ಕೊರೊನಾ ವೈರಸ್​ ರಹಸ್ಯದ ಜೊತೆಗೆ ಮದ್ದನ್ನು ಸೂಚಿಸಿದ ಅವಧೂತ ವಿನಯ್ ಗುರೂಜಿ; ಔಷಧ ಏನು ಗೊತ್ತೇ?

ಶಿರಡಿ ಸಾಯಿಬಾಬಾ ಮತ್ತು ಮಂತ್ರಾಲಯಕ್ಕಿಂತಲೂ ಹೆಚ್ಚು ಶಕ್ತಿ ಇರುವುದು ಈ ಶಿವನ ದೇವಾಲಯಕ್ಕೆ ಮಾತ್ರ. ಈ ಜಾಗವು ಮುಂದಿನ ದಿನಗಳಲ್ಲಿ ಕೇದಾರನಾಥವಾಗಲಿದೆ. ಈ ಸ್ಥಳಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು. 

ಅವಧೂತ ವಿನಯ್ ಗುರೂಜಿ.

ಅವಧೂತ ವಿನಯ್ ಗುರೂಜಿ.

 • Share this:
  ಹಾಸನ: ಆರು ಸಾವಿರ ವರ್ಷಗಳ ಇತಿಹಾಸವಿರುವ ತಾಳೆ ಗರಿಯಲ್ಲಿ, ಏನು ಬರೆದಿದೆ ಈಗ ಅದೇ  ಆಗುತ್ತಿದೆ. ಮುಂದೇನೂ ಅದೇ ಆಗಲಿದೆ. ಈಶಾನ್ಯ ದಿಕ್ಕಿನಲ್ಲಿ ಬೀಸುವ ವಿಷಗಾಳಿಗೆ ಸಿಲುಕಿ ಲಕ್ಷಾಂತರ ಮಂದಿ ಸಾವನ್ನಪ್ಪುತ್ತಾರೆ ಎಂಬ ಮಾಹಿತಿ ಬರೆದಿತ್ತು. ಈಗ ಆಗುತ್ತಿರುವುದು ಅದೇ. ಚೀನಾದಿಂದ ಈ ಕೊರೊನಾ ವೈರಸ್ ಬಂದಿದೆ. ಈ ತಾಳೆಗರಿಯಲ್ಲಿ ಎಲ್ಲವೂ ದಾಖಲೆ ಇದೆ. ಪ್ರಪಂಚದಲ್ಲಿ ನೆಡೆಯುವ ಕಠೋರ ಸತ್ಯ ಈ ತಾಳೆ ಗರಿಯಲ್ಲಿ ಇದೆ ಎಂದು ವಿನಯ್ ಗುರೂಜಿ ಹೇಳಿದ್ದಾರೆ.

  ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಶಿವನ ದೇವಾಲಯದ ಶಂಕುಸ್ಥಾಪನೆ ವೇಳೆ ಮಾತನಾಡಿದ ಅವಧೂತ ವಿನಯ್ ಗುರೂಜಿ, ದೇವರು ಎಲ್ಲಿದ್ದಾನೆ ಎಂದು  ಚೀನಾದವರು ಕೇಳುತ್ತಾರೆ. ನಾವು ಗೋವನ್ನು ದೇವರಾಗಿ ಪೂಜಿಸುತ್ತೇವೆ, ಗೋವು ಆಮ್ಲಜನಕ ತೆಗೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ. ಮುಂದುವರಿದ ದೇಶದಲ್ಲಿ ಕೊರೊನಾ ವೈರಸ್​ಗೆ ಮದ್ದು ಕಂಡುಹಿಡಿಯುವುದಕ್ಕೆ ಆಗಿಲ್ಲ. ಆದರೆ ಕೊರೊನಾ ವೈರಸ್​ ಮದ್ದು ಕಂಡುಹಿಡಿಯುವುದಕ್ಕೆ ಆಗಲ್ಲ ಅನ್ನೋದು ಮೂರ್ಖತನ. ಕೊರೊನಾ ವೈರಸ್​ಗೆ ಹಸುವಿನ ಗೋ ಮೂತ್ರವೇ ಮದ್ದು. ಎಚ್​1 ಎನ್​ 1ಗೆ ಅಮೃತ ಬಳ್ಳಿ ಉತ್ತರ ಕೊಡಲಿಲ್ಲವೇ. ಹಾಗೆಯೇ ಗೋ ಮೂತ್ರದೊಂದಿಗೆ 40 ಗಿಡಮೂಲಿಕೆಗಳನ್ನು ಸೇರಿಸಿದರೆ ಕೊರೊನಾ ವೈರಸ್​ ಗುಣಪಡಿಸಬಹುದು ಎಂಬ ಉಲ್ಲೇಖ ತಾಳೆಗರಿಯಲ್ಲಿದೆ ಎಂದು ಹೇಳಿದರು.

  ಒಂದು ಸಣ್ಣ ವೈರಸ್ ಇಡೀ ಜಗತ್ತನ್ನ ಅಲ್ಲಾಡಿಸುತ್ತಿದೆ. ಜನಗಳನ್ನು ಖಾಲಿ ಮಾಡಿಸಲು ಏನು ಮಾಡಬೇಕು ಎಂದು ಹಲವು ಮಾರ್ಗಗಳನ್ನು ಕಂಡಿದ್ದಾರೆ. ಯಾವಾಗ ಧರ್ಮಯುಕ್ತ ರಾಜಕಾರಣಿಗಳು ಬರುತ್ತಾರೋ ಆಗ ಈ ಸ್ಥಳ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

  ಶಿರಡಿ ಸಾಯಿಬಾಬಾ ಮತ್ತು ಮಂತ್ರಾಲಯಕ್ಕಿಂತಲೂ ಹೆಚ್ಚು ಶಕ್ತಿ ಇರುವುದು ಈ ಶಿವನ ದೇವಾಲಯಕ್ಕೆ ಮಾತ್ರ. ಈ ಜಾಗವು ಮುಂದಿನ ದಿನಗಳಲ್ಲಿ ಕೇದಾರನಾಥವಾಗಲಿದೆ. ಈ ಸ್ಥಳಕ್ಕೆ ಮುಂದಿನ ಎರಡು ವರ್ಷಗಳಲ್ಲಿ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ ಎಂದು ಭವಿಷ್ಯ ನುಡಿದರು.

  ಇದನ್ನು ಓದಿ: ಚೀನಾದಲ್ಲಿ ಕೊರೊನಾ: ಭಾರತದ ಆರ್ಥಿಕತೆ ಮೇಲೆ ಏನು ಪರಿಣಾಮ? ಯಾವ್ಯಾವ ವಸ್ತು ದುಬಾರಿ?

  ಗಾಂಧಿವಾದಿಗಳನ್ನು ಟೀಕಿಸುವವರನ್ನು ವಿನಯ್ ಗುರೂಜಿ ಗೇಲಿ ಮಾಡಿದರು. ಎಣ್ಣೆ ಹೊಡೆಯಲು ಗಾಂಧಿ ನೋಟು ಬೇಕು, ಒಳ್ಳೆಯ ಕೆಲಸ ಮಾಡಲು ಗಾಂಧಿ ನೋಟು ಬೇಕು. ಆದರೆ ಗಾಂಧಿವಾದ ಬೇಡವಾದರೆ ಆತ ಭಿಕ್ಷುಕನಾಗುತ್ತಾನೆ ಮತ್ತೆ ಭಿಕ್ಷೆ ನೀಡಲು ಗಾಂಧಿ ನೋಟು ಬೇಕು ಎಂದು ಹೇಳಿದರು.
  First published: