ಕೊರೋನಾದಿಂದ ಗುಣಮುಖರಾಗಿ ಮನೆಗೆ ಹೋದ ಬಾಗಲಕೋಟೆ ಮಹಿಳೆಗೆ ಕಾದಿತ್ತು ಶಾಕ್!

Coronavirus Updates: ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 74 ವರ್ಷದ ವೃದ್ಧರೊಬ್ಬರು ಏ. 3ರಂದು ಸಾವನ್ನಪ್ಪಿದ್ದರು. ಕೊರೋನಾಗೆ ಬಲಿಯಾದ 4ನೇ ರೋಗಿಯಾಗಿದ್ದ ಅವರ ಸಾವಿನ ವಿಚಾರವನ್ನು ಅವರ ಹೆಂಡತಿಗೆ ತಿಳಿಸಿರಲಿಲ್ಲ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಬಾಗಲಕೋಟೆ (ಏ. 22): ಕೊರೋನಾ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಮಹಿಳೆ ನಿನ್ನೆ ಬಾಗಲಕೋಟೆ ಜಿಲ್ಲೆಯ ಆಸ್ಪತ್ರೆಯಿಂದ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕೊರೋನಾ ಜಯಿಸಿದ ಖುಷಿಯಲ್ಲಿ ಮನೆಗೆ ಹೋದ ಅವರಿಗೆ ಅತಿದೊಡ್ಡ ಆಘಾತ ಕಾದಿತ್ತು. ಕೊರೋನಾ ವೈರಸ್​ನಿಂದಾಗಿ ಅವರ ಗಂಡ ಸಾವನ್ನಪ್ಪಿ ಅದಾಗಲೇ 18 ದಿನ ಕಳೆದಿತ್ತು!

  ಬಾಗಲಕೋಟೆಯ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ 74 ವರ್ಷದ ವೃದ್ಧರೊಬ್ಬರು ಏ. 3ರಂದು ಸಾವನ್ನಪ್ಪಿದ್ದರು. ಕೊರೋನಾಗೆ ಬಲಿಯಾದ 4ನೇ ರೋಗಿಯಾಗಿದ್ದ ಅವರ ಸಾವಿನ ವಿಚಾರವನ್ನು ಅವರ ಹೆಂಡತಿಗೆ ತಿಳಿಸಿರಲಿಲ್ಲ. ಗಂಡನಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಆ ಮಹಿಳೆಗೂ ಕೊರೋನಾ ತಗುಲಿರುವುದು ಖಚಿತವಾಗಿತ್ತು. ಹೀಗಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಗಂಡನ ಸಾವಿನ ಸುದ್ದಿ ತಿಳಿದಿರಲಿಲ್ಲ.

  ಇದನ್ನೂ ಓದಿ: Bengaluru Lockdown: ಬೆಂಗಳೂರಿನ ಬಹುತೇಕ ರಸ್ತೆಗಳು ಬಂದ್​; ಇಂದು ಬೆಳಗ್ಗೆಯಿಂದ 100ಕ್ಕೂ ಹೆಚ್ಚು ವಾಹನ ಸೀಜ್

  ಸಾವನ್ನು ಜಯಿಸಿದ ಖುಷಿಯಲ್ಲಿ ಮನೆಗೆ ವಾಪಾಸಾದ  54 ವರ್ಷದ ಮಹಿಳೆಗೆ ತನ್ನ ಗಂಡ ಸಾವನ್ನಪ್ಪಿರುವ ಸುದ್ದಿ ತಿಳಿದು ಬರಸಿಡಿಲು ಬಡಿದಂತಾಗಿದೆ. ತನ್ನ ಗಂಡ ಕೊರೋನಾದಿಂದ ಸಾವನ್ನಪ್ಪಿರುವ ವಿಚಾರ ತಿಳಿದು ಆಕೆ ಕಣ್ಣೀರು ಹಾಕುತ್ತಿದ್ದಾರೆ. ಏ. 3ರಂದು ಸಾವನ್ನಪ್ಪಿದ್ದ ಗಂಡನ ಸಾವಿನ ವಿಚಾರ ಆಕೆಗೆ ಗೊತ್ತಾಗಿದ್ದು ಏ. 21ರಂದು!

  ಕೊರೋನಾದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಗೆ ಆಕೆಯ ಮನೆಯವರು ಗಂಡ ಸತ್ತಿರುವ ವಿಚಾರವನ್ನು ತಿಳಿಸಿರಲಿಲ್ಲ. ಆಸ್ಪತ್ರೆಯಿಂದ ನಿನ್ನೆ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದಾಗ ಪತಿಯ ಸಾವಿನ ವಿಚಾರ ತಿಳಿದು ಮಹಿಳೆಯ ಆಕ್ರಂದನ ಮುಗಿಲು ಮುಟ್ಟಿದೆ. ಹಳೆ ಬಾಗಲಕೋಟೆಯಲ್ಲಿ ಈ ಘಟನೆ ನಡೆದಿದೆ.

  ಇದನ್ನೂ ಓದಿ: ರೆಡ್ ಜೋನ್ ಪಟ್ಟಿಯಲ್ಲಿ ಬಾಗಲಕೋಟೆ: ಜಿಲ್ಲೆಯ ಹಲವೆಡೆ ಹೈ ಅಲರ್ಟ್​ ಘೋಷಣೆ

  ಬಾಗಲಕೋಟೆಯ ಮಾರುಕಟ್ಟೆ ಪ್ರದೇಶದಲ್ಲಿ ಖಾದ್ಯ ತೈಲ ಚಿಲ್ಲರೆ ಮಾರಾಟ ಅಂಗಡಿ ಇಟ್ಟುಕೊಂಡಿದ್ದ ವೃದ್ಧನನ್ನು ಅನಾರೋಗ್ಯದ ಕಾರಣ ಮಾರ್ಚ್ 31ರಂದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಕೊರೋನಾ ಸೋಂಕಿನ ಲಕ್ಷಣಗಳು ಕಂಡುಬಂದ ಕಾರಣ ಪರೀಕ್ಷೆ ನಡೆಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಏ. 3ರಂದು ಸಾವನ್ನಪ್ಪಿದ್ದರು.
  First published: