Corona ಮೊದಲ ಅಲೆ ಸಮಯದಲ್ಲಿ ಜನಿಸಿದ ಶಿಶುಗಳಲ್ಲಿ ಬೆಳವಣಿಗೆಯ ಕೊರತೆ: ಅಧ್ಯಯನದಲ್ಲಿ ಬಹಿರಂಗ

ಸಾಮಾಜಿಕ ಒತ್ತಡ, ಆರ್ಥಿಕ ಒತ್ತಡದ ಜೊತೆಗೆ ಗರ್ಭಿಣಿಯರಿಗೆ ಸಹಜವಾಗಿ ಇರುವಂತಹ ಆತಂಕಗಳು ಕೋವಿಡ್ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿದ್ದವು. ಕೋವಿಡ್ ಸೋಂಕು ತಗುಲಿದ ಸಂದರ್ಭದಲ್ಲಿ ಸರಿಯಾದ ಆಹಾರ ಕ್ರಮವಿಲ್ಲದೇ ಪೋಷಕಾಂಶಗಳ ಕೊರತೆಯೂ ಕಾಣಿಸಿಕೊಂಡಿರಬಹುದು.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ಅಮೆರಿಕದ ನ್ಯೂಯಾರ್ಕ್​​ನ(New York) ಕೊಲಂಬಿಯಾ ವಿಶ್ವವಿದ್ಯಾನಿಲಯದ(Columbia University) ವಿಜ್ಞಾನಿಗಳ ತಂಡವು ನಡೆಸಿದ ಅಧ್ಯಯನದಲ್ಲಿ(Study) ಬೆಚ್ಚಿ ಬೀಳಿಸುವ ಮಾಹಿತಿ ಹೊರ ಬಿದ್ದಿದೆ. ಸಂಶೋಧಕರ ತಂಡವು ಜಾಮಾ ಮಕ್ಕಳ ಪತ್ರಿಕೆಯಲ್ಲಿ ಆತಂಕಕಾರಿ ವಿಷಯವನ್ನು ಬಹಿರಂಗ ಪಡಿಸಿದೆ. ಕೋವಿಡ್ -19 ಮೊದಲ ಸಾಂಕ್ರಾಮಿಕದ ಕಾಲಘಟ್ಟದಲ್ಲಿ ಜನಿಸಿದ ಶಿಶುಗಳ ಸಾಮಾಜಿಕ ಮತ್ತು ದೈಹಿಕ ಹಾಗೂ ಮೂಳೆಗಳ ಬೆಳವಣಿಗೆಯ ಸಾಮರ್ಥ್ಯವು ಮಂದಗತಿಯಲ್ಲಿದೆ ಎನ್ನುವ ವರದಿಯನ್ನು ವಿಜ್ಞಾನಿಗಳು ನೀಡಿದ್ದಾರೆ. ಗರ್ಭಾವಸ್ಥೆಯಲ್ಲಿ ಅವರ ಅಮ್ಮಂದಿರಿಗೆ ಕೋವಿಡ್ -19 ಸೋಂಕು ತಗುಲಿದ್ದರೂ, ಹುಟ್ಟಿದ ಮಕ್ಕಳಲ್ಲಿ ಈ ಕೊರತೆ ಕಂಡು ಬಂದಿದೆ ಎಂದು ತಿಳಿಸಿದ್ದಾರೆ.

  ನ್ಯೂಯಾರ್ಕ್​​ನ ಪ್ರೆಸ್ಬಿಟೇರಿಯನ್ ಮಾರ್ಗನ್ ಸ್ಟಾನ್ಲಿ ಮಕ್ಕಳ ಆಸ್ಪತ್ರೆ ಮತ್ತು ಅಲೆನ್ ಆಸ್ಪತೆಯಲ್ಲಿ ಮಾರ್ಚ್ ಮತ್ತು ಡಿಸೆಂಬರ್​ ತಿಂಗಳ ಮಧ್ಯದಲ್ಲಿ ಜನಿಸಿದ ಮಕ್ಕಳಿಗೆ ಡೆವಲ್ಮೆಂಟ್ ಸ್ಕ್ರೀನಿಂಗ್ ನಡೆಸಲಾಯಿತು. 6 ತಿಂಗಳು ತುಂಬಿದ 255 ಶಿಶುಗಳಿಗೆ ಪರೀಕ್ಷೆ ನಡೆಸಲಾಯಿತು. ಈ ಸಂಶೋಧನೆಯಲ್ಲಿ ಪಾಲ್ಗೊಂಡಿದ್ದ ಬಹುತೇಕ ಅರ್ಧದಷ್ಟು ಮಕ್ಕಳ ತಾಯಂದಿರು ಕೋವಿಡ್​ - 19 ಮೊದಲ ಸಾಂಕ್ರಾಮಿಕದಲ್ಲಿ ಸೋಂಕನ್ನು ಅನುಭವಿಸಿದವರಾಗಿದ್ದರು.

  ಶಿಶುಗಳು ನರಗಳ ಬೆಳವಣಿಗೆಯಲ್ಲಿ ಸಮಸ್ಯೆ

  ಅಧ್ಯಯನದ ಪ್ರಧಾನ ಲೇಖಕರಾದ ಕೊಲಂಬಿಯಾ ವಿಶ್ವವಿದ್ಯಾನಿಲಯದ ವಗೆಲೋಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಂಡ್ ಸರ್ಜನ್ಸ್‌ನ ಮಕ್ಕಳ ವೈದ್ಯಶಾಸ್ತ್ರ ಮತ್ತು ಮನೋವೈದ್ಯಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡ್ಯಾನಿ ಡುಮಿಟ್ರಿಯು ಅವರ ಪ್ರಕಾರ ಗರ್ಭಾವಸ್ಥೆಯಲ್ಲಿ ಸೋಂಕಿಗೆ ಒಳಗಾದ ತಾಯಿಯಿಂದ ಜನಿಸಿದ ಶಿಶುಗಳು ನರಗಳ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

  ಇದನ್ನೂ ಓದಿ: ಕೋವಿಡ್​​ ಬೂಸ್ಟರ್ ಶಾಟ್ ' Booking' ಮಾಡುವಾಗ ಹಣ ಕಳೆದುಕೊಳ್ಳಬಹುದು ಎಚ್ಚರ..!

  ಸಾಮಾಜಿಕ ಒತ್ತಡ, ಆರ್ಥಿಕ ಒತ್ತಡದ ಜೊತೆಗೆ ಗರ್ಭಿಣಿಯರಿಗೆ ಸಹಜವಾಗಿ ಇರುವಂತಹ ಆತಂಕಗಳು ಕೋವಿಡ್ ಸಂದರ್ಭದಲ್ಲಿ ಇನ್ನೂ ಹೆಚ್ಚಾಗಿದ್ದವು. ಕೋವಿಡ್ ಸೋಂಕು ತಗುಲಿದ ಸಂದರ್ಭದಲ್ಲಿ ಸರಿಯಾದ ಆಹಾರ ಕ್ರಮವಿಲ್ಲದೇ ಪೋಷಕಾಂಶಗಳ ಕೊರತೆಯೂ ಕಾಣಿಸಿಕೊಂಡಿರಬಹುದು. ಸೋಂಕಿನ ದಣಿವು ಗರ್ಭಿಣಿಯನ್ನು ಬಾಧಿಸಿರಬಹುದಾದ ಸಾಧ್ಯತೆಗಳು ಇರಬಹುದು. ಈ ಎಲ್ಲಾ ಸಮಸ್ಯೆಗಳು ಗರ್ಭದಲ್ಲಿರುವ ಮಗುವಿನ ಬೆಳವಣಿಗೆ ಮೇಲೆ ಪರಿಣಾಮ ಬೀರಿರಬಹುದು ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇನ್ನೂ ಮಕ್ಕಳ ಈ ಬೆಳವಣಿಗೆಯ ಮುಂದಿನ ಪೀಳಿಗೆಯ ಅರಿವಿನ , ಬದುಕಿನ ಕೌಶಲ್ಯಗಳ ನಿರ್ವಹಣೆಯ ಕೊರತೆಗೆ ಕಾರಣವಾಗಬಹುದು ಎಂದು ತಿಳಿಸಿದ್ದಾರೆ.

  ಏನಿದು ಸೋಶಿಯಲ್ ಮತ್ತು ಮೋಟಾರ್ ಪರೀಕ್ಷೆ?

  ಯಾವುದೇ ಮಕ್ಕಳು ತಮ್ಮ ಜೀವನದ ಮೊದಲ 5 ವರ್ಷದಲ್ಲಿ ನಾಲ್ಕು ವಿಭಾಗದಲ್ಲಿ ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದುತ್ತಾರೆ. ಮೋಟಾರ್ (ದೈಹಿಕ), ಸಂವಹನ ಮತ್ತು ಭಾಷಾಶಾಸ್ತ್ರ, ಅರಿವಿನ ಸಾಮರ್ಥ್ಯ, ಸಾಮಾಜಿಕ ಮತ್ತು ಭಾವನಾತ್ಮಕ ಇವು ನಾಲ್ಕು ಕ್ಷೇತ್ರಗಳಾಗಿವೆ.

  ಇದನ್ನೂ ಓದಿ: Coronaದಿಂದ ಮನೆಯಲ್ಲಿಯೇ ಐಸೋಲೇಟ್ ಆಗಿದ್ರೆ ಸರ್ಕಾರದ ಈ ಮಾರ್ಗಸೂಚಿ ಪಾಲಿಸಿ

  ವೈದ್ಯಕೀಯ ಭಾಷೆಯಲ್ಲಿ ಹೇಳಲಾಗುವ ಮೋಟಾರ್ ಬೆಳವಣಿಗೆಯೂ ದೈಹಿಕ ಬೆಳವಣಿಗೆಗೆ ಸಂಬಂಧಿಸಿದ್ದಾಗಿದೆ. ಮಗುವಿನ ಮೂಳೆಗಳು, ಸ್ನಾಯುಗಳ ದೈಹಿಕ ಬೆಳವಣಿಗೆ ಮತ್ತು ಬಲಪಡಿಸುವಿಕೆಯನ್ನು ಒಳಗೊಂಡಿರುತ್ತದೆ. ಅಲ್ಲದೇ ಮಕ್ಕಳು ತಮ್ಮ ಸುತ್ತಮುತ್ತಲಿನ ಸ್ಥಳಗಳಲ್ಲಿ ಕೈ ಕಾಲು ಅಲುಗಾಡಿಸುವುದು, ಸುತ್ತುವುದು ಮತ್ತು ಸ್ಪರ್ಶಿಸುವ ಸಾಮರ್ಥ್ಯವನ್ನು ಮೋಟಾರು ಡೆವಲಪ್ಮೆಂಟ್‌ ಎಂದು ಕರೆಯಲಾಗುತ್ತದೆ. ಇನ್ನೂ ಈ ರೀತಿ ಕೋವಿಡ್ 19 ಮೊದಲ ಸಾಂಕ್ರಾಮಿಕದಲ್ಲಿ ಜನಿಸಿದ ಮಕ್ಕಳಲ್ಲಿ ಚುರುಕುತನ ಹೆಚ್ಚಿಸಲು ಕೆಲವು ಚಟುವಟಿಕೆಗಳು ಇವೆ. ಪೋಷಕರು ಇದನ್ನು ಮಕ್ಕಳ ತಜ್ಞರ ಸಲಹೆ ಮೇರೆಗೆ ಅನುಸರಿಬಹುದು.

  • ಮಗುವಿನ ಬಳಿ ಪುಟ್ಟ ಆಟಿಕೆಗಳನ್ನು ಇಡುವುದು. ಮಗು ಅದನ್ನು ಮುಟ್ಟಲು ಪ್ರಯತ್ನಿಸುವುದು. ಮತ್ತೆ ಅದೇ ಆಟಿಕೆಯನ್ನು ಸ್ವಲ್ಪ ದೂರದಲ್ಲಿಡುವುದು. ಆಗ ಮಗು ಸ್ಟ್ರೆಚ್ ಮಾಡಲು ಪ್ರಯತ್ನಿಸುತ್ತದೆ. ಈ ಚಟುವಟಿಕೆ ಮಗುವಿನ ದೈಹಿಕ ಸಾಮರ್ಥ್ಯ ಮತ್ತು ಗ್ರಹಿಕೆಯನ್ನು ಹೆಚ್ಚು ಮಾಡುತ್ತದೆ.

  • ಮಕ್ಕಳಿಗೆ ಸ್ಟ್ರೋಲರ್ ಮೂಲಕ ನಡಿಗೆ ಕಲಿಸಲು ಪೋಷಕರು ಪ್ರೋತ್ಸಾಹಿಸುವುದು. ಮಕ್ಕಳಲ್ಲಿ ಖುಷಿ ಮತ್ತು ಮುನ್ನುಗುವ ಮನಸ್ಥಿತಿ ಬೆಳೆಸುತ್ತದೆ.

  • ಆಟದ ಮೈದಾನದಲ್ಲಿ ಏಣಿ ಏರುವುದು, ಜಾರು ಬಂಡೆಯಿಂದ ಜಾರುವುದು ಇದೆಲ್ಲವೂ ಮಾಡಿದಾಗ ಮಕ್ಕಳಲ್ಲಿ ಚುರುಕುತನ ಹೆಚ್ಚಾಗಬಹುದು.

  Published by:Kavya V
  First published: