HOME » NEWS » Coronavirus-latest-news » ARIJIT SINGH SAID THE FUND RAISED ROM HIS LIVE CONCERTS WILL BE USED TO HELP VILLAGE HOSPITALS STG AE

Arijit Singh: ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳ ನೆರವಿಗೆ ನಿಂತ ಅರಿಜಿತ್ ಸಿಂಗ್...!

ಡಿಜಿಟಲ್ ವೇದಿಕೆಗಳ ಮೂಲಕ ತನ್ನ ಲೈವ್ ಕಾನ್ಸರ್ಟ್​ ಮಾಡಲು ಅರಿಜಿತ್​ ನಿರ್ಧರಿಸಿದ್ದಾರೆ. ಜೊತೆಗೆ ಈ ಲೈವ್​ ಸಂಗೀತ ಕಾರ್ಯಕ್ರಮಗಳ ಮೂಲಕ ಬರುವ ಹಣವನ್ನು ಸಂಗ್ರಹಿಸಿ ಒಂದೊಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ.

Trending Desk
Updated:June 8, 2021, 3:40 PM IST
Arijit Singh: ಗ್ರಾಮೀಣ ಪ್ರದೇಶಗಳಲ್ಲಿರುವ ಆಸ್ಪತ್ರೆಗಳ ನೆರವಿಗೆ ನಿಂತ ಅರಿಜಿತ್ ಸಿಂಗ್...!
ಗಾಯಕ ಅರಿಜಿತ್ ಸಿಂಗ್
  • Share this:
ನಮಗೆಲ್ಲ ತಿಳಿದ ಹಾಗೆ ಸರಿ ಸುಮಾರು ಎರಡು ವರ್ಷಗಳಿಂದ ಕೋವಿಡ್ ಅಲೆಗೆ ಸಿಲುಕಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಅದರಲ್ಲೂ ನಮ್ಮ ದೇಶ ತೀವ್ರವಾದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಲಭ್ಯವಿರುವ ಮಾಹಿತಿಗಳ ಪ್ರಕಾರ ದೇಶದ ಒಟ್ಟು ಆಡಳಿತ ವ್ಯವಸ್ಥೆ ಹಗಲು ರಾತ್ರಿಯೆನ್ನದೆ ನಿರಂತರವಾಗಿ ಈ ಸಮಸ್ಯೆಯನ್ನು ಸುಧಾರಣೆಗೆ ತರಲು ಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಮತ್ತು ಭದ್ರತಾ ವ್ಯವಸ್ಥೆ ನಿದ್ರೆಯಿಲ್ಲದೆ ಪರಿತಪಿಸುತ್ತಿದೆ ಎನ್ನುವುದನ್ನು ಗಮನಿಸುತ್ತಿದ್ದೇವೆ. ಆದರೂ ನಮ್ಮ ನಾಡಿನಲ್ಲಿ ವೈದ್ಯಕೀಯ  ಮೂಲಸೌಕರ್ಯ ಇಲ್ಲದೆ ಬಡವರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿರುವುದು ಶೋಚನೀಯ. ಈ ನಿಟ್ಟಿನಲ್ಲಿ ಹಲವಾರು ಸಂಘಟಿತ ಸಂಸ್ಥೆಗಳು ತಮ್ಮ ನೆರುವು ನೀಡುತ್ತಿರುವುದನ್ನು ನೋಡುತ್ತಿದ್ದೇವೆ. ಇಲ್ಲಿ ಗಮನಿಸಲೇಬೇಕಾದ ವಿಷಯವೆಂದರೆ ಅನೇಕ ರಂಗಗಳಲ್ಲಿ ಗುರುತಿಸಿಕೊಂಡಿರುವ ಸೆಲೆಬ್ರಿಟಿಗಳು ನಿರಂತರವಾಗಿ ತಮ್ಮ ಕೈಜೋಡಿಸಿದ್ದಾರೆ. ಇದೀಗ ಬಾಲಿವುಡ್ ಖ್ಯಾತ ಗಾಯಕ ಅರಿಜಿತ್ ಸಿಂಗ್  ಸಹ ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದಾರೆ. 

ದೇಶಾದ್ಯಂತ ಕೊ.ರೋರೊನಾ ಎರಡನೇ ಅಲೆ ರೌದ್ರನರ್ತನ ತೋರುತ್ತಿದ್ದು ಲಕ್ಷಾಂತರ ಜನರ ಪ್ರಾಣ ಹಿಂಡಿದೆ. ಬಾಲಿವುಡ್ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕ ಅರಿಜಿತ್ ಸಿಂಗ್ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಹುಟ್ಟಿ ಬೆಳೆದವರು. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಗ್ರಾಮೀಣ ಬಾಗದ ಜನರ ಕಷ್ಟದ ಬದುಕು ಸ್ವತಃ ಅವರಿಗೆ ಅರಿವಿದೆ ಎನ್ನಬಹುದು. ಹಾಗಾಗಿ ದೇಶಾದ್ಯಂತ ಬೆಂಬಿಡದೆ ಕಾಡುತ್ತಿರುವ ವೈರಸ್​ನಿಂದ ಗ್ರಾಮೀಣ ಜನರನ್ನು ರಕ್ಷಿಸಲು ಆರೋಗ್ಯ ಸೇವೆಗಳ ಉನ್ನತೀಕರಣಗೊಳಿಸಲು ಮುಂದಾಗಿರುವ ಅರಿಜಿತ್ ಸಿಂಗ್ ತನ್ನ ಫೇಸ್​ಬುಕ್​ ಮೂಲಕ ಗ್ರಾಮೀಣ ಭಾಗದ ಆರೋಗ್ಯ ವ್ಯವಸ್ಥೆಗೆ ಬೇಕಾದ ಸಲಕರಣೆಗಳನ್ನು ಖರೀದಿಸಲು ತಮ್ಮ ಸಹಾಯಸ್ತ ಚಾಚಿದ್ದಾರೆ.
View this post on Instagram


A post shared by Arijit Singh (@arijitsingh)


ಡಿಜಿಟಲ್ ವೇದಿಕೆಗಳ ಮೂಲಕ ತನ್ನ ಲೈವ್ ಕಾನ್ಸರ್ಟ್​ ಮಾಡಲು ಅರಿಜಿತ್​ ನಿರ್ಧರಿಸಿದ್ದಾರೆ. ಜೊತೆಗೆ ಈ ಲೈವ್​ ಸಂಗೀತ ಕಾರ್ಯಕ್ರಮಗಳ ಮೂಲಕ ಬರುವ ಹಣವನ್ನು ಸಂಗ್ರಹಿಸಿ ಒಂದೊಳ್ಳೆ ಕಾರ್ಯಕ್ಕೆ ಬಳಸಿಕೊಳ್ಳಲು ಮುಂದಾಗಿದ್ದಾರೆ. ಅವರು ತಮ್ಮ ಸಂಗೀತ ಕಾರ್ಯಕ್ರಮಗಳಿಂದ ಸಂಗ್ರಹವಾದ ಒಟ್ಟು ಹಣವನ್ನು ಗ್ರಾಮೀಣ ಭಾಗದ ಆಸ್ಪತ್ರೆಗಳಿಗೆ MRI, CT ಸ್ಕ್ಯಾನ್ ಯಂತ್ರಗಳನ್ನು ಖರೀದಿಸಲು ಬಳಸಲಾಗುವುದೆಂದು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ.

ಕೆಲದಿನಗಳ ಹಿಂದಷ್ಟೆ ಕೊರೋನಾ ವೈರಸ್‌ ಕಾರಣದಿಂದಾಗಿ ತನ್ನ ತಾಯಿಯನ್ನು ಕಳೆದುಕೊಂಡಿದ್ದರು. ಜೊತೆಗೆ ತಾವು ಕೂಡ ಕೋವಿಡ್​ನಿಂದ ಬಳಲಿದ್ದು, ನಂತರ ಗುಣಮುಖರಾದರು.

ಇದನ್ನೂ ಓದಿ: Actress Ramya: ವೆಬ್ ಸರಣಿ ನೋಡಿದ ಮೇಲೆ ಆ ನಟಿಯ ಫ್ಯಾನ್​ ಆಗೋದ್ರಂತೆ ರಮ್ಯಾ: ರಶ್ಮಿಕಾಗೂ ಇಷ್ಟವಾಗಿದೆ ಆ ಕಲಾವಿದೆಯ ಅಭಿನಯ..!

ಈ ಹಿನ್ನೆಲೆಯಲ್ಲಿ ನಮ್ಮ ನಾಡಿನ ಗ್ರಾಮೀಣ ಪ್ರದೇಶದ ಆರೋಗ್ಯ ವ್ಯವಸ್ಥೆ ಸುಧಾರಿಸಲು ತಮ್ಮ ಅನಿವಾರ್ಯತೆಯನ್ನು ಮನಗಂಡು ಸಾಮಾಜಿಕ ಕಳಕಳಿ ತೋರಿಸುತ್ತಿರುವವರ ಪಟ್ಟಿಗೆ ಅರಿಜಿತ್ ಕೂಡ ಸೇರುತ್ತಿದ್ದಾರೆ. ಈ ನಿಟ್ಟಿನಲ್ಲಿ ಹೇಳುವುದಾದರೆ ಅನೇಕ ರಂಗದ ಸೆಲೆಬ್ರಿಟಿಗಳು ತಮಗೆ ಕೈಲಾದಷ್ಟು ನೆರವು ನೀಡುವುದರ ಮೂಲಕ ಇಂತಹ ದುಃಸ್ಥಿತಿಯಲ್ಲಿ ನಮ್ಮ ದೇಶದ ಬಡಜನರ ಬದುಕಿಗೆ ಬೆಳಕಾಗುವುದು ನಿಜಕ್ಕೂ ಶ್ಲಾಘನೀಯ. ಇದೀಗ ಅರಿಜಿತ್ ತನ್ನಲ್ಲಿರುವ ಪ್ರತಿಭೆಯ ಮೂಲಕ ಬಡಜನರ ನೋವಿಗೆ ಮಿಡಿಯುತ್ತಿರುವ ಈ ಹೃದಯವಂತ ಗಾಯಕನಿಗೊಂದು ಅಂತರಾಳದ ಅಭಿನಂದನೆ ಸಲ್ಲಿಸೋಣ. ಜೊತೆಗೆ ನಾವು ಕೂಡ ಇಂತಹ ಮಹತ್ತರ ಕಾರ್ಯಗಳಿಗೆ ಕೈಲಾದಷ್ಟು ಸಹಾಯ ಮಾಡೋಣ ಎಂದು ವಿನಂತಿಸಿಕೊಳ್ಳುತ್ತೇನೆ.

ನ್ಯೂಸ್18 ಕನ್ನಡ ಕಳಕಳಿ

ಕೊರೋನಾ ಪಾಸಿಟಿವ್ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: Anitha E
First published: June 8, 2021, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories