ಸೋಂಕಿತರನ್ನು ಆಟೋದಲ್ಲಿ ಕರೆದೊಯ್ದಿದ್ದ ಚಾಲಕ ಹಾಗೂ ಆತನ ಸಂಪರ್ಕದಲ್ಲಿದ್ದವರ ಕ್ವಾರಂಟೈನ್

ಅಧಿಕಾರಿಯೊಬ್ಬರು ಹೋಟೆಲ್ ಕ್ವಾರಂಟೈನ್‍ನಲ್ಲಿದ್ದ ದಂಪತಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಬದಲು ಆಟೊ ರಿಕ್ಷಾದಲ್ಲಿ ಕಳುಹಿಸಿ ಎಡವಟ್ಟು ಮಾಡಿದ್ದಾರೆ.

news18-kannada
Updated:May 26, 2020, 10:30 AM IST
ಸೋಂಕಿತರನ್ನು ಆಟೋದಲ್ಲಿ ಕರೆದೊಯ್ದಿದ್ದ ಚಾಲಕ ಹಾಗೂ ಆತನ ಸಂಪರ್ಕದಲ್ಲಿದ್ದವರ ಕ್ವಾರಂಟೈನ್
ಸಾಂದರ್ಭಿಕ ಚಿತ್ರ
  • Share this:
ಕಾರವಾರ(ಮೇ.26): ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ಮುಂಬೈನಿಂದ ಬರುವವರಿಂದ ಆತಂಕ ಮನೆ ಮಾಡಿರುವುದು ಒಂದಡೆಯಾದರೆ ಅವರನ್ನು ಸಂಪರ್ಕಿಸಿದವರಿಂದ ಕೊರೋನಾ ಇನ್ನಷ್ಟು ಆತಂಕ ಮೂಡಿದೆ. ಹೊರ ರಾಜ್ಯದಿಂದ ಬಂದು ಖಾಸಗಿ ಹೊಟೇಲ್‍ನಲ್ಲಿ ಕ್ವಾರಂಟೈನ್ ಆಗಿದ್ದ ಒಂದೇ ಕುಟುಂಬದ ಇಬ್ಬರಲ್ಲಿ ಕೊರೋನಾ ದೃಢಪಟ್ಟ ಬೆನ್ನಲ್ಲಿಯೇ ಅಧಿಕಾರಿಯೊಬ್ಬರ ಎಡವಟ್ಟಿನಿಂದ ಸೋಂಕಿತರು ಆಟೋದಲ್ಲಿ ಸುತ್ತಾಡಿರುವ ಆಘಾತಕಾರಿ ಸುದ್ದಿಯೊಂದು ಬೆಳಕಿಗೆ ಬಂದಿದೆ.

ಮುಂಬೈನಲ್ಲಿ ಉದ್ಯಮಿಯಾಗಿರುವ ಪಟ್ಟಣ ಮೂಲದ ವ್ಯಕ್ತಿಯೊಬ್ಬರು ಮೇ 15ರಂದು ಅಲ್ಲಿಂದ ತಮ್ಮ ಪತ್ನಿ ಹಾಗೂ ಮಗುವಿನೊಂದಿಗೆ ಹೊನ್ನಾವರಕ್ಕೆ ಬಂದು ಲಾಡ್ಜ್ ವೊದರಲ್ಲಿ ಕ್ವಾರಂಟೈನ್ ಆಗಿದ್ದರು. ಮೊದಲ ದಿನ ಉದ್ಯಮಿಯಲ್ಲಿ, ನಂತರ ಅವರ ಪತ್ನಿಯಲ್ಲೂ ಸೋಂಕು ದೃಢಪಟ್ಟಿತ್ತು. ಈವರೆಗೆ ಪಟ್ಟಣದಲ್ಲಿ ಎಂಟು ಸೋಂಕಿತರು ಪತ್ತೆಯಾಗಿದ್ದರೂ ಎಲ್ಲರೂ ಕ್ವಾರಂಟೈನ್‍ನಲ್ಲಿದ್ದವರಾದ ಕಾರಣ ತಾಲೂಕಿನ ಜನತೆ ಭಯ ಪಡಬೇಕಾದ ಅಗತ್ಯ ಇಲ್ಲ ಎನ್ನಲಾಗುತಿತ್ತು. ಆದರೆ, ಅಧಿಕಾರಿಯೊಬ್ಬರ ಎಡವಟ್ಟು ಇಡೀ ಪಟ್ಟಣದ ಜನತೆಯನ್ನು ಆತಂಕಕ್ಕೆ ನೂಕಿದೆ.

ಕ್ವಾರಂಟೈನ್‍ನಲ್ಲಿದ್ದವರನ್ನು ಆ್ಯಂಬ್ಯುಲೆನ್ಸ್ ಮೂಲಕ ಅಥವಾ ಅವರೇ ನೇರವಾಗಿ ತಮ್ಮ ವಾಹನದಲ್ಲಿ ಆಸ್ಪತ್ರೆಗೆ ತೆರಳಿ, ತಪಾಸಣೆಗೆ ಒಳಗಾಗಿ ಗಂಟಲು ದ್ರವದ ಮಾದರಿಯನ್ನು ನೀಡಬೇಕಿದೆ. ಆದರೆ, ಅಧಿಕಾರಿಯೊಬ್ಬರು ಹೋಟೆಲ್ ಕ್ವಾರಂಟೈನ್‍ನಲ್ಲಿದ್ದ ದಂಪತಿ ಆಸ್ಪತ್ರೆಗೆ ಆ್ಯಂಬ್ಯುಲೆನ್ಸ್ ವ್ಯವಸ್ಥೆ ಮಾಡುವ ಬದಲು ಆಟೊ ರಿಕ್ಷಾದಲ್ಲಿ ಕಳುಹಿಸಿ ಎಡವಟ್ಟು ಮಾಡಿದ್ದಾರೆ.

ಅಧಿಕಾರಿಯ ಆಹ್ವಾನದ ಮೇರೆಗೆ ಪಟ್ಟಣದ ಆಟೋ ಚಾಲಕನೊಬ್ಬ ಮೇ 17ರಂದು ಕ್ವಾರಂಟೈನ್‍ನಲ್ಲಿದ್ದ ದಂಪತಿಯನ್ನು ಹಾಗೂ ಅವರ ಮಗುವನ್ನು ತನ್ನ ಆಟೋದಲ್ಲಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಪುನ: ಲಾಡ್ಜ್ ಗೆ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮೇ 22ರಂದು ದಂಪತಿಯ ಪೈಕಿ ಪತಿಯ ಗಂಟಲಿನ ದ್ರವದ ಪ್ರಯೋಗಾಲಯದ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು, ಆಟೋ ಚಾಲಕನನ್ನು ಹುಡುಕಿ ಹೋಮ್​ ಕ್ವಾರಂಟೈನ್ ಮಾಡುವಂತೆ ಸೂಚಿಸಿದ್ದಾರೆ. ಆತನೊಂದಿಗೆ ಮನೆಯಲ್ಲಿದ್ದ ಮೂವರ ಗಂಟಲು ದ್ರವವನ್ನು ತೆಗೆದು ಪ್ರಯೋಗಾಲಯಕ್ಕೆ ಪರೀಕ್ಷೆಗೆ ಕಳುಹಿಸಿದ್ದಾರೆ. ಸೋಂಕಿತರನ್ನು ಕರೆದೊಯ್ದಿದ್ದ ಆಟೋ ಚಾಲಕನ ಸಂಪರ್ಕಕ್ಕೆ ಬಂದಿದ್ದ ಪಟ್ಟಣದ ಆಟೋ ಸ್ಟ್ಯಾಂಡ್‍ನಲ್ಲಿನ ಸುಮಾರು 9 ಮಂದಿ ಆಟೋ ಚಾಲಕರಿಗೆ ಹೋಮ್ ಕ್ವಾರಂಟೈನ್‍ಗೆ ಸೂಚಿಸಿದ್ದಾರೆ.

ಮೇ 17ರಿಂದ 22ರ ವರೆಗೆ ಆಟೋ ಚಾಲಕ ಸಾಕಷ್ಟು ಜನರನ್ನು ಸಂಪರ್ಕಿಸಿರುವ ಸಾಧ್ಯತೆ ಇದ್ದು, ತಾಲೂಕಿನಲ್ಲಿ ತಲ್ಲಣ ಮೂಡಿಸಿದೆ. ತಾಲೂಕಿನಲ್ಲಿ ಕೊರೋನಾ ಸಮುದಾಯಕ್ಕೆ ಹರಡುವ ಎಂಬ ಆತಂಕ ಎದುರಾಗಿದೆ.

ಇದನ್ನೂ ಓದಿ : ಬಸವನಾಡು ವಿಜಯಪುರಕ್ಕೆ ಮಹಾ ಭಯ; ಮತ್ತಷ್ಟು ಸೋಂಕು ಹೆಚ್ಚಾಗೋ ಭೀತಿ

ಈ ಬಗ್ಗೆ ಆಟೋ ಚಾಲಕ ಪ್ರತಿಕ್ರೆಯೆ ನೀಡಿದ್ದು, ‘ನನಗೆ ಲಾಡ್ಜ್ ನಲ್ಲಿ ಇದ್ದವರು ಹೊರ ರಾಜ್ಯದಿಂದ ಬಂದವರು ಎನ್ನುವ ಯಾವುದೇ ಮಾಹಿತಿ ಇರಲಿಲ್ಲ. ಸಾಮಾನ್ಯ ಪ್ರಯಾಣಿಕರು ಎಂದುಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದೆ. ಆದರೆ ಪುನ: ಲಾಡ್ಜ್‍ಗೆ ಬಂದಾಗ ಗೊತ್ತಾಯಿತು. ಆಟೋವನ್ನು ಸ್ಯಾನಿಟೈಸ್ ಮಾಡಿದ್ದು, ಸ್ನಾನ ಮಾಡಿ ಮನೆಯೊಳಗೆ ಹೋಗಿದ್ದೇನೆ. ಆದರೆ ಈಗ ನಾನು ತೊಂದರೆ ಅನುಭವಿಸುತ್ತಿದ್ದೇನೆ’ ಎಂದು ನೊಂದು ನುಡಿದಿದ್ದಾನೆ.
First published: May 26, 2020, 10:26 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading