ಹೈ ರಿಸ್ಕ್ ರಾಜ್ಯ ತಮಿಳುನಾಡಿನಿಂದ ಕಳೆದೊಂದು ವಾರದಲ್ಲಿ 10 ಸಾವಿರ ಮಂದಿ ರಾಜ್ಯ ಪ್ರವೇಶ; ಆತಂಕದಲ್ಲಿ ಜನ

ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ರಾಜ್ಯ ಪ್ರವೇಶಕ್ಕೆ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದಾರೆ. ತಮಿಳುನಾಡಿನಲ್ಲಿ ರಾಜ್ಯಕ್ಕಿಂತಲೂ ದುಪ್ಪಟ್ಟು ಕೊರೋನಾ ಸೋಂಕಿತರ ದಂಡೇ ಇದೆ. ಹಾಗಾಗಿ ತಮಿಳುನಾಡು ಸೇರಿದಂತೆ ಹೈ ರಿಸ್ಕ್ ರಾಜ್ಯಗಳಿಂದ ಆಗಮಿಸುವವರು ರಾಜ್ಯ ಪ್ರವೇಶಕ್ಕೆ ರಾಜ್ಯ  ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಪ್ರಮುಖವಾಗಿ ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಈ ಪಾಸ್ ಪಡೆದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

news18-kannada
Updated:July 9, 2020, 9:59 PM IST
ಹೈ ರಿಸ್ಕ್ ರಾಜ್ಯ ತಮಿಳುನಾಡಿನಿಂದ ಕಳೆದೊಂದು ವಾರದಲ್ಲಿ 10 ಸಾವಿರ ಮಂದಿ ರಾಜ್ಯ ಪ್ರವೇಶ; ಆತಂಕದಲ್ಲಿ ಜನ
ವಲಸಿಗರು (ಸಾಂದರ್ಭಿಕ ಚಿತ್ರ)
  • Share this:
ಆನೇಕಲ್: ದೇಶದಲ್ಲಿಯೇ ತಮಿಳುನಾಡು ಹೈ ರಿಸ್ಕ್ ಪಟ್ಟಿಯಲ್ಲಿರುವ ಪ್ರಮುಖ ರಾಜ್ಯ. ಈಗಾಗಲೇ ಕೊರೋನಾ ಪಾಸಿಟಿವ್ ಪ್ರಕರಣಗಳಲ್ಲಿ ತಮಿಳುನಾಡು ಒಂದು ಲಕ್ಷ ಗಡಿ ದಾಟಿದೆ. ಅಕ್ಕ- ಪಕ್ಕದ ರಾಜ್ಯಗಳಿಗೆ ಅದರಲ್ಲು ಕರ್ನಾಟಕ ರಾಜ್ಯಕ್ಕಂತು ಕೊರೋನಾ ಆತಂಕ ಇದ್ದೇ ಇದೆ. ಇದರ ನಡುವೆಯೂ ತಮಿಳುನಾಡಿನಿಂದ ನಿತ್ಯ ಸಾವಿರಾರು ಜನ ರಾಜ್ಯ ಪ್ರವೇಶಿಸುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಹೌದು, ಈಗಾಗಲೇ ದಿನದಿಂದ ದಿನಕ್ಕೆ ಬೆಂಗಳೂರು ಕೊರೋನಾ ಹಾಟ್ ಸ್ಪಾಟ್ ಆಗುತ್ತಿದೆ. ನಿತ್ಯ ಸಾವಿರಕ್ಕೂ ಅಧಿಕ ಪಾಸಿಟಿವ್ ಕೇಸ್​ಗಳು ಬೆಂಗಳೂರು ನಗರದಲ್ಲಿ ಪತ್ತೆಯಾಗುತ್ತಿವೆ. ಇದರ ನಡುವೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಚೆಕ್ ಪೋಸ್ಟ್ ಒಂದರಲ್ಲಿಯೇ ಕಳೆದ ಒಂದು ವಾರದಲ್ಲಿ ಬರೋಬ್ಬರಿ 9650 ಮಂದಿ ತಮಿಳುನಾಡಿನಿಂದ ಅಧಿಕೃತವಾಗಿ ರಾಜ್ಯ ಪ್ರವೇಶ ಮಾಡಿದ್ದಾರೆ.

ಜುಲೈ 1ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1178 ಮಂದಿ ತಮಿಳುನಾಡಿನಿಂದ ರಾಜ್ಯಕ್ಕೆ ಬಂದಿದ್ದಾರೆ. ಇವರಲ್ಲಿ 902 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 228 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 123 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಜುಲೈ 2ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1128 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶ ಮಾಡಿದ್ದಾರೆ. 897 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 197 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 75 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಜುಲೈ 3ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1061 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶ ಮಾಡಿದ್ದಾರೆ. 888 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 266 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 66 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಜುಲೈ 4ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1214 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶ ಮಾಡಿದ್ದಾರೆ. 938 ಮಂದಿಯನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 42 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 123 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. 14 ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್​ ಮಾಡಲಾಗಿದೆ.

ಜುಲೈ 5ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 309 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶಿಸಿದ್ದಾರೆ. 313 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 131 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 20 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.ಜುಲೈ 6ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1177 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶ ಮಾಡಿದ್ದಾರೆ. 990 ಮಂದಿಯನ್ನು ಹೋಮ್ ಕ್ವಾರಂಟೈನ್ ಮಡಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 189 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 52 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಜುಲೈ 7ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 726 ಮಂದಿ ತಮಿಳುನಾಡಿನಿಂದ ರಾಜ್ಯ ಪ್ರವೇಶ ಮಾಡಿದ್ದಾರೆ. 628 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 110 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 66 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.

ಜುಲೈ 8ನೇ ತಾರೀಖು ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ 1199 ಮಂದಿ ತಮಿಳುನಾಡಿನಿಂದ ರಾಜ್ಯಕ್ಕೆ ಬಂದಿದ್ದಾರೆ. 896 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಜೊತೆಗೆ ಇತರೆ ರಾಜ್ಯಗಳಿಗೆ ತೆರಳಲು 291 ಮಂದಿ ರಾಜ್ಯ ಪ್ರವೇಶ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದ ಆಗಮಿಸಿದ 69 ಮಂದಿಯನ್ನು ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗಿದೆ.
ಇಂದು ಸಹ ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನಿಂದ ಅತ್ತಿಬೆಲೆ ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶ ಮಾಡಿದ್ದು, ಒಟ್ಟಾರೆ ಕಳೆದ ಒಂಬತ್ತು ದಿನಗಳಲ್ಲಿ 10 ಸಾವಿರಕ್ಕೂ ಅಧಿಕ‌ಮಂದಿ ರಾಜ್ಯ ಪ್ರವೇಶ ಮಾಡಿದ್ದು, ರಾಜ್ಯದ ಜನರಲ್ಲಿ ಅದ್ರರಲ್ಲೂ ಬೆಂಗಳೂರಿನ ಜನ ಆತಂಕಪಡುವಂತಾಗಿದೆ.

ಅಂದಹಾಗೆ ಇನ್ನೂ ಸಹ ಅತ್ತಿಬೆಲೆ ಚೆಕ್ ಪೋಸ್ಟ್ ಬಳಿ ರಾಜ್ಯ ಪ್ರವೇಶಕ್ಕೆ ಸಾವಿರಾರು ಮಂದಿ ಸಾಲುಗಟ್ಟಿ ನಿಂತಿದ್ದಾರೆ. ತಮಿಳುನಾಡಿನಲ್ಲಿ ರಾಜ್ಯಕ್ಕಿಂತಲೂ ದುಪ್ಪಟ್ಟು ಕೊರೋನಾ ಸೋಂಕಿತರ ದಂಡೇ ಇದೆ. ಹಾಗಾಗಿ ತಮಿಳುನಾಡು ಸೇರಿದಂತೆ ಹೈ ರಿಸ್ಕ್ ರಾಜ್ಯಗಳಿಂದ ಆಗಮಿಸುವವರು ರಾಜ್ಯ ಪ್ರವೇಶಕ್ಕೆ ರಾಜ್ಯ  ಸರ್ಕಾರ ಷರತ್ತುಗಳನ್ನು ವಿಧಿಸಿದೆ. ಪ್ರಮುಖವಾಗಿ ಸೇವಾ ಸಿಂಧು ವೆಬ್ ಪೋರ್ಟಲ್ ಮೂಲಕ ಈ ಪಾಸ್ ಪಡೆದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.‌

ಇದನ್ನು ಓದಿ: ರಾಜ್ಯದಲ್ಲಿ ಮುಂದುವರೆದ ಕೊರೋನಾ ಆರ್ಭಟ : ಒಂದೇ ದಿನ 17 ಸಾವು, 2,228 ಜನರಿಗೆ ಸೋಂಕು ದೃಢ

ಅದಕ್ಕೂ ಮೊದಲು ಥರ್ಮಲ್ ಸ್ಕ್ರೀನಿಂಗ್ ಮಾಡಿ ವೈಯಕ್ತಿಕ ವಿವರಗಳನ್ನು ದಾಖಲಿಸಿದ ಬಳಿಕ ಕೈಗೆ ಸೀಲ್ ಹಾಕಿ ಹೋಮ್ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಇನ್ನೂ ಈ ಪಾಸ್ ಇಲ್ಲದ ಬರುವವರನ್ನು ಮುಲಾಜಿಲ್ಲದೆ ರಾಜ್ಯ ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಯಲ್ಲಿ ರಾಜ್ಯ ಪೊಲೀಸರು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿದ್ದಾರೆ.
Published by: HR Ramesh
First published: July 9, 2020, 9:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading