ಸೋಮವಾರದಿಂದ ಲಾಕ್​​ಡೌನ್​ ಅಂತೇಳಿ ಇಂದು-ನಾಳೆ ಬೇಕಾಬಿಟ್ಟಿಯಾಗಿ ರಸ್ತೆಗಿಳಿದೀರಿ ಜೋಕೆ..!

ಸೂಕ್ತ ಕಾರಣ ಇಲ್ಲದೆ ರಸ್ತೆಗಿಳಿದಿದ್ದ 2 ಸಾವಿರಕ್ಕೂ ಹೆಚ್ಚು ವಾಹ‌ನಗಳನ್ನು ಸೀಜ್ ಮಾಡಿದ್ದೇವೆ. ಕೆಲವರನ್ನ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸ್​ ಕಮಿಷನರ್​ ತಿಳಿಸಿದರು.

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

  • Share this:
ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿರುವುದರಿಂದ ರಾಜ್ಯ ಸರ್ಕಾರ ಲಾಕ್​ಡೌನ್​ ಮೊರೆ ಹೋಗಿದೆ. ಸೋಮವಾರದಿಂದ ಕಟ್ಟುನಿಟ್ಟಿನ ಲಾಕ್​ಡೌನ್​ ಜಾರಿಯಾಗುತ್ತಿದ್ದು, ಸದ್ಯ ಇಂದು, ನಾಳೆ ಕೊರೋನಾ ಕರ್ಫ್ಯೂ ಜಾರಿಯಲ್ಲಿರಲಿದೆ. ಆದರೆ ಜನಸಾಮಾನ್ಯರು ಸೋಮವಾರದಿಂದ ಲಾಕ್​ಡೌನ್​​ ಅಂತೇಳಿ ಇಂದು ಬೇಕಾಬಿಟ್ಟಿಯಾಗಿ ರಸ್ತೆಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಕಮಲ್​ ಪಂಥ್​ ಖಡಕ್​ ಎಚ್ಚರಿಕೆ ಕೊಟ್ಟಿದ್ದಾರೆ. ಇಂದು, ನಾಳೆ ಕೆಲವು ಚಟುವಟಿಕೆಗಳಿಗೆ ನಿರ್ಬಂಧವೇರಲಾಗಿದೆ. ವೀಕೆಂಡ್ ನಲ್ಲಿ ಕಡಿಮೆ‌ ಚಟುವಟಿಕೆಗೆ ಅವಕಾಶ ಇದೆ. ಸೋಮವಾರದಿಂದ ಕಟ್ಟುನಿಟ್ಟಿನ ನಿಯಮ ಜಾರಿಯಾಗಲಿದೆ ಎಂದರು.

ಸೋಮವಾರದಿಂದ ಲಾಕ್​ಡೌನ್​ ಜಾರಿಯಾಗಿರೋದರಿಂದ ನಗರದಲ್ಲಿ ಇಂದು ಹೆಚ್ಚಿನ ವಾಹನ ಸಂಚಾರ ಕಂಡು ಬಂದಿದೆ. ವ್ಯಾಕ್ಸಿನ್​ ಪಡೆಯಲು ಜನ ಸಂಚರಿಸುತ್ತಿದ್ದಾರೆ. ಹೀಗಾಗಿ ವಾಹನ ಹಾಗೂ ಜನರ ಸಂದಣಿ ಜಾಸ್ತಿ ಇದೆ. ಆದರೆ ಕೆಲವರು ಸಣ್ಣ-ಪುಟ್ಟ ಕಾರಣಗಳಿಗೆ ಹೊರಗೆ ಬಂದಿದ್ದಾರೆ. ಸೂಕ್ತ ಕಾರಣ ಇಲ್ಲದೆ ರಸ್ತೆಗಿಳಿದಿದ್ದ 2 ಸಾವಿರಕ್ಕೂ ಹೆಚ್ಚು ವಾಹ‌ನಗಳನ್ನು ಸೀಜ್ ಮಾಡಿದ್ದೇವೆ. ಕೆಲವರನ್ನ ವಶಕ್ಕೆ ಪಡೆದಿದ್ದೇವೆ ಎಂದು ಪೊಲೀಸ್​ ಕಮಿಷನರ್​ ತಿಳಿಸಿದರು.

ಮಾರ್ಕೆಟ್ ವಿಚಾರದಲ್ಲಿ ಕಠಿಣ ನಿಬಂಧನೆಗಳ ನ್ನ ಜಾರಿ ಮಾಡುತ್ತೇವೆ. ಲಾಕ್ ಡೌನ್ ಜಾರಿ ಮಾಡಿರೋದು ಚೈನ್ ಲಿಂಕ್ ಬ್ರೇಕ್ ಮಾಡೋಕೆ. ಕೆಲವರಿಗೆ ಅನಾನುಕೂಲ ಆಗಿದೆ. ಆದರೂ ಜನರು ಬೇಕಾಬಿಟ್ಟಿ ಹೊರಗೆ ಬರಬಾರದು. ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬಾರದು. ಬೆಂಗಳೂರಿನ ಜನ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸ ಇದೆ. ಯಾರಾದರು ಅನಗತ್ಯವಾಗಿ ಹೊರಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ವಾಹನ ಸೀಜ್ ಮಾಡುತ್ತೇವೆ. ಹೊರಗೆ ಬಂದವರನ್ನೂ ಅರೆಸ್ಟ್ ಮಾಡುತ್ತೇವೆ. ಕಾರಣ ಇಲ್ಲದೇ ಸೋಮವಾರದಿಂದ ಹೊರಗೆ ಬರಬಾರದು ಎಂದು ಕಮಿಷನರ್​ ಕಮಲ್​ ಪಂಥ್​ ಎಚ್ಚರಿಸಿದರು.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಕಪಟ ನಾಟಕ ಸೂತ್ರದಾರಿ; ಇದು ಬಿಜೆಪಿ ಬೆಡ್ ದಂಧೆ ಎಂದ ಕಾಂಗ್ರೆಸ್!

ಕೊರೋನಾ ಕರ್ಫ್ಯೂನಿಂದ ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್​ ಮೊರೆ ಹೋಗಿದೆ. ಮೇ 10ರಿಂದ 2 ವಾರಗಳ ಕಾಲ ಕರ್ನಾಟದಲ್ಲಿ ಕಠಿಣ ಲಾಕ್​ಡೌನ್​ ಜಾರಿಗೊಳಿಸಲಾಗಿದೆ. ಸೋಂಕು ಹರಡುವಿಕೆಗೆ ಕಡಿವಾಣ ಹಾಕಲು ಸಿಎಂ ಬಿ.ಎಸ್​.ಯಡಿಯೂರಪ್ಪ ಸರ್ಕಾರ ಕಟ್ಟಿನಿಟ್ಟಿನ ಮಾರ್ಗಸೂಚಿ ಜಾರಿಗೆ ತಂದಿದೆ. 14 ದಿನಗಳ ಕಾಲ ಕರ್ನಾಟಕ ಸ್ತಬ್ಧವಾಗಲಿದ್ದು, ಟಫ್​ ರೂಲ್ಸ್​ ಜಾರಿಯಲ್ಲಿರಲಿದೆ.

ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೆ ಕಠಿಣ ಲಾಕ್​ಡೌನ್​ ರಾಜ್ಯಾದ್ಯಂತ ಜಾರಿಯಲ್ಲಿ ಇರಲಿದೆ. ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ  10 ಗಂಟೆವರೆಗೆ ಮಾತ್ರ ಹಾಲು, ದಿನಸಿ ಅಂಗಡಿಗಳು, ಮಾಂಸದ ಅಂಗಡಿಗಳು, ಬಾರ್​ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ ಎಂದು ಸಿಎಂ ಯಡಿಯೂರಪ್ಪ ಘೋಷಿಸಿದರು.  ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆವರೆಗೆ ತಳ್ಳುವ ಗಾಡಿಯಲ್ಲಿ ತರಕಾರಿ-ಹಣ್ಣುಗಳನ್ನು ಮಾರಲು ಅವಕಾಶ ನೀಡಲಾಗಿದೆ.  ತುರ್ತು ವೈದ್ಯಕೀಯ ಸೇವೆ ಹೊರತು ಪಡಿಸಿ ಎಲ್ಲಾ ರೀತಿಯ ಸಂಚಾರಕ್ಕೆ ನಿರ್ಬಂಧವೇರಲಾಗಿದೆ. ಅಂತರ್​ ಜಿಲ್ಲಾ ಸಂಚಾರಕ್ಕೂ ನಿರ್ಬಂಧವೇರಲಾಗಿದೆ. ಸಂಚಾರಕ್ಕೆ ಯಾವುದೇ ಪಾಸ್​ ವ್ಯವಸ್ಥೆ ಇರುವುದಿಲ್ಲ. ರೈಲ್ವೆ, ವಿಮಾನ ಸಂಚಾರ ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ಹೋಟೆಲ್​​ನಿಂದ ಪಾರ್ಸಲ್​​ ಅಥವಾ ತರಕಾರಿ ತರಲು ವಾಹನ ತೆಗೆದುಕೊಂಡು ಹೋಗುವಂತಿಲ್ಲ.  ಅಕ್ಕಪಕ್ಕದ ಅಂಗಡಿಗಳಲ್ಲೇ‌ ಖರೀದಿ ಮಾಡಬೇಕು. ಏರ್‌ಪೋರ್ಟ್, ರೈಲ್ವೇ ನಿಲ್ದಾಣಕ್ಕೆ‌ ಮಾತ್ರ ವಾಹನ ಬಳಕೆ ಮಾಡಬಹುದು.   ಈ ಕಾಮರ್ಸ್ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ.  ತುರ್ತು  ಕಾರಣವನ್ನು ಧೃಡಪಡಿಸಿದರೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗುವುದು. ಇನ್ನು ಗಾರ್ಮೆಂಟ್ಸ್​ಗಳು  ಸೇರಿದಂತೆ  ಕೈಗಾರಿಕೆಗಳ ಮೇಲೆ ನಿರ್ಬಂಧವೇರಲಾಗಿದೆ. ಆದರೆ ಅಗತ್ಯ ವಸ್ತುಗಳ ಕೈಗಾರಿಕೆಗಳಿಗೆ ಅನುಮತಿ ನೀಡಲಾಗಿದೆ.
Published by:Kavya V
First published: