುದೇ ಸಾಕ್ಷಿ ಇಲ್ಲ.‌

news18-kannada
Updated:August 7, 2020, 11:14 AM IST
ಕ್ವಾರಂಟೈನ್ ನಿಯಮ ಪಾಲಿಸಿದರೂ ದಂಡ ತಪ್ಪಿಲ್ಲ; ಬೆಂಗಳೂರಿನವರಿಗೆ ಹೊಸ ಸಮಸ್ಯೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಆ. 7): ಮೊದಲೆಲ್ಲ ಕ್ವಾರಂಟೈನ್​ ನಿಯಮ ಉಲ್ಲಂಘನೆ ಮಾಡಿದರೆ ಮಾತ್ರ ದಂಡ ವಿಧಿಸಲಾಗುತ್ತಿತ್ತು. ಆದರೆ, ಈಗ ಕ್ವಾರಂಟೈನ್ ನಿಯಮ ಪಾಲಿಸಿದರೂ ಫೈನ್ ಬೀಳುತ್ತದೆ. ಎಲ್ಲಾ ನಿಯಮ ಫಾಲೋ ಮಾಡಿದರೂ ತಪ್ಪು ನಿಮ್ಮದೇ ಎನ್ನುತ್ತಾರೆ ಪೋಲೀಸರು ಹಾಗೂ ಬಿಬಿಎಂಪಿ. ಇಂತಹ ಅವ್ಯವಸ್ಥೆಗಳಿಂದ ಸಾಮಾನ್ಯ ಜನ ಪರದಾಡುವಂತಹ ಪರಿಸ್ಥಿತಿ ಬಂದಿದೆ. ಹೀಗೆ ಯಾಕೆ ಆಗುತ್ತಿದೆ? ಇಲ್ಲಿದೆ ಫುಲ್ ಡೀಟೆಲ್ಸ್...

ನಿಮ್ಮ ಸಿಸ್ಟಮ್ ನಲ್ಲಿ ಅಪ್ಡೇಟ್ ಆಗಿಲ್ಲ ಅಂದ್ರೆ ತಪ್ಪು ನಮ್ಮದಾ? ಹೀಗಂತ ಕೇಳ್ತಿದ್ದಾರೆ ಬೆಂಗಳೂರು ಜನ. ಕ್ವಾರಂಟೈನ್ ವಿಚಾರದಲ್ಲಂತೂ ಬೆಂಗಳೂರಿಗರದ್ದು ಮುಗಿಯದ ರಗಳೆ ಎನ್ನುವಂತಾಗಿದೆ. ಇದಕ್ಕೆ ಉದಾಹರಣೆ ಗಿರಿನಗರದ ಒಬ್ಬ ನಿವಾಸಿ. ಇವರ ಸಹೋದ್ಯೋಗಿಗೆ ಸೋಂಕು ತಗುಲಿದ್ದಕ್ಕೆ ಆಫೀಸಿನ ಎಲ್ಲರೂ ಕ್ವಾರಂಟೈನ್ ನಲ್ಲಿ ಇರುವಂತೆ ತಿಳಿಸಲಾಗಿತ್ತು. 14 ದಿನ ಕ್ವಾರಂಟೈನ್ ಅವಧಿ ಮುಗಿದಿದ್ದಕ್ಕೆ ಮರಳಿ ಕೆಲಸಕ್ಕೆ ಹೋಗಿದ್ದರು. ಆದರೆ ಮನೆಯಿಂದ ಹೊರಹೋದ ಆರೋಪದಲ್ಲಿ ದಂಡ ಕಟ್ಟಿ ಎಂದು ಇವರಿಗೆ ಕರೆ ಬಂದಿತ್ತು. ಗಾಬರಿಯಾದ ಈ ವ್ಯಕ್ತಿಗೆ 14 ದಿನದ ಕ್ವಾರಂಟೈನ್ ಮುಗಿದಿದೆ ಎಂದು ನಿರೂಪಿಸಲು ಯಾವುದೇ ಸಾಕ್ಷಿ ಇರಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ಫೈನ್ ಕಟ್ಟಿ ಬಂದಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನ ಮಹಿಳೆಯ ಮೊಬೈಲ್ ಹ್ಯಾಕ್; ವಾಟ್ಸಾಪ್​ನಲ್ಲಿ ಸ್ನೇಹಿತರಿಗೆ ಅಶ್ಲೀಲ ಫೋಟೋ ರವಾನೆ

ಇನ್ನು ಎಫ್ಐಆರ್ ರಗಳೆ ತಪ್ಪಿಸಿಕೊಳ್ಳೋಕೆ ಮಾತಾಡದೇ ಫೈನ್ ಕಟ್ಟುತ್ತಿರುವ ಅನೇಕರು ರಾಜಧಾನಿಯಲ್ಲಿದ್ದಾರೆ. 14 ದಿನಗಳ ಕ್ವಾರಂಟೈನ್ ಮುಗಿದ ಮೇಲೂ ಹೊರಗೆ ಓಡಾಡಲು ಹೆದರುವಂತ ಪರಿಸ್ಥಿತಿ ಎದುರಾಗಿದೆ. ಅವಧಿ ಮುಗಿದಿದೆ ಎಂದು ನಿರೂಪಿಸಲು ಜನರ ಬಳಿ ಯಾವುದೇ ಸಾಕ್ಷಿ ಇಲ್ಲ.‌ ಫೋನ್ ಟ್ರೇಸಿಂಗ್ ಮೂಲಕ ಅವರು ಮನೆಯಿಂದ ಹೊರಗೆ ಹೋಗಿ ಓಡಾಡಿದ್ದಾರೆ ಎಂದು ತಿಳಿದು ಫೈನ್ ಹಾಕುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಫೈನ್ ಕಟ್ಟದಿದ್ದರೆ ಮುಂದಿನ ಹಂತವಾಗಿ ಎಫ್ಐಆರ್ ಆಗುವ ಸಾಧ್ಯತೆ ಇರುತ್ತದೆ.ಬಈಗಾಗಲೇ ಬೆಂಗಳೂರಿನಲ್ಲಿ ನೂರಾರು ಜನರ ಮೇಲೆ ಕ್ವಾರಂಟೈನ್ ನಿಯಮ ಮೀರಿದ್ದಕ್ಕೆ ಎಫ್ಐಆರ್ ದಾಖಲಾಗಿದೆ. ಈ ಭಯಕ್ಕೆ ಅನೇಕರು ಪ್ರಶ್ನಿಸದೆ ಫೈನ್ ಕಟ್ಟಿ ಸುಮ್ಮನಾಗುತ್ತಿದ್ದಾರೆ.

ಆದರೆ, ದಂಡ ಕಟ್ಟಿದರೆ ಅದರರ್ಥ ತಾವು ಮಾಡದ ತಪ್ಪನ್ನು ಒಪ್ಪಿಕೊಂಡಂತೆ ಎನ್ನುವ ಬೇಸರದಲ್ಲಿದ್ದಾರೆ ಈ ಅಮಾಯಕರು. ಸಾವಿರ ರೂ. ಫೈನ್ ಕಟ್ಟಿ ಮಾಡದ ತಪ್ಪನ್ನು ಒಪ್ಪಿಕೊಳ್ಳುವ ದುಸ್ಥಿತಿ ಎದುರಾಗಿರುವುದು ದುರಂತ. ಒಂದು ಕಡೆ ಬಿಬಿಎಂಪಿ ಕೈಯಿಂದ ತಪ್ಪಿಸಿಕೊಳ್ತಿರೋ ಜನ ಇದ್ರೆ ಮತ್ತೊಂದೆಡೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವವರ ಗೋಳು ಕೇಳುವವರಿಲ್ಲದಂತಾಗಿದೆ. ವ್ಯವಸ್ಥೆಯಲ್ಲಿ ಶಿಸ್ತಿನ ಕೊರತೆಯೇ ಈ ಎಲ್ಲಾ ಅನಾನುಕೂಲಕ್ಕೆ ಮೂಲ ಕಾರಣ ಎಂದು ನಾಗರಿಕರು ಆರೋಪಿಸುತ್ತಿದ್ದಾರೆ.
Published by: Sushma Chakre
First published: August 7, 2020, 11:14 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading