Bangalore Coronavirus: ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ನರಳಿ ಪ್ರಾಣ ಬಿಟ್ಟ ಕೊರೋನಾ ಸೋಂಕಿತ ಉದ್ಯಮಿ

Bengaluru Coronavirus Updates: ಬೆಂಗಳೂರಿನ ಯಶವಂತಪುರದ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ 35 ವರ್ಷದ ಉದ್ಯಮಿಯೊಬ್ಬರಿಗೆ ಕೊರೋನಾ ಲಕ್ಷಣಗಳು ಕಂಡುಬಂದಿದ್ದವು. ಅವರು ನಿನ್ನೆ ರಾತ್ರಿ ಫ್ಲಾಟ್​ನಲ್ಲಿಯೇ ಸಾವನ್ನಪ್ಪಿದ್ದಾರೆ.

news18-kannada
Updated:July 10, 2020, 2:51 PM IST
Bangalore Coronavirus: ಬೆಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ನರಳಿ ಪ್ರಾಣ ಬಿಟ್ಟ ಕೊರೋನಾ ಸೋಂಕಿತ ಉದ್ಯಮಿ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಜು. 10): ಮಹಾಮಾರಿ ಕೊರೋನಾ ಅನೇಕ ಜನರ ಜೀವನ ಮತ್ತು ಜೀವವನ್ನೇ ಬಲಿ ತೆಗೆದುಕೊಂಡಿದೆ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿತ ವ್ಯಕ್ತಿಯೋರ್ವ ತನ್ನ ಫ್ಲ್ಯಾಟ್​ನಲ್ಲಿ ನರಳಿ, ನರಳಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಿನ್ನೆ ರಾತ್ರಿ ನಡೆದಿದೆ.

ಬೆಂಗಳೂರಿನ ಯಶವಂತಪುರದ ಬ್ರಿಗೇಡ್ ಗೇಟ್ ವೇ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದ 35 ವರ್ಷದ ಉದ್ಯಮಿಯೊಬ್ಬರಿಗೆ ಕೊರೋನಾ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಮನೆಯವರನ್ನೆಲ್ಲ ಊರಿಗೆ ಕಳುಹಿಸಿದ್ದ ಅವರ ಕಳೆದ 1 ವಾರದಿಂದ ಫ್ಲ್ಯಾಟ್​ನಲ್ಲಿ ಒಬ್ಬರೇ ವಾಸವಾಗಿದ್ದರು. ಎರಡು ದಿನಗಳ ಹಿಂದೆ ಪಾಸಿಟಿವ್ ಬಂದಿದ್ದು, ನಿನ್ನೆ ಮತ್ತೆ ರೀ ಚೆಕಪ್​ಗೆ ಕೊಟ್ಟಿದ್ದಾರೆ. ಆದ್ರೆ ನಿನ್ನೆ ತಡರಾತ್ರಿ ಉಸಿರಾಟದ ಸಮಸ್ಯೆ ಜಾಸ್ತಿಯಾಗಿದ್ದು, ಯಶವಂತಪುರದ ಕೊಲಂಬಿಯಾ ಏಷ್ಯಾ ಅಸ್ಪತ್ರೆಗೆ ತೆರಳಿದ್ದರು. ಆದರೆ, ನಿಮ್ಮನ್ನು ದಾಖಲು ಮಾಡಿಕೊಳ್ಳಲು ಬೆಡ್ ಇಲ್ಲ, ನಿಮಗೇನೂ ಆಗುವುದಿಲ್ಲ, ಮನೆಯಲ್ಲೇ ವಿಶ್ರಾಂತಿ ಮಾಡಿ ಎಂದು ವೈದ್ಯರು ವಾಪಾಸ್ ಕಳುಹಿಸಿದ್ದರು.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಡಿಪ್ಲೊಮಾ, ಇಂಜಿನಿಯರಿಂಗ್​, ಡಿಗ್ರಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಎಕ್ಸಾಂ; ಜುಲೈ 30, 31ಕ್ಕೆ ಸಿಇಟಿ ಪರೀಕ್ಷೆ

ಇದರಿಂದ ನಿನ್ನೆ ರಾತ್ರಿ ಆಸ್ಪತ್ರೆಯಿಂದ ಫ್ಲ್ಯಾಟ್​ಗೆ ವಾಪಾಸ್ ಬಂದಿದ್ದ ಅವರು ಮತ್ತೆ ಒಬ್ಬರೇ ಇದ್ದರು. ಸೋಂಕಿತ ಉದ್ಯಮಿ ರಾತ್ರಿ ತನ್ನ ಅಣ್ಣನಿಂದ ಊಟ ತರಿಸಿಕೊಂಡು ಊಟ ಮಾಡಿದ್ದರು. ಆದರೆ, ಅವರಿಗೆ ನಿನ್ನೆ ಮಧ್ಯರಾತ್ರಿ ಮತ್ತೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಈ ವೇಳೆ ಮಲಗಿದ್ದ ಮಂಚದಿಂದ ಕೆಳಗೆ ಬಿದ್ದು ತಲೆಗೆ ಏಟು ಮಾಡಿಕೊಂಡಿದ್ದಾರೆ ಅಂತ ಪೊಲೀಸರು ಪ್ರಾಥಮಿಕ‌ ತನಿಖೆ ವೇಳೆ ಗೊತ್ತಾಗಿದೆ.

ಗುರುವಾರ ತಡರಾತ್ರಿ ಮನೆಯಲ್ಲಿಯೇ ಅವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿಯನ್ನು ಸಹ ಪೊಲೀಸರು ನೀಡಿದ್ದಾರೆ. ಸದ್ಯ ಮೃತದೇಹವನ್ನು ಎಂ.ಎಸ್. ರಾಮಯ್ಯ ಆಸ್ಪತಗೆ ರವಾನೆ ಮಾಡಲಾಗಿದ್ದು, ಸೋಂಕಿತ ಉದ್ಯಮಿಯ ಕುಟುಂಬಸ್ಥರಿಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ಪ್ರೋಟೋಕಾಲ್ ಪ್ರಕಾರ ಮೃತ ವ್ಯಕ್ತಿಯನ್ನು ಕುಟುಂಬಸ್ಥರಿಗೆ ನೋಡೊ ಅವಕಾಶ ಸಹ ಇಲ್ಲದಂತಾಗಿದೆ.
Published by: Sushma Chakre
First published: July 10, 2020, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading