ಬೆಂಗಳೂರಿನ ವಿಲ್ಸನ್​​ ಗಾರ್ಡನ್​​ ಠಾಣೆಯಲ್ಲಿ ಐವರು ಪೊಲೀಸರಿಗೆ ಕೊರೋನಾ: ಓರ್ವ ಎಎಸ್​ಐ ಸಾವು

ವಿಲ್ಸನ್​​ ಗಾರ್ಡನ್​​ನ ಲಾ ಅಂಡ್​​ ಆರ್ಡರ್​ ಪೊಲೀಸ್​​​ ಠಾಣೆಯನ್ನು ಹೊರತುಪಡಿಸಿ ಇಡೀ ಬಿಲ್ಡಿಂಗ್​​​​​ ಅನ್ನು ಬಿಬಿಎಂಪಿ ಸೀಲ್​​ಡೌನ್​​ ಮಾಡಿದೆ. ಈ ಲಾ ಅಂಡ್​​ ಆರ್ಡರ್​​ ಪೊಲೀಸ್​​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 20 ಸಿಬ್ಬಂದಿಯನ್ನು ಹೋಮ್​​ ಕ್ವಾರಂಟೈನ್​ ಮಾಡಲಾಗಿದೆ.

news18-kannada
Updated:June 30, 2020, 12:13 PM IST
ಬೆಂಗಳೂರಿನ ವಿಲ್ಸನ್​​ ಗಾರ್ಡನ್​​ ಠಾಣೆಯಲ್ಲಿ ಐವರು ಪೊಲೀಸರಿಗೆ ಕೊರೋನಾ: ಓರ್ವ ಎಎಸ್​ಐ ಸಾವು
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು(ಜೂ.30: ನಗರದ ವಿಲ್ಸನ್​​​​​ ಗಾರ್ಡನ್ ಪೊಲೀಸರು ಭಾರೀ ಆತಂಕದಲ್ಲಿದ್ದಾರೆ. ಒಂದೇ ಕಟ್ಟಡದಲ್ಲಿರುವ ಟ್ರಾಫಿಕ್ ಹಾಗೂ ಲಾ ಅಂಡ್ ಆರ್ಡರ್ ಠಾಣೆಗಳಲ್ಲಿ ಐವರು ಪೊಲೀಸರು ಕಾಣಿಸಿಕೊಂಡಿದೆ. ಜತೆಗೆ ಓರ್ವ ಎಎಸ್​ಐ ಸಾವನ್ನಪ್ಪಿದ್ದಾನೆ. ಹೀಗಾಗಿ ವಿಲ್ಸನ್​​ ಗಾರ್ಡನ್​​ ಪೊಲೀಸರು ಕೊರೋನಾ ಭೀತಿಯಲ್ಲಿದ್ದಾರೆ.

ಇನ್ನು, ವಿಲ್ಸನ್​​ ಗಾರ್ಡನ್​​​ ಟ್ರಾಫಿಕ್​​ ಪೊಲೀಸ್​​ ಸ್ಟೇಷನ್​​​ನಲ್ಲಿ ನೂರಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ಲಾ ಅಂಡ್​​​ ಆರ್ಡರ್​​ ಠಾಣೆಯಲ್ಲಿ 80 ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಆರು ಮಂದಿಗೆ ಕೊರೋನಾ ಪಾಸಿಟಿವ್​​ ಪತ್ತೆಯಾದ ಪರಿಣಾಮ 60 ಪೊಲೀಸರನ್ನು ಹೋಮ್​​ ಕ್ವಾರಂಟೈನ್​​​​ನಲ್ಲಿ ಇಡಲಾಗಿದೆ.

ವಿಲ್ಸನ್​​ ಗಾರ್ಡನ್​​ನ ಲಾ ಅಂಡ್​​ ಆರ್ಡರ್​ ಪೊಲೀಸ್​​​ ಠಾಣೆಯನ್ನು ಹೊರತುಪಡಿಸಿ ಇಡೀ ಬಿಲ್ಡಿಂಗ್​​​​​ ಅನ್ನು ಬಿಬಿಎಂಪಿ ಸೀಲ್​​ಡೌನ್​​ ಮಾಡಿದೆ. ಈ ಲಾ ಅಂಡ್​​ ಆರ್ಡರ್​​ ಪೊಲೀಸ್​​ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದ 20 ಸಿಬ್ಬಂದಿಯನ್ನು ಹೋಮ್​​ ಕ್ವಾರಂಟೈನ್​ ಮಾಡಲಾಗಿದೆ.

ಇದನ್ನೂ ಓದಿ: PM Modi Speech: ಇಂದು ಸಂಜೆ 4 ಗಂಟೆಗೆ ರಾಷ್ಟ್ರವನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಸದ್ಯ ಟ್ರಾಫಿಕ್​​ ಪೊಲೀಸ್​ ಸಿಬ್ಬಂದಿಯೂ ಲಾ ಅಂಡ್​ ಆರ್ಡರ್​​ ಠಾಣೆಯಲ್ಲೇ ಕೆಲಸ ಮಾಡುತ್ತಿದ್ಧಾರೆ. ಇದರಿಂದ ಸಹಜವಾಗಿಯೇ ಪೊಲೀಸರಲ್ಲಿ ಆತಂಕ ಶುರುವಾಗಿದೆ. ಇನ್ನು ಬಹುತೇಕ ಟ್ರಾಫಿಕ್ ಪೊಲೀಸರು ಕ್ವಾರೆಂಟೈನ್ ಆಗಿದ್ದು, ಈಗ ಇವರ ಠಾಣೆಯಲ್ಲಿ ಕೆಲಸ ಮಾಡುತ್ತಿರುವುದು ಲಾ ಅಂಡ್ ಆರ್ಡರ್‌ ಪೊಲೀಸರಿಗೆ ಭಯ ಹುಟ್ಟಿಸಿದೆ.

ಪೊಲೀಸರು ಕೂಡ ತೀರ ಮುಖ್ಯವಾದ ಕೇಸ್​​ ಹೊರತುಪಡಿಸಿ ಇನ್ಯಾವುದೇ ಕೇಸ್​​​ ದಾಖಲಿಸಿಕೊಳ್ಳುತ್ತಿಲ್ಲ. ಹೀಗೆ ಸಾಧ್ಯವಾದಷ್ಟು ಕೊರೋನಾ ಭೀತಿಯ ಕಾರಣಕ್ಕೆ ಮುಂಜಾಗೃತ ಕ್ರಮ ತೆಗೆದುಕೊಳ್ಳುತ್ತಿದ್ಧಾರೆ.
First published:June 30, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading