ಇನ್ಮುಂದೆ ಮುತ್ತಿನ ಗಮ್ಮತ್ತು, ಕಿಸ್ಸಿನ ಕಿಮ್ಮತ್ತು ಮಾಯಾ..!

ಬಾಲಿವುಡ್​ನಲ್ಲೂ ಚಿತ್ರೀಕರಣ ಆರಂಭವಾದರೆ ತುಟಿಗಳ ನಡುವೆ ಅಂತರವಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಹಸಿಬಿಸಿ ದೃಶ್ಯಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಹಿರಿಯ ನಿರ್ದೇಶಕರೊಬ್ಬರು.

news18-kannada
Updated:May 14, 2020, 11:08 AM IST
ಇನ್ಮುಂದೆ ಮುತ್ತಿನ ಗಮ್ಮತ್ತು, ಕಿಸ್ಸಿನ ಕಿಮ್ಮತ್ತು ಮಾಯಾ..!
ವಿಜಯ್​ ದೇವರಕೊಂಡ-ರಶ್ಮಿಕಾ
  • Share this:
ವಿಶ್ವದಾದ್ಯಂತ ಕೊರೋನಾ ವೈರಾಣು ಸೃಷ್ಟಿಸಿರುವ ಆವಾಂತರ ಒಂದೆರಡಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಕೊರೋನಾ ಮಹಾಮಾರಿಯಿಂದಾಗಿ ಕೆಲ ಬದಲಾವಣೆಗಳಾಗುತ್ತಿವೆ. ಅದರಲ್ಲಿ ಮುಖ್ಯವಾಗಿ ಹಲವು ಕಂಪೆನಿಗಳು ಮನೆಯಿಂದಲೇ ಕೆಲಸ ಎಂಬ ಕಾನ್ಸೆಪ್ಟ್​ನ್ನು ಗಂಭೀರವಾಗಿ ಪರಿಗಣಿಸಲು ಮುಂದಾಗಿವೆ. ಇನ್ನು ಹಲವೆಡೆ ಶಾಲಾ ಪಠ್ಯ ಕ್ರಮಗಳಲ್ಲಿ ಸ್ವಚ್ಛತಾ ಪಾಠ ಸೇರ್ಪಡೆಯಾಗಲಿವೆ.

ಇತ್ತ ಚಿತ್ರರಂಗದಲ್ಲೂ ಕೊರೋನಾ ಸಣ್ಣ ಪುಟ್ಟ ಬದಲಾವಣೆಗಳನ್ನು ತರಲಿವೆ. ವೈರಾಣು ಹರಡುವಿಕೆ ಭೀತಿಯಿಂದ ಈಗಾಗಲೇ ಹಾಲಿವುಡ್​ನ ಕೆಲ ವೆಬ್​ ಸಿರೀಸ್​ಗಳಲ್ಲಿ ಹಸಿಬಿಸಿ ದೃಶ್ಯಗಳನ್ನು ಕೈ ಬಿಡಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕಿಸ್ಸಿಂಗ್​ ಸೀನ್​ಗಳನ್ನು ಕಥೆಯಿಂದ ತೆಗೆಯಲಾಗುತ್ತಿದೆ. ಅತ್ತ ತೈವಾನ್​ನಲ್ಲಿ ಚುಂಬನ ದೃಶ್ಯಗಳಿಗೆ ಬ್ಯಾನ್ ಹೇರಲಾಗಿದೆ.

Rashmika mandanna vijay devarakonda
ವಿಜಯ್​ ದೇವರಕೊಂಡ-ರಶ್ಮಿಕಾ


ಇನ್ನು ಚೀನಾದ ಡ್ರಾಮಾ ಸಿರೀಸ್​ನಲ್ಲಿ ಮುತ್ತಿನ ಮತ್ತನ್ನು ಇಳಿಸುವ ಪ್ರಯತ್ನಕ್ಕೆ ನಿರ್ದೇಶಕರುಗಳು ಮುಂದಾಗಿದ್ದಾರೆ. ಹಾಗೆಯೇ ಬಾಲಿವುಡ್​ನಲ್ಲೂ ಚಿತ್ರೀಕರಣ ಆರಂಭವಾದರೆ ತುಟಿಗಳ ನಡುವೆ ಅಂತರವಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದ ಹಸಿಬಿಸಿ ದೃಶ್ಯಗಳಿಗೆ ಕಡಿವಾಣ ಬೀಳುವ ಸಾಧ್ಯತೆ ಹೆಚ್ಚಿದೆ ಎನ್ನುತ್ತಾರೆ ಹಿರಿಯ ನಿರ್ದೇಶಕರೊಬ್ಬರು.

ವಿಜಯ್ ದೇವರಕೊಂಡ


ಇದರ ಹೊರತಾಗಿ ಸೌತ್ ಸಿನಿರಂಗದ ಕಲಾವಿದರಲ್ಲೂ ಕೂಡ ಕೊರೋನಾ ಜಾಗೃತಿ ಮೂಡಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅತ್ಯಗತ್ಯ ಇದ್ದವರು ಮಾತ್ರ ಶೂಟಿಂಗ್ ಸುತ್ತಲು ಇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೆಯೇ ಮುಂದಿನ ದಿನಗಳಲ್ಲಿ ಕಥೆಗಳಲ್ಲಿನ ಉಮ್ಮ ದೃಶ್ಯಗಳಲ್ಲಿ ಬದಲಾವಣೆಯಾಗಬಹುದು. ಒಟ್ಟಿನಲ್ಲಿ ಹಲವು ಕ್ಷೇತ್ರಗಳ ಬದಲಾವಣೆಗೆ ಕಾರಣವಾದ ಕೊರೋನಾ ಇತ್ತ  ಕಿಸ್ಸಿಂಗ್ ಸೀನ್​ಗಳಿಗೂ ಬಾಧಿಸುತ್ತಿದೆ.
First published: May 14, 2020, 11:07 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading