Sonu Sood: ಮಿಲಿಟರಿ ಕೊರೋನಾ ಕೇಂದ್ರಕ್ಕೆ ನಟ ಸೋನು ಸೂದ್​​ ಸಹಾಯ ಕೋರಿದ ಕಮಾಂಡರ್; ಸೇನಾಧಿಕಾರಿಗಳು ತರಾಟೆ

ಮಿಲಿಟರಿ ಕೋವಿಡ್​ ಕ್ಯಾಂಪ್​ಗೆ ನಟ ಸೋನು ಸೂದ್​ ಸಹಾಯ ಕೋರಿ ಜೈಸಲ್ಮೇರ್‌ನಲ್ಲಿ ಬೀಡುಬಿಟ್ಟಿರುವ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಬರೆದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ನಟ ಸೋನು ಸೂದ್.

ನಟ ಸೋನು ಸೂದ್.

 • Share this:
  ನವ ದೆಹಲಿ (ಮೇ 23); ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತದಲ್ಲಿ ಕಾಣಿಸಿಕೊಂಡ ಕೊರೋನಾ ಸೋಂಕು ಇಡೀ ಭಾರತವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಎರಡನೇ ಅಲೆಯ ಆರ್ಭಟಕ್ಕೆ ಸಾವಿನ ಸಂಖ್ಯೆಯೂ ಏರುತ್ತಲೇ ಇದೆ. ಲಾಕ್​ಡೌನ್​ನಿಂದಾಗಿ ಬಡ ಮತ್ತು ಕೆಳ ವರ್ಗದ ಜನ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ಹೀಗಾಗಿ ಕಳೆದ ಒಂದು ವರ್ಷದಿಂದ ಬಡವರ ಸೇವೆಯಲ್ಲಿ ನಿರತವಾಗಿದ್ದ ನಟ ಸೋನು ಸೂದ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಅನೇಕರು ಸೋನು ಸೂದ್​ ಬಳಿ ಸಹಾಯ ಕೇಳಿ ಪಡೆದ ಉದಾಹರಣೆಗಳೂ ಸಾಕಷ್ಟು ಇವೆ. ಹೀಗಾಗಿ ಸೋನು ಸೂದ್​ರನ್ನು ಹೀರೊ ಎಂದೇ ಬಿಂಬಿಸಲಾಗುತ್ತಿದೆ. ​ಈ ನಡುವೆ ಸೋನು ಸೂದ್ ಅವರ ಸಹಾಯ ಕೋರಿ ಸೇನಾ ಅಧಿಕಾರಿಯೊಬ್ಬರು ಪತ್ರ ಬರೆದಿದ್ದು, ಪರಿಣಾಮವಾಗಿ ಸೇನೆಯ ಹಿರಿಯ ಅಧಿಕಾರಿಗಳು ಪತ್ರ ಬರೆದ ಕಮಾಂಡಿಂಗ್ ಆಫೀಸರ್‌ ವಿರುದ್ದ ಕೋಪಗೊಂಡಿದ್ದಾರೆ ಎಂದು ತಿಳಿದುಬಂದಿದೆ.

  ಮಿಲಿಟರಿ ಕೋವಿಡ್​ ಕ್ಯಾಂಪ್​ಗೆ ನಟ ಸೋನು ಸೂದ್​ ಸಹಾಯ ಕೋರಿ ಜೈಸಲ್ಮೇರ್‌ನಲ್ಲಿ ಬೀಡುಬಿಟ್ಟಿರುವ ಇನ್‌ಫ್ಯಾಂಟ್ರಿ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಬರೆದ ಪತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು, ಸೇನೆ ಆರಂಭಿಸುತ್ತಿರುವ ಕೊರೋನಾ ಮಿಲಿಟರಿ ಕೇಂದ್ರದ ಸೌಲಭ್ಯಕ್ಕಾಗಿ ಉಪಕರಣಗಳನ್ನು ಖರೀದಿಸಲು ಅವರು ಪತ್ರದ ಮೂಲಕ ನಟನ ಸಹಾಯ ಕೋರಿದ್ದರು.

  Sonu
  ಕಮಾಂಡರ್​ ಸೋನು ಸೂದ್​ಗೆ ಬರೆದಿರುವ ಪತ್ರ.


  ಈ ಪತ್ರದಲ್ಲಿ ಕಿಡಿಕಾರಿರುವ ಸೇನೆಯ ಹಿರಿಯ ಅಧಿಕಾರಿಗಳು, "ಇದು ಅಧಿಕಾರಿಯ ಅತಿಯಾದ ಉತ್ಸಾಹಭರಿತ ನಡವಳಿಕೆಯಾಗಿದೆ. ಅವರ ಉದ್ದೇಶಗಳು ಸರಿಯಾಗಿಯೇ ಇವೆ. ಕೊರೋನಾ ಕೇಂದ್ರದಲ್ಲಿ ಸೌಲಭ್ಯವನ್ನು ಶೀಘ್ರದಲ್ಲಿಯೇ ಪ್ರಾರಂಭಿಸುವ ಗುರಿಯಿಂದ ಅವರು ಪತ್ರ ಬರೆದಿದ್ದಾರೆ. ಆದರೆ ಇದು ಸರಿಯಾದ ರೀತಿಯಲ್ಲ. ಇಂತಹ ಕೆಲಸ ಮಾಡಬಾರದಾಗಿತ್ತು. ಅವರು ಸರ್ಕಾರದ ನಿಧಿಯ ಮೂಲಕ ಹಣ ಸಂಗ್ರಹಣೆಗಾಗಿ ಕಾಯಬೇಕಾಗಿತ್ತು. ಸಾರ್ವಜನಿಕ ನಿಧಿಯಲ್ಲಿ ಯಾವುದೇ ಕೊರತೆಯಿಲ್ಲ" ಎಂದು ತಿಳಿಸಿದ್ದಾರೆ.

  ಜೈಸಲ್ಮೇರ್‌ನಲ್ಲಿ ಇರುವ ಮಿಲಿಟರಿ ಕಮಾಂಡರ್‌, ಸೋನು ಸೂದ್‌ಗೆ ಬರೆದ ಪತ್ರದಲ್ಲಿ, "ನಮ್ಮೊಂದಿಗೆ ಲಭ್ಯವಿರುವ ಸೀಮಿತ ಸಂಪನ್ಮೂಲಗಳೊಂದಿಗೆ, ಹೆಚ್ಚುವರಿ ಸಲಕರಣೆಗಳ ಅವಶ್ಯಕತೆ ಇದೆ. ಪತ್ರದಲ್ಲಿ ಉಲ್ಲೇಖಿಸಲಾದ ಉಪಕರಣಗಳು ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಅಡಿಯಲ್ಲಿ, 04 ಐಸಿಯು ಹಾಸಿಗೆಗಳು, 10 ಆಮ್ಲಜನಕ ಸಾಂದ್ರಕಗಳು, 10 ಜಂಬೊ ಆಮ್ಲಜನಕ ಸಿಲಿಂಡರ್‌ಗಳು (7000 ಲೀಟರ್), 01 ಎಕ್ಸ್-ರೇ ಯಂತ್ರ ಮತ್ತು 02 ಜನರೇಟರ್ ಸೆಟ್‌ಗಳು ಮತ್ತು 1 ಕೆವಿಎ ಸೇರಿವೆ" ಎಂದು ಬರೆಯಲಾಗಿದೆ.

  ಇದನ್ನೂ ಓದಿ: Coronavirus Karnataka: ಕೊರೋನಾ 2ನೇ ಅಲೆಯಲ್ಲಿ ಯುವಕರೇ ಟಾರ್ಗೆಟ್​​​..!; ಈವರೆಗೆ ರಾಜ್ಯದಲ್ಲಿ 4488 ಯುವಕರ ಸಾವು

  ಅಧಿಕಾರಿಯು ಸೈನ್ಯದಲ್ಲಿನ ಸಂಪ್ರದಾಯಗಳಿಗೆ ಅನುಗುಣವಾಗಿರದ ಒಂದು ವಿಧಾನವನ್ನು ಅನುಸರಿಸಿದ್ದಾರೆ. ಸಾಮಾನ್ಯವಾಗಿ ಅಂತಹ ಅವಶ್ಯಕತೆಗಳಿಗೆ ಸಂಪನ್ಮೂಲಗಳ ಕೊರತೆ ಇಲ್ಲ ಆದರೆ, ಕಮಾಂಡರ್‌ ಅವರ ಉದ್ದೇಶಗಳು ಉದಾತ್ತ ವಾಗಿದ್ದವು ಎಂದು ರಕ್ಷಣಾ ವಿಶ್ಲೇಷಕರ ಮೇಜರ್ ಜನರಲ್ ಎಸ್.ಬಿ.ಅಸ್ತಾನಾ (ನಿವೃತ್ತ) ಹೇಳಿದ್ದಾರೆ.

  ಇದನ್ನೂ ಓದಿ: ನಿಶ್ಚಿತಾರ್ಥಕ್ಕೆ ಹೊರಟ್ಟಿದ್ದ ವರನಿಗೆ ಶಾಕ್; ಸಮಯ ಮೀರುತ್ತಿದ್ದರೂ ವಾಹನ ತಡೆ ಹಿಡಿದ ಪೊಲೀಸರು!

  "ಇಂತಹ ನಡವಳಿಕೆಗಳು ದೀರ್ಘಾವಧಿಯ ಪರಿಣಾಮವನ್ನು ಬೀರುತ್ತವೆ. ನಾಳೆ ರಾಜಕೀಯ ವ್ಯಕ್ತಿಗಳಿಗೆ ಪತ್ರ ಬರೆಯಬಹುದು ಅಥವಾ ಪ್ರಚಾರ ಪಡೆಯುವ ಉದ್ದೇಶ ಹೊಂದಿರ ಬಹುದು. ಸಾಮಾನ್ಯವಾಗಿ ನಾವು, ಶ್ರೇಣಿಯಲ್ಲಿರುವ ಹಿರಿಯ ಅಧಿಕಾರಿಗಳನ್ನು ಹೆಚ್ಚುವರಿ ಸಂಪನ್ಮೂಲಗಳಿಗಾಗಿ ಸಂಪರ್ಕಿಸುತ್ತೇವೆ ಅವರಿಗೆ ತುರ್ತು ಅವಶ್ಯಕತೆಗಳನ್ನು ಪೂರೈಸಲು ತುರ್ತು ಆರ್ಥಿಕ ಅಧಿಕಾರಗಳು ಇರುತ್ತವೆ" ಎಂದು ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.

  ಸೋನು ಸೂದ್‌ಗೆ ಸೇನಾ ಅಧಿಕಾರಿ ಬರೆದಿರುವ ಪತ್ರ ಸಾಮಾಜಿಕ ಜಾಲತಾಣ ಗಳಲ್ಲಿ ಹೆಚ್ಚು ವೈರಲ್ ಆಗಿತ್ತು. ಸೇನೆಗೂ ಕೂಡ ನೆರವು ನೀಡುತ್ತಿಲ್ಲ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಅನೇಕ ಮಂದಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಸೇನೆಯ ಹಿರಿಯ ಅಧಿಕಾರಿಗಳು ಪತ್ರ ಬರೆದಿದ್ದ ಕಮಾಂಡರ್‌ ವಿರುದ್ಧ ಕೋಪಗೊಂಡಿದ್ದಾರೆ.
  Published by:MAshok Kumar
  First published: