• ಹೋಂ
 • »
 • ನ್ಯೂಸ್
 • »
 • Corona
 • »
 • Covid Vaccine by AstraZeneca - ಡಿಸೆಂಬರ್​ನಲ್ಲೇ ಲಭ್ಯವಿರಲಿದೆ ಭಾರತದ ಈ ಕೋವಿಡ್-19 ಲಸಿಕೆ

Covid Vaccine by AstraZeneca - ಡಿಸೆಂಬರ್​ನಲ್ಲೇ ಲಭ್ಯವಿರಲಿದೆ ಭಾರತದ ಈ ಕೋವಿಡ್-19 ಲಸಿಕೆ

ಕೊರೋನಾ ವೈರಸ್ ಲಸಿಕೆಯ ಪ್ರಾತಿನಿಧಿಕ ಚಿತ್ರ

ಕೊರೋನಾ ವೈರಸ್ ಲಸಿಕೆಯ ಪ್ರಾತಿನಿಧಿಕ ಚಿತ್ರ

ಆಕ್ಸ್​ಫರ್ಡ್ ವಿವಿ, ಸಿಐಐ ಮತ್ತು AstraZeneca ಸಹಭಾಗಿತ್ವದಲ್ಲಿ ತಯಾರಾಗುತ್ತಿರುವ ಲಸಿಕೆ ಡಿಸೆಂಬರ್​ನಿಂದ ಉತ್ಪಾದನೆಯಾಗುವ ಸಾಧ್ಯತೆ ಇದ್ದು, ಮಾರ್ಚ್​ನಷ್ಟರಲ್ಲಿ ದೇಶದ ಪ್ರತಿಯೊಬ್ಬರಿಗೂ ಲಭ್ಯವಾಗುವ ನಿರೀಕ್ಷೆ ಇದೆ.

 • Share this:

  ನವದೆಹಲಿ: ಐಸಿಎಂಆರ್ ಸಹಭಾಗಿತ್ವದಲ್ಲಿ ತಯಾರಾಗುತ್ತಿರುವುದು ಸೇರಿದಂತೆ ಭಾರತದಲ್ಲಿ 7 ಲಸಿಕೆಗಳು ಸಿದ್ಧಗೊಳ್ಳುತ್ತಿವೆ. ಎಲ್ಲವೂ ಪ್ರತ್ಯೇಕವಾಗಿ ವಿವಿಧ ಕಂಪನಿಗಳಿಂದ ಪ್ರಯೋಗ ಹಂತದಲ್ಲಿವೆ. ಅದರಲ್ಲಿ ಆಕ್ಸ್​ಫರ್ಡ್ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಭಾರತದ ಸಿರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ಮತ್ತು ಅಸ್ತ್ರಜೆನೆಕ (AstraZeneca) ತಯಾರಿಸುತ್ತಿರುವ ಈ ಸಲಿಕೆ ಈಗ ಮೂರನೇ ಹಂತದ ಪ್ರಯೋಗಕ್ಕೆ ಅಣಿಗೊಳ್ಳುತ್ತಿದೆ. ಈ ಮೂರನೇ ಹಂತದಲ್ಲಿ ಆಯ್ದ ಆಸ್ಪತ್ರೆಗಳಲ್ಲಿ ರೋಗಿಗಳ ಮೇಲೆ ಲಸಿಕೆಯ ಪ್ರಯೋಗವಾಗಲಿದೆ. ನವೆಂಬರ್​ನಲ್ಲಿ ಬಹುತೇಕ ಎಲ್ಲಾ ಪ್ರಯೋಗಗಳು ಮುಕ್ತಾಯವಾಗಲಿದ್ದು, ಡಿಸೆಂಬರ್​ನಿಂದ ಲಸಿಕೆ ಉತ್ಪಾದನೆಯಾಗಲಿದೆ. ಮಾರ್ಚ್ ತಿಂಗಳಷ್ಟರಲ್ಲಿ ಬಹುತೇಕ ಎಲ್ಲರಿಗೂ ಇದು ಲಭ್ಯವಾಗಲಿದೆ.


  ಲಸಿಕೆ ತಯಾರಿಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ವಿಶ್ವದ ಬಹುಪಾಲು ಲಸಿಕೆ ತಯಾರಾಗುವುದು ಭಾರತದಲ್ಲೇ. ಸೆರಮ್ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾ (ಎಸ್​ಐಐ) ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸಂಸ್ಥೆಗಳಲ್ಲೊಂದೆನಿಸಿದೆ. ಲಸಿಕೆ ತಯಾರಿಕೆಯಲ್ಲಿ ಎಸ್​ಐಐ ಜೊತೆ ಭಾಗಿಯಾಗಿರುವ AstraZeneca ಸಂಸ್ಥೆಯ ಸಿಇಒ ಅಡಾರ್ ಪೂನಾವಾಲ ಅವರು ನ್ಯೂಸ್18 ಜೊತೆ ಸಂದರ್ಶನದಲ್ಲಿ ಮಾತನಾಡುತ್ತಾ ಲಸಿಕೆಯ ಹಲವು ವಿವರಗಳನ್ನ ಬಿಡಿಸಿಟ್ಟರು. ಆಕ್ಸ್​ಫರ್ಡ್ ವಿಶ್ವವಿದ್ಯಾಲಯದೊಂದಿಗೆ ಸಹಭಾಗಿತ್ವದಲ್ಲಿ ಲಸಿಕೆ ತಯಾರಾಗುತ್ತಿದ್ದರೂ ಆಕ್ಸ್​ಫರ್ಡ್​ನಿಂದ ತಂತ್ರಜ್ಞಾನವನ್ನಷ್ಟೇ ಎರವಲು ಪಡೆಯಲಾಗಿದ್ದು ಉಳಿದಂತೆ ಪ್ರತ್ಯೇಕವಾಗಿಯೇ ವ್ಯಾಕ್ಸಿನ್ ತಯಾರಾಗಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು.


  ಇದನ್ನೂ ಓದಿ: Coronavirus Vaccine: ಆಕ್ಸ್​ಫರ್ಡ್ ವಿವಿಯಿಂದ ಕೋವಿಡ್ ಲಸಿಕೆ: ಮೊದಲೆರಡು ಹಂತಗಳ ಮಾನವ ಪ್ರಯೋಗ ಯಶಸ್ವಿ?


  ಎರಡನೇ ಹಂತದ ಪ್ರಯೋಗ ನಡೆಸಲು ಈಗ ಡಿಸಿಜಿಐನಿಂದ ಅನುಮತಿಗಾಗಿ ಕಾಯಲಾಗುತ್ತಿದೆ. ಅದಾದ ಬಳಿಕ ಕೆಲ ವಾರಗಳಲ್ಲಿ ಆಸ್ಪತ್ರೆಗಳಲ್ಲಿ ಮೂರನೇ ಹಂತದ ಪ್ರಯೋಗ ನಡೆಸಲು ಅಗತ್ಯವಾಗಿರುವ ವಿನ್ಯಾಸ ಮತ್ತಿತರ ಅಂಶಗಳನ್ನ ನಿರ್ಧರಿಸುತ್ತೇವೆ…. ಮುಂಬೈ ಮತ್ತು ಪುಣೆಯ ಆಸ್ಪತ್ರೆಗಳಲ್ಲಿ ಸುಮಾರು 2-5 ಸಾವಿರದಷ್ಟು ರೋಗಿಗಳ ಮೇಲೆ ಈ ಲಸಿಕೆಯ ಪ್ರಯೋಗ ಮಾಡಲು ನಿರ್ಧರಿಸಿದ್ಧೇವೆ ಎಂದು ಆಡಾರ್ ಪೂನಾವಾಲ ಮಾಹಿತಿ ನೀಡಿದರು.


  ಲಸಿಕೆ ಉತ್ಪಾದನೆಯಾದ ಬಳಿಕ ಮೊದಲು ಕಂಪನಿಯಲ್ಲಿ ಸ್ವತಃ ಪ್ರಯೋಗವಾಗುತ್ತದೆ. ಬಳಿಕ ಅದು ಸಿಡಿಐ ಪ್ರಾಧಿಕಾರಕ್ಕೆ ಹೋಗುತ್ತದೆ. ಆ ನಂತರವಷ್ಟೇ ಆ ಬ್ಯಾಚ್​ನ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಕಳುಹಿಸಿಕೊಡಲಾಗುತ್ತದೆ. ಇಹೀಗಾಗಿ, ದೊಡ್ಡ ಪ್ರಮಾಣದಲ್ಲಿ ಲಸಿಕೆ ತಯಾರಾಗಲು ಮಾರ್ಚ್ ತಿಂಗಳಾಗಬಹುದು. ಆದರೆ, ಡಿಸೆಂಬರ್ ತಿಂಗಳಷ್ಟರಲ್ಲಿ ಆರೋಗ್ಯಕಾರ್ಯಕರ್ತರು ಹಾಗೂ ಇತರ ತುರ್ತು ಅಗತ್ಯ ಇದ್ದವರಿಗೆ ಲಕ್ಷಾಂತರ ಡೋಸ್​ಗಳ ಲಸಿಕೆ ಲಭ್ಯವಿರುವಂತೆ ನೋಡಿಕೊಳ್ಳುತ್ತೇವೆ ಎಂದವರು ಹೇಳಿದರು.


  ಇದನ್ನೂ ಓದಿ: ಮಾಯವಾಗುವ ಜಲಚರಗಳು; ರಹಸ್ಯ ಕಂಡುಹಿಡಿದ ವಿಜ್ಞಾನಿಗಳು


  ಸದ್ಯಕ್ಕೆ ತಮ್ಮಲ್ಲಿರುವ ಸಾಮರ್ಥ್ಯದಂತೆ ವರ್ಷಕ್ಕೆ 70-80 ಕೋಟಿ ಲಸಿಕೆ ತಯಾರಿಸಬಲ್ಲೆವು. ಡಿಸೆಂಬರ್​ನಷ್ಟರಲ್ಲಿ 30 ಕೋಟಿ ಲಸಿಕೆ ಮಾಡುವ ಶಕ್ತಿ ನಮಿಗಿದೆ. ಹೊಸ ಉತ್ಪಾದನಾ ಘಟಕ ಮಾಡಲು ಯೋಜಿಸಿದ್ದು ಅದಾದರೆ ಇನ್ನಷ್ಟು ಹೆಚ್ಚು ಪ್ರಮಾಣದಲ್ಲಿ ಲಸಿಕೆ ತಯಾರಿಸಬಹುದು. ಎರಡು ಡೋಸ್​ಗಳ ಈ ಲಸಿಕೆ ವಿಶ್ವಾದ್ಯಂತ ಪ್ರತಿಯೊಬ್ಬರಿಗೂ ಲಭ್ಯವಾಗಬೇಕಾದರೆ 3-4 ವರ್ಷ ಹಿಡಿಯುತ್ತದೆ ಎಂದೂ ಅವರು ಸ್ಪಷ್ಟಪಡಿಸಿದರು.


  ಸಂದರ್ಶಕರು: Jakka Jocob, CNN-News18

  Published by:Vijayasarthy SN
  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು