ಅರ್ಜೆಂಟೀನಾ ವಿಜ್ಞಾನಿಗಳಿಂದ ಬಹಳ ಅಗ್ಗ ಮತ್ತು ವೇಗದ ಕೊರೋನಾ ಪರೀಕ್ಷಾ ಕಿಟ್ ಅಭಿವೃದ್ಧಿ
ನಿಯೋಕಿಟ್ನ ಬೆಲೆ ಸುಮಾರು 8 ಡಾಲರ್ ಆಗಬಹುದು. ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಇದು ಸುಮಾರು 600 ರೂಪಾಯಿ ಆಗಬಹುದು.
news18-kannada Updated:May 20, 2020, 12:02 PM IST

ಸಾಂದರ್ಭಿಕ ಚಿತ್ರ
- News18 Kannada
- Last Updated: May 20, 2020, 12:02 PM IST
ಅರ್ಜೆಂಟೀನಾ(ಮೇ.20): ಕೊರೋನಾ ವೈರಸ್ ಸೋಂಕು ಉದ್ಭವಿಸಿದ ಐದು ತಿಂಗಳಾದರೂ ಈಗಲೂ ಜಗತ್ತಿನ ವಿವಿಧೆಡೆ ಪರೀಕ್ಷಾ ಕಿಟ್ಗಳು ಅಭಿವೃದ್ಧಿಗೊಳ್ಳುತ್ತಲೇ ಇವೆ. ಹಿಂದೆ ಹಲವು ದಿನಗಳವರೆಗೂ ಪರೀಕ್ಷೆಯ ರಿಸಲ್ಟ್ಗೆ ಕಾಯುವ ಸ್ಥಿತಿ ಇತ್ತು. ಈಗ ಒಂದೇ ದಿನದಲ್ಲಿ ರಿಸಲ್ಟ್ ಕೊಡಬಲ್ಲ ಕಿಟ್ಗಳಿವೆ. ಇನ್ನೂ ವೇಗವಾಗಿ ಫಲಿತಾಂಶ ಕೊಡುವ ಕಿಟ್ಗಳಿದ್ದರೆ ಕೊರೋನಾ ವಿರುದ್ಧ ಹೋರಾಟಕ್ಕೆ ಸಹಕಾರಿಯಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯ. ಇದೇ ಸಂದರ್ಭದಲ್ಲಿ ಅರ್ಜೆಂಟೀನಾ ದೇಶದ ವಿಜ್ಞಾನಿಗಳು ಎರಡನೇ ಗಂಟೆಯಲ್ಲಿ ಫಲಿತಾಂಶ ನೀಡಬಲ್ಲ ಪರೀಕ್ಷಾ ಕಿಟ್ಗಳನ್ನ ಅಭಿವೃದ್ಧಿಪಡಿಸುತ್ತಿದ್ದಾರೆ.
ಇದು ಬಹಳ ವೇಗವಾಗಿ ಫಲಿತಾಂಶ ನೀಡುತ್ತದೆ. ಬಹಳ ಅಗ್ಗವೂ ಹೌದು. ದೊಡ್ಡ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸಲು ಇದು ಅನುಕೂಲವಾಗುತ್ತದೆ ಎಂದು ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ತಿಳಿಸುತ್ತಾರೆ. ಅಂದಹಾಗೆ, ನಿಯೋಕಿಟ್-ಕೋವಿಡ್-19 ಎಂದು ಕರೆಯುವ ಈ ಹೊಸ ಪರೀಕ್ಷಾ ಕಿಟ್ ಅನ್ನು ಪಾಬ್ಲೋ ಕಸ್ಸಾರ ಫೌಂಡೇಶನ್ ಎಂಬ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈ ಕಿಟ್ ಬಹಳ ಸರಳ, ಅಗ್ಗ ಹಾಗೂ ಸುಲಭವಾಗಿ ಲಭ್ಯವಿರುವ ತಂತ್ರಜ್ಞಾನ ಹೊಂದಿದೆ ಎಂದು ಸಂಸ್ಥೆಯ ವಿಜ್ಞಾನಿ ಸ್ಯಾಂಟಿಯಾಗೋ ವೆರ್ಬಾಜ್ ಹೇಳುತ್ತಾರೆ.
ನಿಯೋಕಿಟ್ನ ಬೆಲೆ ಸುಮಾರು 8 ಡಾಲರ್ ಆಗಬಹುದು. ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಇದು ಸುಮಾರು 600 ರೂಪಾಯಿ ಆಗಬಹುದು.
ಇದನ್ನೂ ಓದಿ : ದೇಶದಲ್ಲಿ ದಾಖಲೆ ಪ್ರಮಾಣದಲ್ಲಿ ಏರುತ್ತಿರುವ ಕೊರೋನಾ; ನಿನ್ನೆ ಒಂದೇ ದಿನ 5,611 ಕೇಸ್
ಅರ್ಜೆಂಟೀನಾ ವಿಜ್ಞಾನಿಗಳ ಈ ಆವಿಷ್ಕಾರಕ್ಕೆ ಜಗತ್ತಿನ ವಿವಿಧ ರಾಷ್ಟ್ರಗಳು ಆಸಕ್ತಿ ತೋರಿಸಿವೆಯಂತೆ. ನೆರೆಯ ದೇಶಗಳಿಗೆ ಮಾತ್ರವಲ್ಲ, ಬೇರೆ ದೇಶಗಳಿಗೂ ಈ ಕಿಟ್ ಪೂರೈಸಲು ಸಿದ್ಧರಿದ್ದೇವೆ. ಈ ಕಿಟ್ ಬಗ್ಗೆ ಆಸಕ್ತಿ ಇರುವ ದೇಶಗಳ ರಾಯಭಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದೇವೆ ಎಂದು ಅರ್ಜೆಂಟೀನಾದ ವಿಜ್ಞಾನ-ತಂತ್ರಜ್ಞಾನ ಸಚಿವ ರಾಬರ್ಟೋ ಸಲ್ವಾರೆಜಾ ಹೇಳಿದ್ದಾರೆ.
ಇದು ಬಹಳ ವೇಗವಾಗಿ ಫಲಿತಾಂಶ ನೀಡುತ್ತದೆ. ಬಹಳ ಅಗ್ಗವೂ ಹೌದು. ದೊಡ್ಡ ಪ್ರಮಾಣದಲ್ಲಿ ಟೆಸ್ಟಿಂಗ್ ನಡೆಸಲು ಇದು ಅನುಕೂಲವಾಗುತ್ತದೆ ಎಂದು ಈ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ವಿಜ್ಞಾನಿಗಳು ತಿಳಿಸುತ್ತಾರೆ.