HOME » NEWS » Coronavirus-latest-news » BANGALORE CORONAVIRUS BENGALURU MAY HIT 14476 COVID 19 CASES TODAY KARNATAKA CORONAVIRUS UPDATES SCT

Bangalore Coronavirus: ಬೆಂಗಳೂರಿನಲ್ಲಿ ಇಂದು 15 ಸಾವಿರ ದಾಟುತ್ತಾ ಕೊರೋನಾ ಕೇಸ್?; ಊರುಗಳತ್ತ ವಲಸೆ ಹೊರಟ ಕಾರ್ಮಿಕರು

Bengaluru Covid-19 Updates: ಬೆಂಗಳೂರಿನಲ್ಲಿಂದು ಸುಮಾರು 15 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ.

news18-kannada
Updated:April 21, 2021, 10:09 AM IST
Bangalore Coronavirus: ಬೆಂಗಳೂರಿನಲ್ಲಿ ಇಂದು 15 ಸಾವಿರ ದಾಟುತ್ತಾ ಕೊರೋನಾ ಕೇಸ್?; ಊರುಗಳತ್ತ ವಲಸೆ ಹೊರಟ ಕಾರ್ಮಿಕರು
ಕೊರೋನಾ ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಏ. 21): ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನಾ ಆರ್ಭಟ ಹೆಚ್ಚುತ್ತಲೇ ಇದೆ. ಮೊನ್ನೆಗಿಂತ ನಿನ್ನೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ನಿನ್ನೆಗಿಂತ ಇಂದು ಇನ್ನೂ ಜಾಸ್ತಿಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ ಕೊರೋನಾ ಸೋಂಕಿತರ ಸಂಖ್ಯೆ 13 ಸಾವಿರ ದಾಟಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ ಮತ್ತೆ ಕೊರೋನಾ ಕೇಸ್​ಗಳು ಸಾರ್ವಕಾಲಿಕ ದಾಖಲೆ ಬರೆಯುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿಂದು ಸುಮಾರು 15 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ. ಇಂದು ನಗರದಲ್ಲಿ 14,476 ಕೊರೋನಾ ಪ್ರಕರಣಗಳು ಪತ್ತೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಇದು ಬೆಂಗಳೂರಿನ ಈವರೆಗಿನ ಅತಿ ಹೆಚ್ಚು ಕೇಸ್ ಆಗಿದೆ. ಇಂದು ಹಿಂದಿನ ಎಲ್ಲಾ ದಾಖಲೆಯನ್ನು ಕೊರೋನಾ ಪ್ರಕರಣಗಳು ಹಿಂದಟ್ಟಲಿದೆ ಎನ್ನಲಾಗಿದೆ.

ಬೆಂಗಳೂರಿನ 8 ವಲಯಗಳ ಪೈಕಿ 2 ವಲಯಗಳಲ್ಲಿ ಕೊರೋನಾ ಕೇಸ್​ಗಳು 2 ಸಾವಿರದ ಗಡಿ ದಾಟಿದೆ. ಹಾಗೇ, ಇನ್ನೆರಡು ವಲಯಗಳಲ್ಲಿ ಒಂದು ಸಾವಿರದ ಗಡಿ ದಾಟಿದೆ.
ಪೂರ್ವ ವಲಯ : 2148
ಬೊಮ್ಮನಹಳ್ಳಿ : 1519
ಪಶ್ಚಿಮ ವಲಯ : 2275
ಮಹದೇವಪುರ : 1482ಯಲಹಂಕ : 839
ಆರ್ ಆರ್ ನಗರ : 880
ದಾಸರಹಳ್ಳಿ : 438
ಆನೇಕಲ್ : 457
ಪೂರ್ವ ತಾಲೂಕು : 116
ಉತ್ತರ ತಾಲೂಕು : 217
ದಕ್ಷಿಣ ತಾಲೂಕು : 212
ಬೆಂ. ಹೊರವಲಯ : 1095 ಕೊರೋನಾ ಕೇಸ್​ಗಳು ದಾಖಲಾಗಿವೆ.

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 2,94,115 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಕಳೆದ 24 ಗಂಟೆಯಲ್ಲಿ ಕೊರೋನಾಗೆ 2,020 ಜನ ಕೊರೋನಾಗೆ ಬಲಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ಒಂದೇ ದಿನ 2 ಸಾವಿರಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಈವರೆಗೆ ಕೊರೋನಾದಿಂದ 1,80,789 ಜನ ಸಾವನ್ನಪ್ಪಿದ್ದಾರೆ.

ಕರ್ನಾಟಕದಲ್ಲಿ ವೀಕೆಂಡ್ ಲಾಕ್ ಡೌನ್ ಜೊತೆಗೆ ನೈಟ್ ಕರ್ಪ್ಯೂ ವಿಸ್ತರಣೆ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರಲ್ಲಿ ಮುಂದಿನ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್ ಭೀತಿ ಎದುರಾಗಿದೆ. ಯಾವ ಸಮಯದಲ್ಲಿ ಕೋವಿಡ್ 19 ನಿಯಮಗಳು ಬದಲಾಗುತ್ತೋ ಎಂಬ ಭೀತಿ ಎದುರಾಗಿದೆ. ಈ ನಡುವೆ ಸಿಲಿಕಾನ್ ಸಿಟಿ ತೊರೆದು ವಲಸೆ ಕಾರ್ಮಿಕರು ಊರಿನತ್ತ ಹೋಗುತ್ತಿದ್ದಾರೆ. ಬೆಂಗಳೂರಿನಿಂದ ತಮ್ಮ ಊರುಗಳಾದ ಉತ್ತರಪ್ರದೇಶ, ಮಣಿಪುರ, ಒರಿಸ್ಸಾ, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ರಾಜ್ಯಗಳತ್ತ ಪಯಣ ಬೆಳೆಸುತ್ತಿದ್ದಾರೆ.
Published by: Sushma Chakre
First published: April 21, 2021, 10:09 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories