ಬೆಂಗಳೂರಿನಲ್ಲಿ ನಕಲಿ ಸ್ಯಾನಿಟೈಸರ್ ಮತ್ತು ಥರ್ಮಾಮೀಟರ್​ ತಯಾರಿಸುತ್ತಿದ್ದವರ ಬಂಧನ

ಸುಬ್ರಹ್ಮಣ್ಯ ನಗರದಲ್ಲಿ ಕಡಿಮೆ ಬೆಲೆಯ ಥರ್ಮಾಮೀಟರ್​​ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ಸರ್ಜಿಕಲ್ ಮತ್ತು ಸೈಂಟಿಫಿಕ್ಸ್ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 8 ಲಕ್ಷ ಬೆಲೆಬಾಳುವ ನಕಲಿ 70 ಇನ್ರಾರೆಡ್ ಫೋರ್ ಹೆಡ್ ಥರ್ಮಾಮೀಟರ್ ಗಳು ಹಾಗೂ 60 ಬ್ಯಾಟರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

news18-kannada
Updated:April 1, 2020, 2:47 PM IST
ಬೆಂಗಳೂರಿನಲ್ಲಿ ನಕಲಿ ಸ್ಯಾನಿಟೈಸರ್ ಮತ್ತು ಥರ್ಮಾಮೀಟರ್​ ತಯಾರಿಸುತ್ತಿದ್ದವರ ಬಂಧನ
ಆರೋಪಿ ಶಿವಕುಮಾರ್
  • Share this:
ಬೆಂಗಳೂರು(ಏ.01): ಕೊರೋನಾ ಭೀತಿ ಹೆಚ್ಚಾದ ಹಿನ್ನೆಲೆ, ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ನಕಲಿ ಮಾಸ್ಕ್​​, ನಕಲಿ ಸ್ಯಾನಿಟೈಸರ್​​ ಮಾರುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ ಸಿಸಿಬಿ ಪೊಲೀಸರು ಎನ್​-95 ನಕಲಿ ಮಾಸ್ಕ್​ ತಯಾರಿಸಿ ಮಾರುತ್ತಿದ್ದವರನ್ನು ಬಂಧಿಸಿದ್ದರು. ಇಂದು ನಕಲಿ ಸ್ಯಾನಿಟೈಸರ್ ಮತ್ತು ಥರ್ಮಾಮೀಟರ್​ ತಯಾರಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಜನರ ಕೊರೋನಾ ಭೀತಿಯನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು ಅಧಿಕ ಬೆಲೆಗೆ ಮಾಸ್ಕ್​, ಸ್ಯಾನಿಟೈಸರ್ ಮಾರುವ ದಂಧೆಗೆ ಇಳಿದಿದ್ದಾರೆ. ಶ್ರೀರಾಂಪುರದಲ್ಲಿ ನಕಲಿ‌ ಸ್ಯಾನಿಟೈಸರ್ ತಯಾರಿಸುತ್ತಿದ್ದ ಶಿವಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. 180 ಲೀಟರ್ ಐಸೊಪ್ರೊಪೈಲ್ ಆಲ್ಕೋಹಾಲ್, 10 ಲೀಟರ್ ಗ್ಲಿಸರಿನ್ ಮತ್ತು 65 ಲೀಟರ್ ಸ್ಯಾನಿಟೈಸರ್, 5382 ಬಾಟಲ್ ಗಳನ್ನು  ವಶಕ್ಕೆ ಪಡೆಯಲಾಗಿದೆ. ಆರೋಪಿ ಮನೆಯಲ್ಲಿ ಸಿಕ್ಕ 180 ಲೀಟರ್​ ಐಸೋಪ್ರೊಪೈಲ್​ ಆಲ್ಕೋಹಾಲ್​ ರಾಸಾಯನಿಕಕ್ಕೆ ಬೆಂಕಿ ತಗುಲಿದ್ದರೆ ಇಡೀ ಅಪಾರ್ಟ್​​ಮೆಂಟ್​ ಬೆಂಕಿಗಾಹುತಿಯಾಗುವ ಸಾಧ್ಯತೆ ಇತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಮಿಳುನಾಡಿನ 45 ಮಂದಿಯಲ್ಲಿ ಕೊರೋನಾ ಸೋಂಕು ದೃಢ

ಇನ್ನು, ಸುಬ್ರಹ್ಮಣ್ಯ ನಗರದಲ್ಲಿ ಕಡಿಮೆ ಬೆಲೆಯ ಥರ್ಮಾಮೀಟರ್​​ನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಪ್ರಜ್ವಲ್ ಸರ್ಜಿಕಲ್ ಮತ್ತು ಸೈಂಟಿಫಿಕ್ಸ್ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 8 ಲಕ್ಷ ಬೆಲೆಬಾಳುವ ನಕಲಿ 70 ಇನ್ರಾರೆಡ್ ಫೋರ್ ಹೆಡ್ ಥರ್ಮಾಮೀಟರ್ ಗಳು ಹಾಗೂ 60 ಬ್ಯಾಟರಿಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ಮ್ಯಾನೇಜರ್ ಕೇಶವನ್ ಎಂಬಾತನನ್ನು ಸಿಸಿಬಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಕೇಶವನ್ ಚೆನೈ ಮೂಲಕ‌ ಥರ್ಮಾಮೀಟರ್ ತರಿಸಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಈ ಸಂಬಂಧ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.
First published:April 1, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading