Bangalore Coronavirus: ದಾವಣಗೆರೆಯ ವಿದ್ಯಾರ್ಥಿನಿಯಿಂದ ಬೆಂಗಳೂರಿನ ಹಾಸ್ಟೆಲ್​ನಲ್ಲಿ ಕೊರೋನಾ ಹರಡಿದ್ದು ಹೇಗೆ?

Bengaluru Covid-19: ದಾವಣಗೆರೆಯಿಂದ ಬಂದ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ತಗುಲಿದ್ದು ಎಲ್ಲಿಂದ? ಎಂಬುದನ್ನು ಪತ್ತೆಹಚ್ಚುವುದು ಬಿಬಿಎಂಪಿಗೆ ತಲೆನೋವಾಗಿದೆ. ಬೆಂಗಳೂರಿಗೆ ಬಸ್​ನಲ್ಲಿ ಬಂದ ವಿದ್ಯಾರ್ಥಿನಿ ಹಾಸ್ಟೆಲ್​ಗೆ ಕೊರೊನಾ‌ ಕ್ಲಸ್ಟರ್ ತಂದರಾ? ಎಂಬ ಅನುಮಾನವೂ ಮೂಡಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

 • Share this:
  ಬೆಂಗಳೂರು (ಮಾ. 19): ಬೆಂಗಳೂರಿನ ಮಲ್ಲೇಶ್ವರದ ಲೇಡೀಸ್​ ಹಾಸ್ಟೆಲ್​ನಲ್ಲಿ ಕ್ಲಸ್ಟರ್ ಮಾದರಿಯ ಕೊರೋನಾ ಕೇಸ್​ ಪತ್ತೆಯಾಗಿದೆ. ಒಂದೇ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಅವರೆಲ್ಲರೂ ಬೆಂಗಳೂರಿನ ಬೇರೆ ಬೇರೆ ಕಾಲೇಜುಗಳಲ್ಲಿ ಓದುವವರಾಗಿದ್ದಾರೆ. ಹೀಗಾಗಿ, ಈ ಪ್ರಕರಣ ಬಿಬಿಎಂಪಿಗೆ ತಲೆನೋವಾಗಿದೆ.

  ಮಲ್ಲೇಶ್ವರದ ಈಡಿಗರ ಲೇಡೀಸ್ ಹಾಸ್ಟೆಲ್​ಗೆ ದಾವಣಗೆರೆಯಿಂದ ಬಂದ ವಿದ್ಯಾರ್ಥಿನಿಯಿಂದ ಮೊದಲು ಕೊರೋನಾ ಹರಡಿದೆ. ಆಕೆಯನ್ನು ಪರೀಕ್ಷೆ ನಡೆಸಿದ ನಂತರ ಉಳಿದ ವಿದ್ಯಾರ್ಥಿಗಳನ್ನೂ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿನ 15 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಅವರನ್ನು ಹಾಸ್ಟೆಲ್​ನ ಒಂದು ಭಾಗದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

  ಆದರೆ, ದಾವಣಗೆರೆಯಿಂದ ಬಂದ ವಿದ್ಯಾರ್ಥಿನಿಗೆ ಕೊರೋನಾ ಸೋಂಕು ತಗುಲಿದ್ದು ಎಲ್ಲಿಂದ? ಎಂಬುದನ್ನು ಪತ್ತೆಹಚ್ಚುವುದು ಬಿಬಿಎಂಪಿಗೆ ತಲೆನೋವಾಗಿದೆ. ಬೆಂಗಳೂರಿಗೆ ಬಸ್​ನಲ್ಲಿ ಬಂದ ವಿದ್ಯಾರ್ಥಿನಿ ಹಾಸ್ಟೆಲ್​ಗೆ ಕೊರೊನಾ‌ ಕ್ಲಸ್ಟರ್ ತಂದರಾ? ಎಂಬ ಅನುಮಾನವೂ ಮೂಡಿದೆ. ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಹಾಗೂ ಆಟೋದಲ್ಲಿ ಬಂದಿರುವ ವಿದ್ಯಾರ್ಥಿನಿಯ ಟ್ರಾವೆಲ್ ಹಿಸ್ಟರಿ ಪರಿಶೀಲಿಸುತ್ತಿರುವ ಆರೋಗ್ಯಾಧಿಕಾರಿಗಳು ಕೊರೊನಾ ಕೇಸ್ ಹೆಚ್ಚಳವಾಗದಂತೆ ತಡೆಯಲು ಸರ್ವ ಪ್ರಯತ್ನ ನಡೆಸಿದ್ದಾರೆ.

  ಇದನ್ನೂ ಓದಿ: Karnataka Coronavirus: ಬೆಂಗಳೂರಿನ ಮಲ್ಲೇಶ್ವರದ ಹಾಸ್ಟೆಲ್​ನಲ್ಲಿ ಕೊರೋನಾ ಅಟ್ಟಹಾಸ; ಮಂಗಳೂರು ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೋನಾ!

  ಮಲ್ಲೇಶ್ವರಂನಲ್ಲಿರುವ ಈಡಿಗರ ವಿದ್ಯಾರ್ಥಿನಿಯ ಹಾಸ್ಟೆಲ್​ನ 15 ವಿದ್ಯಾರ್ಥಿನಿಯರಿಗೆ ಕೊರೊನಾ ಪಾಸಿಟಿವ್ ಖಚಿತವಾಗಿದೆ. ಒಟ್ಟು 53 ವಿದ್ಯಾರ್ಥಿನಿಯರು ಹಾಸ್ಟೆಲ್​ನಲ್ಲಿ ವಾಸ ಮಾಡುತ್ತಿದ್ದಾರೆ.

  ಯಾವ ಯಾವ ಕಾಲೇಜಿನ ವಿದ್ಯಾರ್ಥಿಗಳಿದ್ದಾರೆ?:

  ಮಲ್ಲೇಶ್ವರದ ಲೇಡೀಸ್ ಹಾಸ್ಟೆಲ್​ನಲ್ಲಿ ಬೆಂಗಳೂರಿನ ಹಲವು ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿನಿಯರಿದ್ದಾರೆ. ಬೆಂಗಳೂರಿನ ಮಹಾರಾಣಿ ಕಾಲೇಜು, ಹೆಬ್ಬಾಳದ ಇಂಜಿನಿಯರಿಂಗ್‌ ಕಾಲೇಜು, ಯಲಹಂಕದ ಕಾಲೇಜು, ಕೆಂಗೇರಿಯ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿನಿಯರು ಇಲ್ಲಿದ್ದಾರೆ. ಪದವಿ, ಇಂಜಿನಿಯರಿಂಗ್ ಹಾಗೂ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಇಲ್ಲಿ ವಾಸವಾಗಿದ್ದಾರೆ. ಆ ವಿದ್ಯಾರ್ಥಿನಿಯರು ತೆರಳುವ ಪ್ರತಿ ಕಾಲೇಜಿನಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ, ಒಬ್ಬರಿಂದ ಮತ್ತೊಬ್ಬರಿಗೆ ಕೊರೋನಾ ವೇಗವಾಗಿ ಹರಡುವ ಆತಂಕ ಇರುವುದರಿಂದ ಬಿಬಿಎಂಪಿ ಹೆಚ್ಚಿನ ಕಟ್ಟೆಚ್ಚರ ವಹಿಸಿದೆ/

  ಕೊರೋನಾ ಸೋಂಕಿತ 15 ವಿದ್ಯಾರ್ಥಿನಿಯರಲ್ಲಿ ಇಂದು 7 ವಿದ್ಯಾರ್ಥಿನಿಯರಿಗೆ ಕಾಲೇಜಿನಲ್ಲಿ ಪರೀಕ್ಷೆಯಿದೆ. ಮಹಾರಾಣಿ ಕಾಲೇಜಿನಲ್ಲಿ 4 ವಿದ್ಯಾರ್ಥಿನಿಯರು, ಹೆಬ್ಬಾಳದ ಖಾಸಗಿ ಕಾಲೇಜಿನಲ್ಲಿ ಇಬ್ಬರು ವಿದ್ಯಾರ್ಥಿನಿಯರು, ಯಲಹಂಕದ ಖಾಸಗಿ ಕಾಲೇಜಿನಲ್ಲಿ ಒಬ್ಬರು ಇಂದು ಪರೀಕ್ಷೆ ಬರೆಯಲಿದ್ದಾರೆ. ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಬಿಬಿಎಂಪಿ ಮಾಡಿದೆ.

  ಬಿಬಿಎಂಪಿಯಿಂದ ಹಾಸ್ಟೆಲ್ ಸ್ಯಾನಿಟೈಸ್ ಮಾಡಲಾಗಿದ್ದು, ಸೋಂಕಿತರ ಟ್ರಾವೆಲ್ ಹಿಸ್ಟರಿ ಪರಿಶೀಲನೆ ನಡೆಸಲಾಗುತ್ತಿದೆ. ಸಂಬಂಧಪಟ್ಟ ಕಾಲೇಜಿನ ಮಾಹಿತಿ ಪಡೆದು ಸೂಚನೆ ನೀಡಲಾಗಿದ್ದು, ಸೋಂಕಿತ ವಿದ್ಯಾರ್ಥಿನಿಯರ ಕ್ಲಾಸ್ ನಲ್ಲಿ ಸ್ಯಾನಿಟೈಸ್, ಸಂಪರ್ಕಿತರ ಕೊರೊನಾ ಟೆಸ್ಟ್, ಪರೀಕ್ಷೆಗೆ ಬೇಕಾದ ಪಿಪಿಇ ಕಿಟ್, ಆಂಬುಲೆನ್ಸ್ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ.
  Published by:Sushma Chakre
  First published: