ಕೋವಿಡ್​ 19 ಸೋಂಕಿತರ ಮಾನಸಿಕ ಆರೋಗ್ಯ ಸುಧಾರಣೆಗೆ ಫೋನ್​ ಮೂಲಕ ಅಸ್ಸಾಂ ಜಾನಪದ ಗಾಯಕನ ಗಾನ ಸೇವೆ

ಈವರೆಗೆ 250 ಕೋವಿಡ್​ ಸೋಂಕಿತರಿಗಾಗಿ ವಿವಿಧ ರೀತಿಯ ಹಾಡುಗಳನ್ನು ಹಾಡುವ ಮೂಲಕ ಆ ಕ್ಷಣ ಅವರ ಮನಸ್ಸಿಗೆ ನೆಮ್ಮದಿ ತಂದಿದ್ದಾರೆ. ಅಲ್ಲದೇ ಛತ್ತೀಸ್​​ಗಢ​, ದೆಹಲಿ, ಪುಣೆ ಮತ್ತು ಭಾರತದ ಇನ್ನಿತರ ಕಡೆ ಯುವ ಸಮುದಾಯದ ಬೇಡಿಕೆಯಂತೆ ಬಂಗಾಳಿ ಗೀತೆಗಳಿಂದ ಹಿಂದೆ ಗೀತೆಗಳನ್ನು ಹಾಡಲು ಬದಲಾವಣೆ ಕೂಡ ಮಾಡಿಕೊಂಡಿದ್ದಾರಂತೆ.

ಗಾಯಕ ಬಿಕ್ರಂಜಿತ್ ಬೌಲಿಯಾ

ಗಾಯಕ ಬಿಕ್ರಂಜಿತ್ ಬೌಲಿಯಾ

  • Share this:
ಕೋವಿಡ್​ 19 ಎರಡನೇ ಅಲೆ ಭಾರತದಲ್ಲಿ ತನ್ನ ದೈತ್ಯ ನರ್ತನವನ್ನು ತೋರಿಸುತ್ತಿರುವ ಸಮಯವಿದು. ಈ ಸಂದರ್ಭದಲ್ಲಿ ಬಹುತೇಕರು ಕೊರೋನಾ ಸೋಂಕಿತರ ನೆರವಿಗೆ ನಿಂತಿದ್ದಾರೆ. ಅವರಿಗೆ ಅಗತ್ಯವಿರುವ ದಿನಸಿ, ಆಹಾರವನ್ನು ನೀಡುವ ಮೂಲಕ ಸಹಾಯ ಹಸ್ತ ಚಾಚುತ್ತಿದ್ದಾರೆ. ಆದರೆ ಏನೇ ಇರಲಿ, ಆತ್ಮವಿಶ್ವಾಸ ಅಥವಾ ನಗು ಮೂಡದೇ ಇದ್ದರೆ ಸಣ್ಣ ಸಮಸ್ಯೆಯೂ ಕೂಡ ದೊಡ್ಡದಾಗಿಯೇ ಕಾಣುತ್ತದೆ. ಇನ್ನು ಕೊರೋನಾ ಬಗ್ಗೆ ಇರುವ ಆತಂಕದಿಂದಾಗಿ ಸೋಂಕಿರುವುದುತಿಳಿದ ಕೂಡಲೇ ರೋಗಿಗಳು ಧೈರ್ಯಗೆಡುತ್ತಿದ್ದಾರೆ. ಜೊತೆಗೆ ಅದರ  ಬಗ್ಗೆಯೇ ಯೋಚಿಸುತ್ತಾ ಮಾನಸಿಕ ಆರೋಗ್ಯವನ್ನೂ ಹಾಳು ಮಾಡಿಕೊಳ್ಳುತ್ತಿದ್ದಾರೆ ಬಹುತೇಕರು. ಈ ನಿಟ್ಟಿನಲ್ಲಿ ಅಸ್ಸಾಂನ ಗಾಯಕರೊಬ್ಬರು ಕೋವಿಡ್​ ಸೋಂಕಿತರ ಮನಸ್ಸಿಗೆ ನೆಮ್ಮದಿ ತರಲು ಫೋನ್​ ಮೂಲಕ ಹಾಡುಗಳನ್ನು ಹಾಡುವ ಮೂಲಕ ಕೊರೋನಾ​ ಸೋಂಕಿತರ ಮನಸ್ಸು ಗೆಲ್ಲುತ್ತಿದ್ದಾರೆ.

ಸಿಲ್ಚಾರ್ ಮೂಲದ ಜಾನಪದ ಗಾಯಕ ಬಿಕ್ರಂಜಿತ್ ಬೌಲಿಯಾ ಅವರು ಬಂಗಾಳಿ ಗಾಯಕ ಲೋಪಮುದ್ರ ಮಿತ್ರ ಅವರ ಅಭಿಯಾನದಿಂದ ಸ್ಫೂರ್ತಿ ಪಡೆದು ಈ ಕೆಲಸ ಆರಂಭಿಸಿದ್ದಾರೆ. ಆರು ದಿನಗಳ ಹಿಂದೆ ತಾವು ಮಾಡುತ್ತಿರುವ ಈ ಕೆಲಸದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಹುತೇಕರು ಪ್ರಚಾರ ಗಿಟ್ಟಿಸಿಕೊಳ್ಳಲು ಈ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ. ಆದರೆ ಈ ಬಗ್ಗೆ ತಲೆ ಕೆಡಿಸಿಕೊಳ್ಳದ ಬಿಕ್ರಂಜಿತ್ ಅವರು ಜನರ ಮನಸ್ಸನ್ನು ಖುಷಿಯಾಗಿ ಹಾಗೂ ಆರೋಗ್ಯವಾಗಿ ಇಡುವುಡದರಲ್ಲಿ ಬಹಳ ಖುಷಿ ಇದೆ ಎನ್ನುತ್ತಾರೆ.ಮಾಲುಗ್ರಾಮ್ ಪ್ರದೇಶದ 33 ವರ್ಷದ ಬಿಕ್ರಂಜಿತ್ ಅವರು ಬೌಲ್ಸ್ (ಬಂಗಾಳಿ ಜಾನಪದ ಗಾಯಕರು) ಮೇಲಿನ ಪ್ರೀತಿಗಾಗಿ ಅವರ ಸರ್​​ ನೇಮ್​ ‘ಕಾರ್’ ಅನ್ನು ‘ಬೌಲಿಯಾ’ ಎಂದು ಬದಲಿಸಿಕೊಂಡಿದ್ದಾರೆ. ಇನ್ನೂ ಗಾಯನದ ಜೊತೆಗೆ ತಮ್ಮ ತಂದೆಯವರ ಮೆಡಿಕಲ್​ ಸ್ಟೋರ್​​ನಲ್ಲಿ ಕೆಲಸವನ್ನು ನಿರ್ವಹಿಸುವ ಮೂಲಕ ತಮ್ಮ ಜೀವನವನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಕವಿತಾ ಗೌಡ- ಚಂದನ್​ ಕುಮಾರ್​ ಮೆಹೆಂದಿ ಸಂಭ್ರಮದ ಫೋಟೋಗಳು..!

ಈವರೆಗೆ 250 ಕೋವಿಡ್​ ಸೋಂಕಿತರಿಗಾಗಿ ವಿವಿಧ ರೀತಿಯ ಹಾಡುಗಳನ್ನು ಹಾಡುವ ಮೂಲಕ ಆ ಕ್ಷಣ ಅವರ ಮನಸ್ಸಿಗೆ ನೆಮ್ಮದಿ ತಂದಿದ್ದಾರೆ. ಅಲ್ಲದೇ ಛತ್ತೀಸ್​​ಗಢ​, ದೆಹಲಿ, ಪುಣೆ ಮತ್ತು ಭಾರತದ ಇನ್ನಿತರ ಕಡೆ ಯುವ ಸಮುದಾಯದ ಬೇಡಿಕೆಯಂತೆ ಬಂಗಾಳಿ ಗೀತೆಗಳಿಂದ ಹಿಂದೆ ಗೀತೆಗಳನ್ನು ಹಾಡಲು ಬದಲಾವಣೆ ಕೂಡ ಮಾಡಿಕೊಂಡಿದ್ದಾರಂತೆ.ಬಿಕ್ರಂಜಿತ್​ ಅವರ ಈ ಗಾಯನ ಸೇವಾ ಮನೋಭಾವವನ್ನು ಗಮನಿಸಿ, ವಿವಿಧ ಬಂಗಾಳಿ ಗಾಯಕರು ಕರೆ ಮಾಡಿ ಶ್ಲಾಘಿಸಿದ್ದಾರೆ. ಕಳೆದ ವರ್ಷ ಬಿಕ್ರಂಜಿತ್​ ಅವರು ಕೂಡ ಕೋವಿಡ್​ ಪಾಸಿಟಿವ್ ಆಗಿದ್ದು, ಮಾನಸಿಕವಾಗಿ ಸಾಕಷ್ಟು ಹೋರಾಟ ನಡೆಸಿದ್ದಾರೆ. ಸಂಗೀತ ನನ್ನ ಉತ್ಸಾಹ ಜೊತೆಗೆ ಅದೇ ನನಗೆ ಸಕಾರಾತ್ಮಕ ಶಕ್ತಿ. ಈ ಅಭಿಯಾನದಿಂದ ಜನರ ಸನಿಹಕ್ಕೆ ತಲುಪುತ್ತಿದ್ದೇನೆ. ಅವರ ಕಥೆಗಳಿಗೆ ಕಿವಿಯಾವುದು ನಿಜಕ್ಕೂ ಅದ್ಭುತ ಸಂಗತಿಯಾಗಿದೆ. ಇದು ನನ್ನನ್ನೂ ಸಹ ಆಶಾವಾದ ಮತ್ತು ಸಕಾರಾತ್ಮಕತೆ ಮೂಡಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: Billboard Music Awards 2021: ಸ್ಟನ್ನಿಂಗ್ ಲುಕ್​ನಲ್ಲಿ ಪ್ರಿಯಾಂಕಾ ಚೋಪ್ರಾ: ಹೈ ಸ್ಲಿಟ್​ ಡ್ರೆಸ್​​ನಲ್ಲಿ ಮಿಂಚಿದ ದೇಸಿ ಗರ್ಲ್​

ಬಿಕ್ರಂಜಿತ್​ ಅವರು ಬಂಗಾಳಿಯ ಸರಿಗಮಪ ರಿಯಾಲಿಟಿಶೋನಲ್ಲಿ ಜಾನಪದ ಉಚ್ಚಾರಣೆಯಿಂದಾಗಿ ಟಾಪ್ 12 ನೇ ಸ್ಥಾನ ತಲುಪಲಾಗಲಿಲ್ಲ. ಆದರೂ ಅವರ ತಗ್ಗದ ಉತ್ಸಾಹದಿಂದ ಅವಕಾಶ ಸಿಕ್ಕಿದಾಗಲೆಲ್ಲಾ ಹಾಡುತ್ತಲೇ ಇರುತ್ತಾರೆ.
'ನಾನು ಹೆಚ್ಚಾಗಿ ಬಂಗಾಳಿ ಜಾನಪದ ಗೀತೆಗಳನ್ನು ಹಾಡುತ್ತೇನೆ. ಆದರೆ ಇತರ ಭಾಷೆಗಳ ಜನರು ಕೂಡ ತಮ್ಮ ಭಾಷೆಗಳಲ್ಲಿ ಹಾಡಲು ನನ್ನನ್ನು ಕೇಳುತ್ತಿದ್ದಾರೆ. ನೊಂದ ಮತ್ತು ವಿಚಲಿತ ಮನಸ್ಸುಗಳಿಗೆ ಸಂಗೀತವು ಚಿಕಿತ್ಸೆಯಂತೆ ಕೆಲಸ ಮಾಡುತ್ತದೆ. ಈ ಸಂದರ್ಭದಲ್ಲಿ ನಾವು ಪರಸ್ಪರ ದಯೆಯಿಂದ ವರ್ತಿಸಬೇಕು ಎಂದಿದ್ದಾರೆ. ಜನರ ಪ್ರೀತಿಗೆ ಸಂತೋಷವಾಗುತ್ತಿದೆ' ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
Published by:Anitha E
First published: