HOME » NEWS » Coronavirus-latest-news » AYUSH DEPARTMENT TO TAKE ACTION AGAINST DOCTOR SAYS I WILL CURE CORONA WITH AYURVEDA MEDICINE GNR

Coronavirus Vaccination: ಕೊರೋನಾಗೆ ಔಷಧಿ ಕಂಡು ಹಿಡಿದಿದ್ದೇನೆ ಎಂದ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಆಯುಷ್ ಇಲಾಖೆ

Dr. Giridhara Kaje: ಜತೆಗೆ ಇವು ಆ್ಯಂಟಿ ವೈರಲ್ ಗುಣಮಾತ್ರವನ್ನು ಹೊಂದಿರದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಔಷಧದ ಬಳಕೆಯಿಂದ ಹಲವು ಪ್ರಯೋಜನಗಳನ್ನು ಕಾಣಬಹುದು ಎಂದು ಡಾ. ಕಜೆ ವಿವರಿಸಿದ್ದರು.

news18-kannada
Updated:April 15, 2020, 9:28 AM IST
Coronavirus Vaccination: ಕೊರೋನಾಗೆ ಔಷಧಿ ಕಂಡು ಹಿಡಿದಿದ್ದೇನೆ ಎಂದ ವೈದ್ಯರ ವಿರುದ್ಧ ಕ್ರಮಕ್ಕೆ ಮುಂದಾದ ಕೇಂದ್ರ ಆಯುಷ್ ಇಲಾಖೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಏ.14): ಖ್ಯಾತ ಆಯುರ್ವೇದ ತಜ್ಞರಾದ ಡಾ. ಗಿರಿಧರ ಕಜೆ ಕರ್ನಾಟಕ ರಾಜ್ಯ ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​​ಗೆ ಪತ್ರ ಬರೆದಿದ್ದರು. ಕೊರೋನಾ ವೈರಸ್​ ಸೋಂಕಿನಿಂದ ಪಾರಾಗಲು ಆಯುರ್ವೇದಿಕ್ ಔಷಧಿ ಕಂಡು ಹಿಡಿದಿದ್ದೇನೆ. ಇದರಿಂದ ಕೊರೋನಾ ಸೋಂಕಿತರನ್ನು ಗುಣಪಡಿಸಬಹುದು ಎಂದು ಪತ್ರದಲ್ಲಿ ಡಾ. ಗಿರಿಧರ ಕಜೆ ಉಲ್ಲೇಖಿಸಿದ್ದರು. ಇದೀಗ ತಾನು ಸಂಶೋಧಿಸಿರುವ ಔಷಧದಿಂದ ಕೊರೋನಾ ಗುಣಪಡಿಸಬಲ್ಲೆ ಎಂದ ಡಾ. ಗಿರಿಧರ ಕಜೆ ಮೇಲೆ ಕೇಂದ್ರ ಆಯುಷ್ ಇಲಾಖೆ ಗರಂ ಆಗಿದೆ. ಇವರ ವಿರುದ್ಧ ಕೂಡಲೇ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ.


ಡಾ. ಗಿರಿಧರ್​​ ಕಜೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ರಾಜ್ಯ ಆಯುಷ್ ಇಲಾಖೆ ಆಯುಕ್ತರಿಗೆ ಪತ್ರ ಬರೆದಿರುವ ಕೇಂದ್ರ ಸರ್ಕಾರದ ಆಯುಷ್ ಇಲಾಖೆ ಹೀಗೆ ಹೇಳಿದೆ. ಕೊರೋನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳನ್ನು ಪಾಲಿಸಬೇಕು. ಇದವರೆಗೂ ಯಾರು ಕೊರೋನಾಗೆ ಮದ್ದು ಕಂಡು ಹಿಡಿದಿಲ್ಲ. ಹೀಗೆ ಜನರಿಗೆ ಸುಳ್ಳು ಆಶ್ವಾಸನೆ ನೀಡುತ್ತಿರುವ ಡಾ. ಗಿರಿಧರ್ ಕಜೆ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಆದೇಶಿಸಿದೆ.

ಈ ಹಿಂದೆ ಕಳೆದ 23 ವರ್ಷಗಳಿಂದ ಆಯುರ್ವೇದ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಸುಮಾರು 2 ಲಕ್ಷಕ್ಕೂ ಅಧಿಕ ರೋಗಿಗಳನ್ನು ಗುಣಪಡಿಸಿದ ಅನುಭವ ಹೊಂದಿದ್ದೇನೆ. ಡೆಂಗ್ಯು, ಚಿಕನ್ ಗುನ್ಯಾ, ಹೆಚ್1 ಎನ್ 1 ಸೇರಿದಂತೆ ಅನೇಕ ರೋಗಗಳಿಗೆ ಆಯುರ್ವೇದ ಔಷಧದಿಂದ ಮಾತ್ರ ರೋಗಿಗಳನ್ನು ಗುಣಪಡಿಸಲು ಸಾಧ್ಯ. ಸಾಂಕ್ರಾಮಿಕ ರೋಗಗಳ ನಿರ್ವಹಣೆಯ ಕುರಿತಾಗಿ ಆಯುರ್ವೇದದಲ್ಲಿ ಹಲವಾರು ಉಲ್ಲೇಖಗಳಿವೆ. ಈ ಪದ್ಧತಿಯ ಆಧಾರದಲ್ಲಿ ನಾನು ಸಂಶೋಧಿಸಿರುವ 'ಭೌಮ್ಯ' ಸಾಥ್ಮ್ಯ' ಎಂಬ ಔಷಧಗಳು 'ಕೋವಿಡ್ 19' ಅನ್ನು ಗುಣಪಡಿಸಲು ಶಕ್ತವಾಗಿವೆ. ಇದನ್ನು ಬಳಸಿ ಎಂದು ರಾಜ್ಯ ಸರ್ಕಾರಕ್ಕೆ ಡಾ. ಗಿರಿಧರ ಕಜೆ ಪತ್ರ ಬರೆದಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೊರೋನಾಗೆ ಇಬ್ಬರು ಬಲಿ: ರಾಜ್ಯದಲ್ಲಿ ಮೃತರ ಸಂಖ್ಯೆ 10ಕ್ಕೆ ಏರಿಕೆ

ಜತೆಗೆ ಇವು ಆ್ಯಂಟಿ ವೈರಲ್ ಗುಣಮಾತ್ರವನ್ನು ಹೊಂದಿರದೇ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಈ ಔಷಧದ ಬಳಕೆಯಿಂದ ಹಲವು ಪ್ರಯೋಜನಗಳನ್ನು ಕಾಣಬಹುದು ಎಂದು ಡಾ. ಕಜೆ ವಿವರಿಸಿದ್ದರು.
First published: April 14, 2020, 8:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories