HOME » NEWS » Coronavirus-latest-news » AYUSH 64 WHICH WAS USED IN MALARIA TREATMENT CAN BE EFFECTIVELY USED IN MILD AND ASYMPTOMATIC TREATMENT OF CORONA VIRUS SAYS AYUSH MINISTRY SKTV

Coronavirus ಗೆ ಆಯುರ್ವೇದ ರಾಮಬಾಣ, ಸಾಧಾರಣ ಲಕ್ಷಣಗಳಿಗೆ ಆಯುಷ್ - 64 ನಿಂದ ಚಿಕಿತ್ಸೆ

1980ರಲ್ಲಿ ತಯಾರಾದ ಈ ಔಷಧ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದಿತ್ತು.  ಇದೇ ಔಷಧ ಈಗ ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ತಿಳಿಸಿದೆ.

news18-kannada
Updated:April 30, 2021, 3:18 PM IST
Coronavirus ಗೆ ಆಯುರ್ವೇದ ರಾಮಬಾಣ, ಸಾಧಾರಣ ಲಕ್ಷಣಗಳಿಗೆ ಆಯುಷ್ - 64 ನಿಂದ ಚಿಕಿತ್ಸೆ
ಸಾಂದರ್ಭಿಕ ಚಿತ್ರ
  • Share this:
Covid Treatment: ಆಯುರ್ವೇದ ವಿಶ್ವದ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಗಳಲ್ಲೊಂದು. ಜಗತ್ತಿನ ಅನೇಕ ಖಾಯಿಲೆಗಳಿಗೆ ಆಯುರ್ವೇದದಲ್ಲಿ ಚಿಕಿತ್ಸೆ ಇದೆ ಎನ್ನಲಾಗುತ್ತದೆ. ಅದೆಷ್ಟೋ ಬಾರಿ ಅಲ್ಲಿ ಇರುವ ವಿವರಣೆಗಳು ಆಧುನಿಕ ವೈದ್ಯಕೀಯ ಪದ್ಧತಿಗಳಿಗಿಂತಲೂ ಒಂದು ಕೈ ಹೆಚ್ಚೇ ಎನ್ನುವಂತಿದೆ ಎನ್ನುವವರೂ ಇದ್ದಾರೆ. ಇಷ್ಟೆಲ್ಲಾ ಪೀಠಿಕೆ ಹಾಕೋಕೆ ಕಾರಣ ಕೊರೊನಾಗೆ ಆಯುರ್ವೇದದಲ್ಲಿ ಒಂದು ಮದ್ದು ಇದೆ ಎನ್ನುವ ವಿಚಾರ. ಆಯುಷ್ ಸಚಿವಾಲಯ ಈ ವಿಚಾರ ಅಧಿಕೃತವಾಗಿ ಹೊರಬಿದ್ದಿದ್ದು. 1980 ರಲ್ಲಿ ಮಲೇರಿಯಾ ನಿಯಂತ್ರಣಕ್ಕಾಗಿ ಅಭಿವೃದ್ಧಿಪಡಿಸಿದ್ದ ಆಯುಷ್-64 ಔಷಧವನ್ನು ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ಹೇಳಿದೆ.

ಹಿಂದೆ ಮಲೇರಿಯಾ ಕೂಡಾ ದೊಡ್ಡ ಪ್ರಮಾಣದಲ್ಲಿ ಸಾವು ನೋವಿಗೆ ಕಾರಣವಾಗಿತ್ತು. ಆಗ ಮಲೇರಿಯಾ ವೈರಸ್ ಹಾವಳಿ ನಿಯಂತ್ರಿಸಲು ಆಯುಷ್ - 64 ಎನ್ನುವ ಔಷಧವನ್ನು ಅಭಿವೃದ್ಧಿಪಡಿಸಲಾಗಿತ್ತು. 1980ರಲ್ಲಿ ತಯಾರಾದ ಈ ಔಷಧ ವೈರಸ್ ವಿರುದ್ಧ ಯಶಸ್ವಿಯಾಗಿ ಹೋರಾಡಿ ಗೆದ್ದಿತ್ತು.  ಇದೇ ಔಷಧ ಈಗ ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಸೋಂಕಿನ ಪ್ರಕರಣಗಳಲ್ಲಿ ಚಿಕಿತ್ಸೆಗಾಗಿ ಬಳಸಬಹುದೆಂದು ಆಯುಷ್ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಮೂರು ಕೇಂದ್ರಗಳಲ್ಲಿ ಔಷಧದ ಪ್ರಯೋಗವನ್ನು ನಡೆಸಲಾಗಿದೆ ಎಂದು ಪುಣೆಯ ಸಾಂಕ್ರಾಮಿಕ ರೋಗಗಳ ಸೆಂಟರ್ ನಿರ್ದೇಶಕ ಅರವಿಂದ್ ಚೋಪ್ರಾ ವರ್ಚುಯಲ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.  ಲಖನೌದ ಕಿಂಗ್ ಜಾರ್ಜ್ ವೈದ್ಯಕೀಯ ವಿವಿ, ವಾರ್ದಾದ ದತ್ತ ಮೇಘೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ಮುಂಬೈನ ಬಿಎಂಸಿ ಕೋವಿಡ್ ಸೆಂಟರ್  ನಡೆಸಿದ ಪ್ರಯೋಗದಲ್ಲಿ ತಲಾ  70 ಮಂದಿ ಪಾಲ್ಗೊಂಡಿದ್ದರು.

ಆಯುಷ್-64 ಗುಣಮಟ್ಟದ ಆರೈಕೆಗೆ ಸಂಬಂಧಿಸಿದ್ದು, ಮಹತ್ವದ ಸುಧಾರಣೆ ಹಾಗೂ ಆಸ್ಪತ್ರೆಗೆ ದಾಖಲಾಗುವ ಅವಧಿ ಕಡಿಮೆಯಾಗುವುದು ಕಂಡುಬಂದಿದೆ ಎಂದು  ಆಯುಷ್ ಸಚಿವಾಲಯ-ಸಿಎಸ್ ಐಆರ್ ಸಹಭಾಗಿತ್ವದ ಗೌರವಾನಿತ್ವ ಮುಖ್ಯ ಕ್ಲಿನಿಕಲ್
ಸಂಯೋಜಕ ಚೋಪ್ರಾ  ತಿಳಿಸಿದ್ದಾರೆ.

ಕೇವಲ ವೈರಸ್ ವಿರುದ್ಧದ ಹೋರಾಟ ಮಾತ್ರವಲ್ಲ, ಆಯುಷ್-64 ಔಷಧವು ಆತಂಕ, ಒತ್ತಡ, ಆಯಾಸ, ಹಸಿವು, ನಿದ್ರಾಹೀನತೆಯನ್ನೂ ಕಡಿಮೆ ಮಾಡುವ ಶಕ್ತಿ ಹೊಂದಿದೆ. ಒಟ್ಟಾರೆ ಸಾಮಾನ್ಯ ಆರೋಗ್ಯದ ಮೇಲೂ ಅನೇಕ ರೀತಿಯ ತೀವ್ರಗತಿಯ ಪ್ರಯೋಜನಕಾರಿ ಪರಿಣಾಮ ಬೀರಲಿದೆ ಎಂದು ಚೋಪ್ರಾ ತಿಳಿಸಿದ್ದಾರೆ.

ಸೌಮ್ಯ, ಸಾಧಾರಣ ಸ್ವರೂಪದ ಕೋವಿಡ್-19 ಪ್ರಕರಣಗಳ ನಿರ್ವಹಣೆಯಲ್ಲಿ ಆಯುಷ್ -64 ಔಷಧವನ್ನು ಸೇರಿಸುವಂತೆ ರಾಜ್ಯಗಳ ನಿಯಂತ್ರಕರು, ಪ್ರಾಧಿಕಾರಿಗಳಿಗೆ ತಿಳಿಸುವಂತೆ ಆಯುಷ್- ಸಿಎಸ್ ಐಆರ್ ಜಂಟಿ ನಿರ್ವಹಣಾ ಸಮಿತಿ, ಸಚಿವಾಲಯಕ್ಕೆ ಶಿಫಾರಸು ಮಾಡಿದೆ.ಇದನ್ನೂ ಓದಿhttps://kannada.news18.com/news/explained/corona-vaccine-in-karnataka-is-delayed-follow-these-steps-to-develop-immunity-and-stay-away-from-infection-until-then-sktv-558725.html

ಆಯುಷ್-64 ಔಷಧವನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಸುರಕ್ಷಿತ ಮತ್ತು ಪರಿಣಾಮಕಾರಿ ಆಯುರ್ವೇದ ಪದ್ಧತಿಯಾಗಿದೆ. ಆಯುರ್ವೇದ ಮತ್ತು ಯೋಗ ಆಧಾರದ ಮೇಲೆ ನ್ಯಾಷನಲ್ ಕ್ಲಿನಿಕಲ್ ಮ್ಯಾನೇಜ್ ಮೆಂಟ್ ಈ ಔಷಧವನ್ನು
ಶಿಫಾರಸು ಮಾಡಿದೆ ಎಂದು ಆಯುಷ್ ಸಚಿವಾಲಯ ತಿಳಿಸಿದೆ.

ಆಯುಷ್-64 ಅಧ್ಯಯನದಿಂದ ಬರುವ ಫಲಿತಾಂಶವನ್ನು ಸಮಿತಿ ಎಚ್ಚರಿಕೆಯಿಂದ ಪರಿಶೀಲಿಸಿದ್ದು, ಲಕ್ಷಣ ರಹಿತ, ಸೌಮ್ಯ ಹಾಗೂ ಸಾಧಾರಣ ಕೋವಿಡ್-19 ಪ್ರಕರಣಗಳಲ್ಲಿ  ಈ ಔಷಧವನ್ನು ಬಳಸಬಹುದೆಂದು ಶಿಫಾರಸು ಮಾಡಲಾಗಿದೆ ಎಂದು ಐಸಿಎಂಆರ್ ಮಾಜಿ  ಡೈರೆಕ್ಟರ್ ಜನರಲ್ ವಿ ಎಂ ಕಟೋಚ್ ಹೇಳಿದ್ದಾರೆ.
Youtube Video

ಒಟ್ಟನಲ್ಲಿ ಆಯುರ್ವೇದದಲ್ಲಿ ವೈರಸ್ ನ್ನು ಬಗ್ಗುಬಡಿಯುವ ಮಾರ್ಗ ಇರುವುದು ಅನೇಕರಿಗೆ ಸಂತಸ ತಂದಿದೆ. ಎಲ್ಲೆಲ್ಲೂ ಕೊರೊನಾ ಮರಣ ಮೃದಂಗ ಬಾರಿಸುತ್ತಿರುವ ಈ ಹೊತ್ತಿನಲ್ಲಿ ಯಾವ ವಿಧದಿಂದಲಾದರೂ ಸರಿ, ಜನ ಬೇಗನೇ ಗುಣಮುಖರಾದರೆ ಸಾಕು ಎನ್ನುವಂಥಾ ಪರಿಸ್ಥಿತಿ ಇದೆ. ಆಯುರ್ವೇದ ಚಿಕಿತ್ಸೆಯಲ್ಲಿ ಅಡ್ಡಪರಿಣಾಮಗಳು ಇಲ್ಲ ಎನ್ನುವ ನಂಬಿಕೆಯೂ ಜನರಲ್ಲಿ ಇರುವುದರಿಂದ ಆಯುಷ್ 64 ಅನೇಕರಿಗೆ ಆಶಾದಾಯಕ ಆಯ್ಕೆಯಾಗಿ ಕಂಡುಬರುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.
Published by: Soumya KN
First published: April 30, 2021, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories