HOME » NEWS » Coronavirus-latest-news » AUTHORITIES TO DECIDE TODAY ON PERMITTING FOR SPUTNIK VACCINE USAGE IN INDIA DBDEL SNVS

ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ

ರಷ್ಯಾದ ಸ್ಪುಟ್ನಿಕ್ ಅಭಿವೃದ್ಧಿಸಿರುವ ಲಸಿಕೆಯನ್ನ ಭಾರತದ ರೆಡ್ಡೀಸ್ ಲ್ಯಾಬ್​ನಿಂದ ಪ್ರಯೋಗ ಮಾಡಲಾಗಿದ್ದು, ಅದರ ದತ್ತಾಂಶಗಳ ಸಲ್ಲಿಕೆಯಾಗಿದೆ. ಅದರ ಆಧಾರದ ಮೇಲೆ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬುದು ಇಂದು ನಿರ್ಧಾರವಾಗಲಿದೆ.

news18-kannada
Updated:April 12, 2021, 2:10 PM IST
ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ
ಕೋವಿಡ್ ಲಸಿಕೆ
  • Share this:
ನವದೆಹಲಿ(ಏ. 12): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಈಗ ಪ್ರತಿ ದಿನ ಒಂದು ಲಕ್ಷಕ್ಕೂ ಹೆಚ್ಚು ಜನರು‌ ಕೊರೋನಾ ಸೋಂಕು ಪೀಡಿತರಾಗುತ್ತಿದ್ದಾರೆ. ಏಪ್ರಿಲ್ 1 ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೊರೋನಾ ಲಸಿಕೆ ನೀಡುವ ಅಭಿಯಾನವನ್ನೂ ಕೈಗೆತ್ತಿಕೊಳ್ಳಲಾಗಿದೆ. ಕೆಲ ರಾಜ್ಯಗಳು ಇನ್ನೂ ಹೆಚ್ಚಿನ‌ ಕೊರೋನಾ ಲಸಿಕೆ ಕೊಡಿ ಎಂದು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿವೆ. ಇದರಿಂದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳ ಜೊತೆಗೆ ಮತ್ತೊಂದು ಲಸಿಕೆಯ ಅಗತ್ಯ ಕಂಡುಬರುತ್ತಿದೆ. ಈ‌ ಹಿನ್ನೆಲೆಯಲ್ಲಿ ಶೀಘ್ರವೇ ಸ್ಪುಟ್ನಿಕ್ ಲಸಿಕೆ ಬಳಕೆಗೆ ಅನುಮತಿ ನೀಡುವ ಬಗ್ಗೆ ಇಂದು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ರಷ್ಯಾದಲ್ಲಿ ಸಿದ್ದವಾಗಿರುವ ಸ್ಪುಟ್ನಿಕ್ ಸಂಸ್ಥೆಯ ಲಸಿಕೆಗಳನ್ನು ಭಾರತದಲ್ಲಿ ಪ್ರಯೋಗ ಮಾಡಲಾಗಿದೆ. ಹೈದರಾಬಾದ್​ನಲ್ಲಿರುವ ಡಾ. ರೆಡ್ಡಿಸ್ ಲ್ಯಾಬ್ಸ್ ನಿಂದ ಇದರ ಪ್ರಯೋಗ ನಡೆದಿದ್ದು ಸ್ಪುಟ್ನಿಕ್ ಸಂಸ್ಥೆಯು ಈಗ ದೇಶದಲ್ಲಿ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೇಂದ್ರ ಆರೋಗ್ಯ ಇಲಾಖೆ ವ್ಯಾಪ್ತಿಗೆ ಬರುವ ಸ್ಪೆಷಲ್ ಎಕ್ಸಫರ್ಟ್ ಕಮಿಟಿ (SEC) ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಮುಂದೆ ಮನವಿ ಮಾಡಿದೆ.

ಸ್ಪುಟ್ನಿಕ್ ಲಸಿಕಾ ಸಂಸ್ಥೆಯ ಮನವಿ ಆಧರಿಸಿ ಸ್ಪೆಷಲ್ ಎಕ್ಸ್​ಪರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕಳೆದ ವಾರ ಸಭೆ ನಡೆಸಿತ್ತು. ಸ್ಪುಟ್ನಿಕ್ ಸಂಸ್ಥೆಯು ಮೂರನೇ ಹಂತದಲ್ಲಿ ನಡೆಸಿದ ಕ್ಲಿನಿಕಲ್ ಪ್ರಯೋಗದ ವರದಿಯನ್ನ ಸಭೆಯಲ್ಲಿ ಸಲ್ಲಿಕೆ ಮಾಡಿತ್ತು. ಲಸಿಕೆ ಪಡೆದವರ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಬಗ್ಗೆ ಡೇಟಾ ಸಲ್ಲಿಕೆ ಮಾಡಿತ್ತು. ಸ್ಪುಟ್ನಿಕ್ ಲಸಿಕಾ ಸಂಸ್ಥೆ ಸಲ್ಲಿಸಿರುವ ಡೇಟಾಗಳ ಬಗ್ಗೆ ಸ್ಪೆಷಲ್ ಎಕ್ಸ್​ಪರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಅತೃಪ್ತಿ ವ್ಯಕ್ತಪಡಿಸಿದ್ದು ಹೆಚ್ಚಿನ ಮಾಹಿತಿ ಮತ್ತು ಡೇಟಾ ಕೇಳಿತ್ತು.

ಇದನ್ನೂ ಓದಿ: ದೇಶದಲ್ಲಿ ಮತ್ತೆ ಒಂದೇ ದಿನ ಒಂದೂವರೆ ಲಕ್ಷಕ್ಕೂ‌ ಹೆಚ್ಚು ಕೊರೋನಾ ಕೇಸ್

ಸ್ಪುಟಿಕ್ ಲಸಿಕಾ ಸಂಸ್ಥೆಯು ಸ್ಪೆಷಲ್ ಎಕ್ಸ್​ಪರ್ಟ್ ಕಮಿಟಿ ಮತ್ತು ದಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಕೇಳಿದ್ದಂತೆ ಹೆಚ್ಚಿನ ಡೆಟಾ ಸಲ್ಲಿಕೆ ಮಾಡಿದ್ದು ಇಂದು ಅವುಗಳ ಪರಿಶೀಲನೆ ಆಗಲಿದೆ. ಬಳಿಕ ಸ್ಪುಟ್ನಿಕ್ ಲಸಿಕೆಗಳ ತುರ್ತು ಬಳಕೆಗೆ ಅನುಮತಿ ನೀಡಬೇಕೋ ಬೇಡವೋ ಎಂಬ ಅಂತಿಮ ತಿರ್ಮಾನ ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸದ್ಯ ಕೊರೋನಾ ಲಸಿಕೆ ಕೊರತೆ ವ್ಯಾಪಕವಾಗಿ ಕಾಡುತ್ತಿದೆ. ಸೂಕ್ತ ಪ್ರಮಾಣದಲ್ಲಿ ಲಸಿಕೆಯನ್ನು ಪೂರೈಸುತ್ತಿಲ್ಲ. ತಾರತಮ್ಯ ಎಸಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಗುರುತರವಾದ ಆರೋಪ ಮಾಡಿದೆ.

ವರದಿ: ಧರಣೀಶ್ ಬೂಕನಕೆರೆ
Published by: Vijayasarthy SN
First published: April 12, 2021, 2:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories