HOME » NEWS » Coronavirus-latest-news » ARRANGEMENT FOR VEGETABLE TRADERS AT KSRTC BUS STAND SAYS MLA PREETHAM GOWDA HK

ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ; ಶಾಸಕ ಪ್ರೀತಮ್​ ಗೌಡ

ಎಪಿಎಂಸಿ ಮಾರುಕಟ್ಟೆಯಲ್ಲಿ ಇಂದಿನಿಂದ ಆಲೂಗಡ್ಡೆ ಬಿತ್ತನೆ ಬೀಜದ ಮಾರಾಟ ಪ್ರಾರಂಭವಾಗಲಿದೆ.

news18-kannada
Updated:May 11, 2020, 9:21 AM IST
ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ತರಕಾರಿ ವ್ಯಾಪಾರಕ್ಕೆ ವ್ಯವಸ್ಥೆ ; ಶಾಸಕ ಪ್ರೀತಮ್​ ಗೌಡ
ಶಾಸಕ ಪ್ರೀತಮ್ ಗೌಡ
  • Share this:
ಹಾಸನ(ಮೇ.11): ಕೋವಿಡ್ -19 ಹಿನ್ನೆಲೆಯಲ್ಲಿ ವರ್ತಕರು ಹಾಗೂ ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ತರಕಾರಿ, ಹೂ ಮತ್ತು ಹಣ್ಣಿನ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಗೆ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಮಾರಾಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶಾಸಕರಾದ ಪ್ರೀತಮ್ ಗೌಡ ಅವರು ತಿಳಿಸಿದ್ದಾರೆ.

ಕಟ್ಟಿನಕೆರೆ ಮಾರುಕಟ್ಟೆ ಮತ್ತು ಎಪಿಎಂಸಿ ಮಾರುಕಟ್ಟೆಗೆ ಶಾಸಕ ಪ್ರೀತಮ್ ಗೌಡ ಅವರು ಇಂದು ಭೇಟಿ ನೀಡಿ ಪರಿಶೀಲಿಸಿ ಮಾತನಾಡಿ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯು ಹೆಚ್ಚಾಗುತ್ತಿರುವ ಕಾರಣ ಮಾರುಕಟ್ಟೆಯಲ್ಲಿ ವರ್ತಕರುಗಳು ಎಚ್ಚೆತ್ತುಕೊಂಡು ಗ್ರಾಹಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.

ಕೆ.ಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಹಾಗೂ ಟ್ಯಾಕ್ಸಿ ನಿಲ್ದಾಣದಲ್ಲಿ ವರ್ತಕರಿಗೆ ವ್ಯಾಪಾರ ಮಾಡಲು ಅಂಗಡಿಗಳ ವ್ಯವಸ್ಥೆ ಕಲ್ಪಿಸಲಿದ್ದು, ವ್ಯಾಪಾರಸ್ಥರು ತಮ್ಮ ತರಕಾರಿಗಳನ್ನು ಪದೇ ಪದೇ ಮನೆಗೆ ಹೊತ್ತೊಯ್ಯುವ ಬದಲು ಅಲ್ಲಿಯೇ ಇಟ್ಟರೆ ಅದನ್ನು ನೋಡಿಕೊಳ್ಳಲು ಪೊಲೀಸ್ ಸಿಬ್ಬಂದಿಗಳ ವ್ಯವಸ್ಥೆ ಕಲ್ಪಿಸಿ ತರಕಾರಿಗಳಿಗೆ ಭದ್ರತೆ ನೀಡಲಾಗುತ್ತದೆ ಎಂದು ಶಾಸಕರು ತಿಳಿಸಿದರು.

ಮಾರುಕಟ್ಟೆಯಲ್ಲಿರುವ ವರ್ತಕರು ಹಾಗೂ ಹೊಸದಾಗಿ ವ್ಯಾಪಾರ ಮಾಡುತ್ತಿರುವ 160 ತರಕಾರಿ, ಹೂ ಮತ್ತು ಹಣ್ಣಿನ ಅಂಗಡಿಗಳಿಗೆ ಪ್ರತ್ಯೇಕ ಸ್ಥಳ ನಿಗದಿಮಾಡಿ ಬಿಸಿಲು ಮತ್ತು ಮಳೆಯಿಂದ ರಕ್ಷಣೆ ಇರುವಂತೆ ವ್ಯವಸ್ಥೆ ಕಲ್ಪಿಸಿಕೊಡಲಾಗುತ್ತದೆ ಎಂದು ಅವರು ವರ್ತಕರಿಗೆ ಹೇಳಿದರು.

ವ್ಯಾಪಾರದ ಅಂಗಡಿಗಳು ಬಸ್ ನಿಲ್ದಾಣದಲ್ಲಿ ಸಾಲದೇ ಹೆಚ್ಚಾದರೆ ಅವರಿಗಾಗಿ ಚರ್ಚ್ ಯಿಂದ ಮಹಾವೀರ ವೃತ್ತದವರೆಗೆ ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಕಲ್ಪಿಸಿ ಅಂಗಡಿಗಳನ್ನು ಮಾಡಿಕೊಡಲಾಗುತ್ತದೆ ಎಂದು ಶಾಸಕರಾದ ಪ್ರೀತಂ ಜೆ. ಗೌಡ ಅವರು ಮಾರುಕಟ್ಟೆಯ ವರ್ತಕರಿಗೆ ತಿಳಿಸಿದರು.

ಎ.ಪಿ.ಎಂ.ಸಿ.ಮಾರುಕಟ್ಟೆಯಲ್ಲಿ ಇಂದಿನಿಂದ ಆಲೂಗಡ್ಡೆ ಬಿತ್ತನೆ ಬೀಜದ ಮಾರಾಟ ಪ್ರಾರಂಭವಾಗಲಿದ್ದು, ವರ್ತಕರ ಗಳು ಎಚ್ಚರಿಕೆ ವಹಿಸಿ ರೈತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಂಡು ಬಿತ್ತನೆ ಬೀಜ ಖರೀದಿಸಲು ವ್ಯವಸ್ಥೆ ಮಾಡಬೇಕು ಎಂದು ವರ್ತಕರಿಗೆ ತಿಳಿಸಿದರು.

ಇದನ್ನೂ ಓದಿ : ಕೊರೋನಾ ವೇಳೆಯಲ್ಲಿಯೂ ಕಾಳಸಂತೆಕೋರರ ಅಟ್ಟಹಾಸ ; 1200 ಕ್ವಿಂಟಲ್ ಪಡಿತರ ಅಕ್ಕಿ ವಶರೈತರು ಕೇಳಿದಷ್ಟು ಆಲೂಗಡ್ಡೆ ಬಿತ್ತನೆ ಬೀಜ ನೀಡುವ ಬದಲು ಒಬ್ಬ ರೈತರಿಗೆ ಇಂತಿಷ್ಟು ಎಂದು ನಿಗದಿಪಡಿಸಿ ಎಲ್ಲಾ ರೈತರಿಗೂ ಬಿತ್ತನೆ ಬೀಜ ದೊರೆಯುವಂತೆ ವ್ಯವಸ್ಥೆ ಮಾಡಿ ಎಂದು ಎಪಿಎಂಸಿ ಮಾರುಕಟ್ಟೆಯ ಅಧ್ಯಕ್ಷರು ಹಾಗೂ ವರ್ತಕರುಗಳಿಗೆ ಶಾಸಕರು ಸೂಚಿಸಿದರು.
Youtube Video
First published: May 11, 2020, 9:13 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories