• Home
  • »
  • News
  • »
  • coronavirus-latest-news
  • »
  • ರೆಡ್ ಜೋನ್ ಪಟ್ಟಿಯಲ್ಲಿ ಬಾಗಲಕೋಟೆ: ಜಿಲ್ಲೆಯ ಹಲವೆಡೆ ಹೈ ಅಲರ್ಟ್​ ಘೋಷಣೆ

ರೆಡ್ ಜೋನ್ ಪಟ್ಟಿಯಲ್ಲಿ ಬಾಗಲಕೋಟೆ: ಜಿಲ್ಲೆಯ ಹಲವೆಡೆ ಹೈ ಅಲರ್ಟ್​ ಘೋಷಣೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೃತ ಸೋಂಕಿತ ವೃದ್ಧನ ಮನೆಯವರಿಂದಲೇ ನಿರಂತರವಾಗಿ ಕೊರೋನಾ ಸೋಂಕು ಹಬ್ಬುತ್ತಿದೆ ಎನ್ನಲಾಗಿದೆ. ಕಂಟೋನ್ಮೆಂಟ್ ಏರಿಯಾಗಳಲ್ಲಿ ಅಗತ್ಯ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.

  • Share this:

    ಬಾಗಲಕೋಟೆ(ಏ.16): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಹೀಗಾಗಿ ಬಾಗಲಕೋಟೆ ಜಿಲ್ಲೆಯನ್ನು ರೆಡ್​ ಜೋನ್ ಪಟ್ಟಿಗೆ ಸೇರಿಸಲಾಗಿದೆ. ಲಾಕ್​ಡೌನ್​ ನಡುವೆಯೂ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಬಾಗಲಕೋಟೆ ಜಿಲ್ಲಾಡಳಿತ ತೀವ್ರ ಕಟ್ಟೆಚ್ಚರ ವಹಿಸಿದೆ.

    ಜಿಲ್ಲೆಯಲ್ಲಿ ಸೋಂಕಿತರು ಕಂಡು ಬಂದಿರುವ ಹಳೇ ಬಾಗಲಕೋಟೆ, ಮುಧೋಳ, ಮುಗಳಖೋಡ ಮತ್ತು ಜಮಖಂಡಿಯಲ್ಲಿ ಹೈ ಅಲರ್ಟ್​ ಘೋಷಿಸಲಾಗಿದೆ. ಒಂದೇ ಕಡೆ 11 ಪ್ರಕರಣಗಳು ಕಂಡು ಬಂದ ಹಳೇ ಬಾಗಲಕೋಟೆಯಲ್ಲಿ ಕಟ್ಟೆಚ್ಚರ ಮುಂದುವರೆದಿದೆ. ಆದರೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಚಿಂತೆಯಾಗಿದೆ.

    ಮೃತ ಸೋಂಕಿತ ವೃದ್ಧನ ಮನೆಯವರಿಂದಲೇ ನಿರಂತರವಾಗಿ ಕೊರೋನಾ ಸೋಂಕು ಹಬ್ಬುತ್ತಿದೆ ಎನ್ನಲಾಗಿದೆ. ಕಂಟೋನ್ಮೆಂಟ್ ಏರಿಯಾಗಳಲ್ಲಿ ಅಗತ್ಯ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಇತ್ತ ಪೊಲೀಸ್ ಪೇದೆಗೆ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ಜಮಖಂಡಿ ಪೋಲಿಸ್ ಕ್ವಾಟರ್ಸ್​​ ಏರಿಯಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

    ದೇಶದಲ್ಲೇ ಅತಿಹೆಚ್ಚು ಕೊರೋನಾ ಹಾಟ್‌ಸ್ಪಾಟ್‌ ಹೊಂದಿರುವ ಕುಖ್ಯಾತಿಗೆ ತಮಿಳುನಾಡು; ಇಲ್ಲಿದೆ ರೆಡ್‌ಜೋನ್ ಜಿಲ್ಲೆಗಳ ವಿವಿರ!

    ಬಾಗಲಕೋಟೆ ಮೃತ ವೃದ್ಧನ 9 ಜನ ಕುಟುಂಬಸ್ಥರು ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 14 ದಿನ ಆಸ್ಪತ್ರೆ ಕ್ವಾರಂಟೈನ್​ ಹಾಗೂ ಎರಡು ಬಾರಿಯೂ ವರದಿ ನೆಗಟಿವ್ ಬಂದ ಹಿನ್ನೆಲೆ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಕೊರೋನಾ ಸೋಂಕಿತ ಮೃತ ವೃದ್ಧನ  ಸೋಂಕಿತ ಹೆಂಡತಿ, ಸಹೋದರನಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ವೃದ್ಧನ ಕುಟುಂಬಸ್ಥರು ಹೋಂ ಕ್ವಾರಂಟೈನ್​​ನಲ್ಲಿರಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಮೃತ ವೃದ್ಧನ ಕುಟುಂಬಸ್ಥರ ಡಿಸ್ಚಾರ್ಜ್ ಬಗ್ಗೆ ಆರೋಗ್ಯ ಇಲಾಖಾಧಿಕಾರಿ ಮಾಹಿತಿ ನೀಡಿದ್ದಾರೆ.

    ಇನ್ನು, ರೆಡ್​ ಜೋನ್ ಪಟ್ಟಿಯಲ್ಲಿರುವ ಬಾಗಲಕೋಟೆಯಲ್ಲಿ ಕೆಲವೆಡೆ ಸ್ತಬ್ಧ ಇದ್ದರೆ, ಇನ್ನೂ ಹಲವೆಡೆ ಜನರು ಸಂಚರಿಸುತ್ತಿದ್ದಾರೆ. ಬೆಳಗಿನ ಹಾಲು, ಪತ್ರಿಕೆ ಸೇರಿ ಅಗತ್ಯ ವಸ್ತುಗಳ ಖರೀದಿಗೆ ಜನರು ಮನೆಯಿಂದ ಹೊರ ಬರುತ್ತಿದ್ದಾರೆ. ಹಾಟ್ ಸ್ಪಾಟ್ ಎಂದು ಘೋಷಿಸಿದ್ದರೂ ಜನರು ಕ್ಯಾರೆ ಎನ್ನುತ್ತಿಲ್ಲ.

    First published: