HOME » NEWS » Coronavirus-latest-news » AS COVID19 CASES RISE KEJRIWAL MEETS HOME MINISTER SAYS CENTRE HAS ASSURED ALL HELP RH

ದೆಹಲಿಯಲ್ಲಿ ಹೆಚ್ಚಾದ ಕೊರೋನಾ ಸೋಂಕಿತರ ಸಂಖ್ಯೆ; ಅಮಿತ್ ಶಾ ಭೇಟಿಯಾದ ಸಿಎಂ ಕೇಜ್ರಿವಾಲ್; ಸಹಾಯದ ಭರವಸೆ ನೀಡಿದ ಕೇಂದ್ರ

ದೆಹಲಿಯಲ್ಲಿ ಬುಧವಾರ ಒಂದೇ ದಿನ 1,501 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 33,000 ದಾಟಿದೆ. ಈವರೆಗೂ ದೆಹಲಿಯಲ್ಲಿ ಮಾರಕ ಸೋಂಕಿನಿಂದ 984 ಮಂದಿ ಮೃತಪಟ್ಟಿದ್ದಾರೆ. ಎರಡನೆ ಬಾರಿಗೆ ದೆಹಲಿಯಲ್ಲಿ ಒಂದೇ ದಿನ 1501 ಪ್ರಕರಣ ಕಾಣಿಸಿಕೊಂಡಿವೆ. ಜೂನ್ 3ರಂದು ಒಂದೇ ದಿನ 1513 ಪ್ರಕರಣಗಳು ದಾಖಲಾಗಿದ್ದವು.

news18-kannada
Updated:June 11, 2020, 9:37 AM IST
ದೆಹಲಿಯಲ್ಲಿ ಹೆಚ್ಚಾದ ಕೊರೋನಾ ಸೋಂಕಿತರ ಸಂಖ್ಯೆ; ಅಮಿತ್ ಶಾ ಭೇಟಿಯಾದ ಸಿಎಂ ಕೇಜ್ರಿವಾಲ್; ಸಹಾಯದ ಭರವಸೆ ನೀಡಿದ ಕೇಂದ್ರ
ಅರವಿಂದ್ ಕೇಜ್ರಿವಾಲ್ ಮತ್ತು ಅಮಿತ್ ಶಾ.
  • Share this:
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಷ್ಟ್ರ ರಾಜಧಾನಿಯ ಕೊರೋನಾ ವೈರಸ್ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದಾರೆ.

ದೆಹಲಿಯಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ವೈರಸ್ ಬಗ್ಗೆ ಹಾಗೂ ಮಾರಕ ಸೋಂಕು ನಿಯಂತ್ರಣದ ವಿಚಾರವಾಗಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಬಳಿ ಸುದೀರ್ಘವಾಗಿ ಚರ್ಚೆ ಮಾಡಲಾಗಿದೆ. ಕೊರೋನಾ ವೈರಸ್ ವಿರುದ್ಧ ಹೋರಾಡಲು ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅಮಿತ್ ಶಾ ಅವರು ಭರವಸೆ ನೀಡಿದ್ದಾರೆ ಎಂದು ಭೇಟಿ ಬಳಿಕ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಇದಕ್ಕೂ ಮುನ್ನ ದಿನ ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಕೋವಿಡ್-19 ಚಿಕಿತ್ಸೆಗೆ ಇತರೆ ರಾಜ್ಯಗಳ ಜನರು ದೆಹಲಿಗೆ ಬರಲು ಆರಂಭಿಸಿರುವುದರಿಂದ ಜುಲೈ 31ರೊಳಗೆ ದೆಹಲಿಗೆ 1.5 ಲಕ್ಷ ಬೆಡ್​ಗಳು ಬೇಕಾಗುತ್ತವೆ ಎಂದು ಹೇಳಿದ್ದರು. ರಾಜ್ಯ ಸರ್ಕಾರದ ಆಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳನ್ನು ದೆಹಲಿ ನಿವಾಸಿಗಳ ಚಿಕಿತ್ಸೆಗೆ ಕಾಯ್ದಿರಿಸುವ ಸರ್ಕಾರದ ನಿರ್ಧಾರವನ್ನು ರದ್ದುಪಡಿಸಿದ ಲೆಫ್ಟಿನೆಂಟ್ ಗೌವರ್ನರ್ ಅನಿಲ್ ಬೈಜಾಲ್ ಅವರ ಆದೇಶವನ್ನು ಜಾರಿಗೆ ತರಲಾಗುವುದು. ಇದು ಭಿನ್ನಾಭಿಪ್ರಾಯ ಹಾಗೂ ರಾಜಕೀಯ ಮಾಡುವ ಕಾಲವಲ್ಲ ಎಂದು ಹೇಳಿದ್ದರು.ಶಾ- ಕೇಜ್ರಿವಾಲ್ ಭೇಟಿಯ ನಂತರ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು, ದೆಹಲಿ ಸರ್ಕಾರದ ಉದ್ಯೋಗಿಗಳಿಗೆ ಸಂಬಳ ನೀಡಲು ಮತ್ತು ಇತರೆ ಕೆಲಸಗಳಿಗಾಗಿ ತಕ್ಷಣವೇ ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಇದನ್ನು ಓದಿ: ‘ಮಕ್ಕಳ ಆನ್​ಲೈನ್​ ಶಿಕ್ಷಣ ರದ್ದು, ಆಗಸ್ಟ್​ವರೆಗೂ ಸ್ಕೂಲ್​​ ಓಪನ್​​ ಇಲ್ಲ‘ - ಸಚಿವ ಸುರೇಶ್​ ಕುಮಾರ್​

ದೆಹಲಿಯಲ್ಲಿ ಬುಧವಾರ ಒಂದೇ ದಿನ 1,501 ಕೊರೋನಾ ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 33,000 ದಾಟಿದೆ. ಈವರೆಗೂ ದೆಹಲಿಯಲ್ಲಿ ಮಾರಕ ಸೋಂಕಿನಿಂದ 984 ಮಂದಿ ಮೃತಪಟ್ಟಿದ್ದಾರೆ. ಎರಡನೆ ಬಾರಿಗೆ ದೆಹಲಿಯಲ್ಲಿ ಒಂದೇ ದಿನ 1501 ಪ್ರಕರಣ ಕಾಣಿಸಿಕೊಂಡಿವೆ. ಜೂನ್ 3ರಂದು ಒಂದೇ ದಿನ 1513 ಪ್ರಕರಣಗಳು ದಾಖಲಾಗಿದ್ದವು. 
First published: June 11, 2020, 9:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories