Bharat Biotech Covaxin; ಭಾರತದ ಕೋವ್ಯಾಕ್ಸಿನ್ ಲಸಿಕೆಗೆ ಆಸ್ಟೇಲಿಯಾದ ಅನುಮತಿ: ವ್ಯಾಕ್ಸಿನ್ ಪಡೆದವರಿಗೆ ಆಸ್ಟ್ರೇಲಿಯಾದಲ್ಲಿ ನೋ ಕ್ವಾರಂಟೈನ್

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಏಪ್ರಿಲ್ 19ರಂದು ವಿಶ್ವದಲ್ಲಿ ತಮ್ಮ ಕೊರೊನಾ ಲಸಿಕೆಯ ಬಳಕಗೆ ಅನುಮತಿ ನೀಡಿತ್ತು ಏಪ್ರಿಲ್ 19ರಂದು ಅನುಮತಿ ನೀಡಿತ್ತು. ಭಾರತದ ಪ್ರಧಾನ ಮಂತ್ರಿ ನರೇಂದ್ರ  ಮೋದಿಯವರು ಸಹ ಕೋವ್ಯಾಕ್ಸಿನ್ ಎರಡು ಡೋಸ್ ಪಡೆದುಕೊಂಡಿದ್ದಾರೆ.

ಕೋವ್ಯಾಕ್ಸಿನ್

ಕೋವ್ಯಾಕ್ಸಿನ್

  • Share this:
ನವದೆಹಲಿ: ಭಾರತದ ಸ್ವದೇಶಿ ಕೊರೊನಾ ಲಸಿಕೆ (Corona Vaccine) ಪಡೆದವರಿಗೆ ಆಸ್ಟ್ರೇಲಿಯಾ (Australia) ಅನುಮತಿ ನೀಡಿದೆ, ಭಾರತ್ ಬಯೋಟೆಕ್ (Bharat Biotech Covaxin) ಕೋವ್ಯಾಕ್ಸಿನ್ ಪಡೆದವರು ಲಸಿಕೆ ಪಡೆದ ಪ್ರಮಾಣಪತ್ರದ ಜೊತೆ ಆಸ್ಟೇಲಿಯಾಗೆ ತೆರಳಬಹುದಾಗಿದೆ. ಕೊವ್ಯಾಕ್ಸಿನ್ ಪಡೆದ ಭಾರತೀಯರು 14 ದಿನ ಕ್ವಾರಂಟೈನ್ (Quarantine) ಆಗುವಂತಿಲ್ಲ. ಕೋವ್ಯಾಕ್ಸಿನ್ ಕುರಿತ ವಿಶ್ವ ಆರೋಗ್ಯ ಸಂಸ್ಥೆ (World Health Organisation) ಸಭೆಗೆ ಎರಡು ದಿನ ಇರುವಾಗಲೇ ಆಸ್ಟೇಲಿಯಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.  ನವೆಂಬರ್ 3ರಂದು ವಿಶ್ವಸಂಸ್ಥೆಯಲ್ಲಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾರತ್ ಬಯೋಟೆಕ್ ಕಂಪನಿಯ ಕೋವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೆ ಅನುಮತಿ ಸಿಗುವ ಸಾಧ್ಯತೆಗಳಿವೆ.

ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಏಪ್ರಿಲ್ 19ರಂದು ವಿಶ್ವದಲ್ಲಿ ತಮ್ಮ ಕೊರೊನಾ ಲಸಿಕೆಯ ಬಳಕಗೆ ಅನುಮತಿ ನೀಡಿತ್ತು ಏಪ್ರಿಲ್ 19ರಂದು ಅನುಮತಿ ನೀಡಿತ್ತು. ಭಾರತದ ಪ್ರಧಾನ ಮಂತ್ರಿ ನರೇಂದ್ರ  ಮೋದಿಯವರು ಸಹ ಕೋವ್ಯಾಕ್ಸಿನ್ ಎರಡು ಡೋಸ್ ಪಡೆದುಕೊಂಡಿದ್ದಾರೆ.

14 ದಿನದ ಕ್ವಾರಂಟೈನ್ ಇಲ್ಲ

ಭಾರತದ ವ್ಯಾಕ್ಸಿನ್ ಜೊತೆ ಚೀನಾದ ಲಸಿಕೆಗೂ ಆಸ್ಟ್ರೇಲಿಯಾ ಸರ್ಕಾರ ಅನುಮತಿ ನೀಡಿದೆ. ಚೀನಾದ ಸಿನೋಫಾರ್ಮಾದ BBIBP-CorV ವ್ಯಾಕ್ಸಿನ್ ಪಡೆದವರು ಸಹ ಆಸ್ಟ್ರೇಲಿಯಾದಲ್ಲಿ 14 ದಿನ ಕ್ವಾರಂಟೈನ್ ಆಗುವಂತಿಲ್ಲ. ಇದರ ಜೊತೆಗೆ ಭಾರತದ ಕೋವಿಶೀಲ್ಡ್, ಕೋವ್ಯಾಕ್ಸಿನ್ ಹಾಗೂ ಚೀನಾದ ಸಿನೊವೆಕ್ ಮತ್ತು ಸಿನೋಫಾರ್ಮಾ ಸಹ ಒಳಗೊಂಡಿದೆ.

ಇದನ್ನೂ ಓದಿ:  CoronaVirus: ಭಾರತದ ಕೋವಿಡ್ ಬಿಕ್ಕಟ್ಟಿಗೆ ಸಾಮೂಹಿಕ ಸಭೆಗಳೇ ಕಾರಣ; WHO ಆರೋಪ

ಕೋವ್ಯಾಕ್ಸಿನ್ ಲಸಿಕೆಗೆ ಅನುಮತಿ ನೀಡುವ ಕುರಿತು WHO ಅಕ್ಟೋಬರ್ 26ರಂದು ಸಭೆ ನಡೆಸಿತ್ತು. ಈ ಸಭೆಯಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸಂಪೂರ್ಣ ಮಾಹಿತಿಯನ್ನು ಕೇಳಲಾಗಿತ್ತು. ಮಾಹಿತಿಯ ಲಸಿಕೆಯ ಪ್ರಯೋಜನೆ ಮತ್ತು ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ್ದರಾಗಿರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು,

ನವೆಂಬರ್ 3ರಂದು ಅನುಮತಿ ಸಾಧ್ಯತೆ

ಅಕ್ಟೋಬರ್ 26ರಂದು ನಡೆದ ಕೋವ್ಯಾಕ್ಸಿನ್ ಬಳಕೆ ಯಾವುದೇ ಅನುಮೋದನೆ ನೀಡಿರಲಿಲ್ಲ. WHO ಮೆಡಿಸಿನ್ ಮತ್ತು ಹೆಲ್ತ್ ಪ್ರಾಡಕ್ಟ್ ADG ಮರಿಯಂಗೆಲಾ ಸಿಮಾವೋ, ಭಾರತದ ಲಸಿಕೆ ಬಗ್ಗೆ ನಮಗೆ ನಂಬಿಕೆ ಇದೆ. ಲಸಿಕೆಗೆ ಅನುಮತಿ ನೀಡುವ ಕುರಿತ ನಿರ್ಧಾರವನ್ನು ನವೆಂಬರ್ 3ರಂದು ಹೇಳಲಾಗುವುದು ಎಂದು ಹೇಳಿದ್ದರು.

ಇದನ್ನೂ ಓದಿ:  Explainer: ನಿಮ್ಮ ಮಕ್ಕಳಿಗೆ ಕೋವಿಡ್‌-19 ಲಸಿಕೆ ನೀಡಲು ಸರಿಯಾದ ಸಮಯ ಯಾವುದು?

ಭಾರತದಲ್ಲಿ ಶೀಘ್ರವೇ ಮಕ್ಕಳಿಗೆ ಲಸಿಕೆ

ಭಾರತದಲ್ಲಿ ಕೊರೋನಾ ಲಸಿಕೆಗಳನ್ನು ಈವರೆಗೆ 18 ವರ್ಷಕ್ಕೆ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿದೆ. ಆದರೆ, ಇತ್ತೀಚೆಗೆ ಸಣ್ಣ ಮಕ್ಕಳೂ ಸಹ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದು, ಅವರನ್ನು ಉಳಿಸುವ ಸಲುವಾಗಿ ಭಾರತ್ ಬಯೋ ಟೆಕ್​ ಸಣ್ಣ ಮಕ್ಕಳಿಗೂ ಸಹ ಕೊರೋನಾ ಲಸಿಕೆ ನೀಡುವ ಕುರಿತು ಪ್ರಯೋಗಗಳನ್ನು ನಡೆಸುತ್ತಿದೆ.



ಅಮೆರಿಕದಲ್ಲಿ 5-11 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನ್

ಯುನೈಟೆಡ್ ಸ್ಟೇಟ್ಸ್‌ನಲ್ಲಿ 5 - 11 ವರ್ಷ ವಯಸ್ಸಿನ ಮಕ್ಕಳಿಗೆ ಶುಕ್ರವಾರ ಫೈಜರ್ ಕೋವಿಡ್ ಲಸಿಕೆ(Pfizer vaccine) ಯನ್ನು ಅಧಿಕೃತಗೊಳಿಸಿದ್ದು, ಈ ಮೂಲಕ 28 ಮಿಲಿಯನ್ ಯುವ ಅಮೆರಿಕನ್ನರಿಗೆ (America) ಶೀಘ್ರದಲ್ಲೇ ರೋಗ ನಿರೋಧಕಕ್ಕೆ ದಾರಿ ಸಿಕ್ಕಂತಾಗಿದೆ.

ಈ ವಾರ, ಸರಕಾರಕ್ಕೆ ಸಲಹೆ ನೀಡುವ ಉನ್ನತ ಮಟ್ಟದ ವೈದ್ಯಕೀಯ ಸಮಿತಿಯು, ಲಸಿಕೆಯ ಪ್ರಯೋಜನಗಳು ಅಡ್ಡ ಪರಿಣಾಮಗಳ ಅಪಾಯಗಳನ್ನು ಮೀರಿಸುತ್ತದೆ ಎಂದು ತೀರ್ಪು ನೀಡಿ, ಲಸಿಕೆಗಳನ್ನು ಅನುಮೋದಿಸಿದ ನಂತರ, ಈ ನಿರ್ಧಾರವನ್ನು ಪ್ರಕಟಿಸಲಾಗಿದೆ. ಯುನೈಟೆಡ್ ಸ್ಟೇಟ್ಸ್ ( United States), ಮಕ್ಕಳಿಗೆ ವಿವಿಧ ಲಸಿಕೆಗಳ ಚುಚ್ಚುಮದ್ದನ್ನು ನೀಡುತ್ತಿರುವ ಚೀನಾ, ಚಿಲಿ, ಕ್ಯೂಬಾ ಮತ್ತು ಯುನೈಟೆಡ್ ಅರಬ್ ಎಮಿರೆಟ್ಸ್‍ನಂತಹ ಇತರ ಬೆರಳೆಣಿಕೆಯಷ್ಟು ದೇಶಗಳನ್ನು ಅನುಸರಿಸುತ್ತಿದೆ.

ಅಧಿಕೃತ ನಿರ್ಧಾರಕ್ಕಾಗಿ, ಹೆತ್ತವರು, ಆರೈಕೆ ಮಾಡುವವರು, ಶಾಲಾ ಸಿಬ್ಬಂದಿ ಮತ್ತು ಮಕ್ಕಳು ಕಾಯುತ್ತಿದ್ದರು ಎಂಬುವುದು ಒಬ್ಬ ತಾಯಿಯಾಗಿ ಮತ್ತು ವೈದ್ಯಳಾಗಿ ನನಗೆ ತಿಳಿದಿದೆ” ಎಂದು ಆಹಾರ ಮತ್ತು ಔಷಧ ಆಡಳಿತದ ಕಾರ್ಯ ನಿರ್ವಾಹಕ ಮುಖ್ಯಸ್ಥೆ ಜಾನೆಟ್ ವುಡ್‍ಕಾಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Published by:Mahmadrafik K
First published: