ರಾಮನಗರದಲ್ಲಿ ಕೊರೋನಾ ನಿಗ್ರಹಕ್ಕೆ ಆಯುರ್ವೇದ ರಾಮಬಾಣ; ಆಯುಷ್ ಇಲಾಖೆಯಿಂದ ಸಿಗಲಿದೆ ಮಾತ್ರೆ, ಪೌಡರ್ 

ತುಳಸಿ ಎಲೆ, ಚಕ್ಕೆ, ಶುಂಠಿ, ಮೆಣಸು, ಚೆನ್ನಾಗಿ ಒಣಗಿಸಿ ಪುಡಿ ಮಾಡಿ  ಆಯುಷ್ ಕ್ವಾಥ, ಆಯುಷ್ ಜೋಶಾಂದಾ ಎಂಬ ಹೆಸರಿನಲ್ಲಿ ತಯಾರು ಮಾಡಲಾಗಿದೆ. ಇದನ್ನ ಕೂಡ ಬಿಸಿ ನೀರಿನಲ್ಲೆ ಚೆನ್ನಾಗಿ ಕುದಿಯಿಸಿ ನಂತರ ರುಚಿಗೆ ತಕ್ಕಂತೆ ಬೆಲ್ಲ ಹಾಗೂ ನಿಂಬೆಹಣ್ಣು ರಸ ಹಾಕಿಕೊಂಡು‌ ಕೂಡ ಕುಡಿಯಬಹುದು. ಆಗ ರೋಗ ನಿರೋಧಕ ಶಕ್ತಿ‌ ಹೆಚ್ವಿಸುವ ಕೆಲಸವನ್ನ ಈ ಔಷಧಿಗಳು ಮಾಡುತ್ತವೆ.

news18-kannada
Updated:July 12, 2020, 1:59 PM IST
ರಾಮನಗರದಲ್ಲಿ ಕೊರೋನಾ ನಿಗ್ರಹಕ್ಕೆ ಆಯುರ್ವೇದ ರಾಮಬಾಣ; ಆಯುಷ್ ಇಲಾಖೆಯಿಂದ ಸಿಗಲಿದೆ ಮಾತ್ರೆ, ಪೌಡರ್ 
ಸಾಂದರ್ಭಿಕ ಚಿತ್ರ
  • Share this:
ರಾಮನಗರ(ಜು.12): ಆರ್ಯುವೇದ ಎನ್ನುವ  ಹೆಸರನ್ನ ಸಾಮಾನ್ಯವಾಗಿ ಎಲ್ಲರೂ ಸಹ ಕೇಳಿದ್ದಾರೆ. ಆದರೆ ಪ್ರಸ್ತುತ ದಿನಮಾನಸದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರೇ ಈ ಆರ್ಯುವೇದ.  ರೋಗ ನಿರೋಧಕ ಶಕ್ತಿ ಗುಣಗಳು ಹೆಚ್ಚಾಗಿ ಈ ಆರ್ಯುವೇದ ಗಿಡಮೂಲಿಕೆ ಸಸ್ಯಗಳಲ್ಲಿ ಇರುತ್ತೆ. ಅದರಂತೆ ಆಯುಷ್ ಇಲಾಖೆ ಕೂಡ ಕೊರೋನಾ ನಿವಾರಣೆಗೆ ಸಾಕಷ್ಟು ಪ್ರಯತ್ನ ನಡೆಸುತ್ತಿದೆ. ಜನತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹಲವು ಔಷದಿಗಳನ್ನ ತಯಾರಿಸಿ ವಿತರಿಸಲು ನಿರ್ಧರಿಸಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

ಹೌದು, ಆರ್ಯುವೇದ ಅನ್ನೋದು ಪ್ರಸ್ತುತ ದಿನಗಳಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಪದ. ನೈಸರ್ಗಿಕ ಗಿಡಮೂಲಿಕೆಯಿಂದ ತಯಾರಾಗುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದೇ ಈ ಆರ್ಯುವೇದ ಔಷಧಿಗಳು. ಗತಕಾಲದ ಇತಿಹಾಸವನ್ನ ಮೆಲುಕು ಹಾಕಿ ನೋಡಿದ್ರೆ,  ಋಷಿಮುನಿಗಳು ಹೆಚ್ಚಾಗಿ ಆರ್ಯುವೇದ ಗಿಡ ಮೂಲಿಕೆ ಔಷಧಿಗಳನ್ನ ತಯಾರು ಮಾಡುತ್ತಿರುದನ್ನ ಕೇಳಿರುತ್ತೇವೆ. ಆದ್ರೆ ಇತ್ತೀಚೆಗೆ ಆಧುನಿಕತೆ ಬೆಳೆದಂತೆ ಇಂಗ್ಲಿಷ್ ಮೆಡಿಸಿನ್ ಗಳು ಬಂದು ಗಿಡ ಮೂಲಿಕೆಯಿಂದ ತಯಾರಾಗುತ್ತಿದ್ದ ಆರ್ಯುವೇದ ಔಷಧಿಗಳಿಗೆ ಬೇಡಿಕೆ ಸಂಪೂರ್ಣ ಕಡಿಮೆ ಆಗಿ ಹೋಗಿದೆ.

ಪ್ರಸ್ತುತ ವಿದ್ಯಾಮಾನದಲ್ಲಿ ವಿಶ್ವವ್ಯಾಪಿ ಈಗ ಕೊರೋನಾ ರೋಗ ಹರಡುತ್ತಿದ್ದಂತೆ ಮತ್ತೊಮ್ಮೆ ಈಗ ಜನರು ಆರ್ಯುವೇದದ ಮೊರೆ ಹೋಗುತ್ತಿದ್ದಾರೆ. ಆರ್ಯುವೇದದಲ್ಲಿ ಹೆಚ್ಚಾಗಿ ರೋಗ ನಿರೋಧಕ ಶಕ್ತಿ ಇದೆ ಎಂದು ಎಲ್ಲರೂ ಕೂಡ ಆರ್ಯುವೇದದಿಂದ ತಯಾರಾದ ವಸ್ತುಗಳನ್ನು ಹೆಚ್ಚಾಗಿ ಬಳಸಲು ಮುಂದಾಗುತ್ತಿದ್ದಾರೆ. ಪ್ರಕೃತಿ ಮಡಿಲಲ್ಲೇ ಅನೇಕ ಗಿಡ ಮೂಲಿಕೆಗಳು ಇವೆ. ಇದರಿಂದಲೆ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಗಳನ್ನ ಹೆಚ್ಚಿಸಿಕೊಳ್ಳಬಹುದು. ಇದರಿಂದಲೇ ಜನತೆ ಇತ್ತೀಚಿಗೆ ಆರ್ಯುವೇದ ಔಷದಿ ಕಡೆ ಹೆಚ್ಚು ಗಮನ ನೀಡ್ತಿದ್ದಾರೆ ಎನ್ನಲಾಗಿದೆ.

Coronavirus Bangalore Updates: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ 30 ಕೈದಿಗಳಿಗೆ ಕೊರೋನಾ ಪಾಸಿಟಿವ್

ಇದಲ್ಲದೆ ರೇಷ್ಮೆ ನಗರಿ ರಾಮನಗರ ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಹೆಚ್ಚಾಗುತ್ತಲೆ ಇದೆ. ಜಿಲ್ಲೆಯಲ್ಲಿ ಇದುವರೆಗೂ ಕೊರೋನಾ ಪಾಸಿಟಿವ್ ಸಂಖ್ಯೆ 400 ಗಡಿ ತಲುಪುತ್ತಿದೆ. ಮನುಷ್ಯನಿಗೆ ದೇಹದ ರೋಗ ನಿರೋಧಕ ಶಕ್ತಿ  ಹೆಚ್ಚಿಸಲು ಜಿಲ್ಲೆಯ ಆಯುಷ್ ಇಲಾಖೆ ಸಹ ಸಕಲ ರೀತಿಯಲ್ಲೂ ಮುಂದಾಗಿದೆ‌. ಇಲಾಖೆ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸುಲಭವಾಗಿ ಸಿಕ್ಕುವ ಮಾತ್ರೆಗಳು, ಔಷಧಿಗಳನ್ನ ಸರಬರಾಜು ಮಾಡಲಾಗುತ್ತಿದೆ.

ಹೋಮಿಯೋಪತಿಯಿಂದ ತಯಾರಾದ ಮಾತ್ರೆಗಳು, ಆರ್ಯುವೇದ ಮಾತ್ರೆಗಳಾದ ಸಮ್ ಸಮ್ ಮನಿ ವಾಟಿ ಮಾತ್ರೆ ತೆಗೆದುಕೊಳ್ಳುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕೆಲಸ ಮಾಡುತ್ತೆ. ಇದಲ್ಲದೆ ಉಸಿರಾದ ತೊಂದರೆ ಇರುವವರು ಯುನಾನಿನಲ್ಲಿ ತಯಾರಾದ ಅರ್ಕಾ ಅಜೀಬ್  ಒಂದು ಹನಿ ಬಿಸಿ ನೀರಿಗೆ ಹಾಕಿ ಕುಡಿದ್ರೆ ಶ್ವಾಸನಾಳಕ್ಕೆ ಹೋಗಿ ಉಸಿರಾಟ ಆರಾಮಾಗಿರಲು ಅನುಕೂಲವಾಗುತ್ತೆ. ಅದರಂತೆ ಮೊದಲ ಹಂತವಾಗಿ ಕೊರೊನಾ ವಾರಿಯರ್ಸ್ ಗಳಿಗೆ ಈ ಔಷಧಿಗಳನ್ನ ಇಲಾಖೆ ವತಿಯಿಂದ ನೀಡಲಾಗುತ್ತಿದೆ.

ಹಾಗೆಯೇ ತುಳಸಿ ಎಲೆ, ಚಕ್ಕೆ, ಶುಂಠಿ, ಮೆಣಸು, ಚೆನ್ನಾಗಿ ಒಣಗಿಸಿ ಪುಡಿ ಮಾಡಿ  ಆಯುಷ್ ಕ್ವಾಥ, ಆಯುಷ್ ಜೋಶಾಂದಾ ಎಂಬ ಹೆಸರಿನಲ್ಲಿ ತಯಾರು ಮಾಡಲಾಗಿದೆ. ಇದನ್ನ ಕೂಡ ಬಿಸಿ ನೀರಿನಲ್ಲೆ ಚೆನ್ನಾಗಿ ಕುದಿಯಿಸಿ ನಂತರ ರುಚಿಗೆ ತಕ್ಕಂತೆ ಬೆಲ್ಲ ಹಾಗೂ ನಿಂಬೆಹಣ್ಣು ರಸ ಹಾಕಿಕೊಂಡು‌ ಕೂಡ ಕುಡಿಯಬಹುದು. ಆಗ ರೋಗ ನಿರೋಧಕ ಶಕ್ತಿ‌ ಹೆಚ್ವಿಸುವ ಕೆಲಸವನ್ನ ಈ ಔಷಧಿಗಳು ಮಾಡುತ್ತವೆ. ಇದನ್ನ ಸರ್ಕಾರ ಉಚಿತವಾಗಿ ನೀಡುತ್ತಿದೆ., ಕೊರೋನಾ ಸೋಂಕಿಗೆ ಒಳಗಾಗಿರುವವರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ರಾಮನಗರ ಜಿಲ್ಲಾ ಆಯುಷ್ ಇಲಾಖೆ ಅಧಿಕಾರಿ ರಾಜಲಕ್ಷ್ಮೀ ನ್ಯೂಸ್ 18 ಗೆ ತಿಳಿಸಿದ್ದಾರೆ.

ಒಟ್ಟಾರೆ ಆಯುಷ್ ಇಲಾಖೆ ಜನರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಕೊರೋನಾ ಮುಕ್ತ ಮಾಡಲು ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ಕೂಡ ಈ ಇಲಾಖೆಯ ಪ್ರಯತ್ನಕ್ಕೆ ಕೈಜೋಡಿಸಿ ಕೊಟ್ಟು ಹೆಚ್ಚು ಸದುಪಯೋಗ ಪಡಿಸಿಕೊಂಡರೆ ಒಳ್ಳೆಯದು.
Published by: Latha CG
First published: July 12, 2020, 1:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading