ಕೊಡಗು(ಆ.02): ಚೀನಾದಲ್ಲಿ ಹುಟ್ಟಿದ ಕೊರೋನಾ ಮಹಾಮಾರಿ ಭಾರತಕ್ಕೂ ಪ್ರವೇಶಿಸಿ ಬೆಂಬಿಡದೇ ಜನರನ್ನು ಕಾಡುತ್ತಿದೆ. ಆದರೆ, ಅದು ಎಲ್ಲರಿಗೂ ಹರಡದಂತೆ ಬ್ರೇಕ್ ಹಾಕೋದಕ್ಕೆ ಕೇಂದ್ರ ಸರ್ಕಾರವೇ ಎರಡು ತಿಂಗಳ ಕಾಲ ದೇಶವನ್ನೆ ಲಾಕ್ಡೌನ್ ಮಾಡಿತ್ತು. ಪರಿಣಾಮ ದೇಶದ ಪ್ರತೀ ಕ್ಷೇತ್ರದ ದುಡಿಯುವ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಬೇಕಾಯಿತು.
ಆದರೆ, ಕೆಲವು ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಜನರ ಸಂಕಷ್ಟಕ್ಕೆ ಸ್ಪಂದಿಸಲು ಕೇಂದ್ರ ರಾಜ್ಯ ಸರ್ಕಾರಗಳು ಆರ್ಥಿಕ ಧನಸಹಾಯ ಘೋಷಣೆ ಮಾಡಿದವು. ಹಾಗೆಯೇ ರಾಜ್ಯ ಸರ್ಕಾರ ಕ್ಷೌರಿಕ ವೃತ್ತಿ ಮತ್ತು ಆಟೋ ಓಡಿಸಿಕೊಂಡು ಬದುಕುತ್ತಿರುವವರಿಗೆ ಧನಸಹಾಯ ಘೋಷಣೆ ಮಾಡಿತು. ಎಷ್ಟೋ ಒಂದಿಷ್ಟು ನೆರವು ಸಿಗುತ್ತದೆ ಎಂದು ಜನರು ಅರ್ಜಿ ಸಲ್ಲಿಸಿದ್ದರು.
ಇದುವರೆಗೂ ಅರ್ಜಿ ಸಲ್ಲಿಸಿದ ಕೊಡಗು ಜಿಲ್ಲೆಯ ಶೇಕಡವಾರು 65ಕ್ಕಿಂತಲೂ ಹೆಚ್ಚು ಫಲಾನುಭವಿಗಳಿಗೆ ಇದುವರೆಗೆ ಯಾವುದೇ ಧನಸಹಾಯ ಸಿಕ್ಕಿಲ್ಲ. ಒಂದು ಬಾರಿ ಅರ್ಜಿ ಸಲ್ಲಿಸಿದ್ದು ಸರಿಯಿಲ್ಲ ಅಂತಾ ಮತ್ತೊಮ್ಮೆಯೂ ಅರ್ಜಿ ಸಲ್ಲಿದ್ದೇವೆ. ಆದರೆ ನಮ್ಮ ಖಾತೆಗೆ ಒಂದು ಬಿಡಿಗಾಸು ಸಿಕ್ಕಿಲ್ಲ ಎನ್ನೋದು ಜನರ ಅಳಲು.
ಇತ್ತ ಲಾಕ್ಡೌನ್ ತೆರವಾಗಿದ್ದರೂ ಕೊರೋನಾ ಭೀತಿಯಿಂದ ಜನರ ಓಡಾಟವೂ ಇಲ್ಲ. ಹೀಗಾಗಿ ನಮ್ಮ ಬದುಕು ದುಸ್ತರವಾಗಿದೆ ಎನ್ನೋದು ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿ ರವಿ ಅವರ ಅಳಲು.
ಕರ್ನಾಟಕದಲ್ಲೂ ಮಾರಕ ಕೊರೋನಾ ವೈರಸ್ ಹಬ್ಬುತ್ತಿದೆ. ಈ ಹಿನ್ನಲೆಯಲ್ಲಿ ಇಡೀ ರಾಜ್ಯಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿತ್ತು. ಇದೇ ಕಾರಣಕ್ಕೆ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಬಡವರಿಗೆ ಸಹಾಯ ಧನ ನೀಡಲು ನಿರ್ಧರಿಸಿತ್ತು.
ಇದನ್ನೂ ಓದಿ: Heavy Rain: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆ
ರೈತರು, ನೇಕಾರರು, ಅರ್ಚಕರು, ಸವಿತಾ ಸಮಾಜದ ಕ್ಷೌರಿಕರು, ಕುಂಬಾರರು, ಕಾರ್ಮಿಕರು, ಮಹಿಳೆಯರು ಸೇರಿದಂತೆ ಹಲವರಿಗೆ ಸರ್ಕಾರ ಪ್ಯಾಕೇಜ್ ಘೋಷಿಸಿತ್ತು. ಇನ್ನು, ಅರ್ಜಿ ಸಲ್ಲಿಸಲು ದಲ್ಲಾಳಿಗಳ ಕಾಟ ಒಂದೆಡೆಯಾದರೇ, ಸಲ್ಲಿಸದ ಮೇಲೆ ಪರಿಹಾರ ಹಣ ನೀಡದ ಸರ್ಕಾರದ ಕಾಟ ಮತ್ತೊಂದು ಕಡೆ. ಇದರ ನಡುವೆ ಪ್ಯಾಕೇಜ್ ಕೇವಲ ಹೆಸರಿಗೆ ಮಾತ್ರ ಘೋಷಿಸಿದರೂ ಹಣ ಮಾತ್ರ ತಲುಪಬೇಕಾದ ಜನರಿಗೆ ಸಿಕ್ಕೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ