Booster Dose: ನೀವು ಬೂಸ್ಟರ್ ಡೋಸ್ ಪಡೆಯಲು ಅರ್ಹರೆ? ಎಲ್ಲಾ ಅನುಮಾನಗಳಿಗೆ ವೈದ್ಯರ ಉತ್ತರ ಇಲ್ಲಿದೆ

ಬಹುತೇಕರಿಗೆ ತಾವು ಎರಡು ಡೋಸ್ ಪಡೆದುಕೊಂಡಿದ್ದರೂ ಬೂಸ್ಟರ್ ಡೋಸ್ ಪಡೆಯಲೇಬೇಕೆ? ಯಾಕೆ ಪಡೆಯಬೇಕು ಎಂಬ ಅನುಮಾನಗಳಿವೆ. ಈ ಬೂಸ್ಟರ್ ಡೋಸ್ ಕೋವಿಡ್‌ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳೇ ಆಗಿವೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
    ಓಮೈಕ್ರಾನ್ (Omicron) ಹಾಗೂ ಕೋವಿಡ್ ಮೂರನೇ ಅಲೆ (Third wave) ಆತಂಕ ದಿನೇ ದಿನೆ ಹೆಚ್ಚುತ್ತಿದೆ. ಪ್ರತಿಯೊಬ್ಬರು ಎರಡು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರೂ ಕೋವಿಡ್ ರೂಪಾಂತರಿ (Variant) ತಳಿಗಳಿಂದ ಆರೋಗ್ಯ ಸಮಸ್ಯೆ ಆಗದಂತೆ ತಡೆಯಲು ಇದೀಗ “ಬೂಸ್ಟರ್ ಡೋಸ್” ನೀಡಲು ಅನುಮತಿ ಸಿಕ್ಕಿದೆ.. ಬೂಸ್ಟರ್ ಡೋಸ್ (booster dose) ಬಗ್ಗೆ ಸಾಕಷ್ಟು ಅನುಮಾನ ಹಾಗೂ ಗೊಂದಲ ಇದ್ದೇ ಇದೆ. ಬೂಸ್ಟರ್ ಡೋಸ್ ಪಡೆಯುವುದು ಅನಿವಾರ್ಯವೆ? ಯಾರೆಲ್ಲಾ ಈ ಡೋಸ್‌ಗೆ ಅರ್ಹರು, ಇದರಿಂದ ಮತ್ತೇನಾದರು ಆರೋಗ್ಯ ಸಮಸ್ಯೆ ಆಗಲಿದೆಯೇ? ಬೂಸ್ಟರ್ ಡೋಸ್ ಮೊದಲು ಹಾಗೂ ಎರಡು ಡೋಸ್ (second dose) ಎಂದೇನಾದರು ಇದೆಯೇ? ಎಂಬಿತ್ಯಾದಿ ಗೊಂದಲ ಜನರನ್ನು ಮನೆ ಮಾಡಿದೆ. ಈ ಬಗ್ಗೆ ಫೋರ್ಟಿಸ್ ಇಂಟರ್‌ನಲ್ ಮೆಡಿಸನ್‌ನ ಹಿರಿಯ ಸಲಹೆಗಾರ ಡಾ. ಆದಿತ್ಯ ಎಸ್. ಚೌತಿ ವಿವರವಾದ ಮಾಹಿತಿ ನೀಡಿದ್ದಾರೆ.

    ಬೂಸ್ಟರ್ ಡೋಸ್ ಮಹತ್ವವೇನು?

    ಬಹುತೇಕರಿಗೆ ತಾವು ಎರಡು ಡೋಸ್ ಪಡೆದುಕೊಂಡಿದ್ದರೂ ಬೂಸ್ಟರ್ ಡೋಸ್ ಪಡೆಯಲೇಬೇಕೆ? ಯಾಕೆ ಪಡೆಯಬೇಕು ಎಂಬ ಅನುಮಾನಗಳಿವೆ. ಈ ಬೂಸ್ಟರ್ ಡೋಸ್ ಕೋವಿಡ್‌ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳೇ ಆಗಿವೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಈಗಾಗಲೇ ಎರಡು ಡೋಸ್ ಪಡೆದುಕೊಂಡಿದ್ದರೂ, ಓಮೈಕ್ರಾನ್ ನಂಥ ರೂಪಾಂತರ ತಳಿಗಳು ಕಾಣಿಸಿಕೊಳ್ಳುತ್ತಿರುವ ಕಾರಣಕ್ಕೆ ಬೂಸ್ಟರ್ ಡೋಸ್‌ನ ಅವಶ್ಯಕತೆ ಹೆಚ್ಚಿದೆ. ಬೂಸ್ಟರ್ ಡೋಸ್‌ನಿಂದ ಯಾವುದೇ ವೈರಸ್‌ಗೆ ತುತ್ತಾದರೂ ಗಂಭೀರ ಸ್ಥಿತಿಯ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ.

    ಎಲ್ಲರೂ ಬೂಸ್ಟರ್ ಡೋಸ್ ಪಡೆಯಬೇಕೆ?

    ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಫ್ರಂಟ್‌ಲೈನ್ ವಾರಿಯರ್ಸ್ಗಳಾದ ಡಾಕ್ಟರ್, ನರ್ಸ್, ಪೊಲೀಸ್, ಪೌರಕಾರ್ಮಿಕರು, ಶಿಕ್ಷಕರು ಹಾಗೂ ಕೋವಿಡ್ ರೋಗಿಗಳೊಂದಿಗೆ ನೇರ ಸಂಪರ್ಕ ಸಾಧಿಸುವ ವಾರಿಯರ್ಸ್ಗಳಿಗೆ ಮೊದಲ ಆದ್ಯತೆ ನೀಡಲಾಗಿದೆ. ಜೊತೆಗೆ ಹಿರಿಯನಾಗರಿಕರು, ಕೋಮಾರ್ಬಿಡಿಟಿ ಸಮಸ್ಯೆ ಇರುವವರಿಗೂ ಆದ್ಯತೆ ಮೇರೆಗೆ ಬೂಸ್ಟರ್ ಡೋಸ್ ಕೊಡಲು ಸರ್ಕಾರ ನಿರ್ದೇಶಿಸಿದೆ. ಬೂಸ್ಟರ್ ಡೋಸ್‌ನನ್ನು ಸರ್ಕಾರ ಕಡ್ಡಾಯ ಮಾಡಿಲ್ಲ. ಮುಂದಿನ ದಿನಗಳಲ್ಲಿ ಲಸಿಕೆ ಲಭ್ಯತೆ ಮೇರೆಗೆ ಬೂಸ್ಟರ್ ಡೋಸ್ ಪಡೆದುಕೊಳ್ಳಬಹುದು.

    ಇದನ್ನೂ ಓದಿ: Covid-19: ನೀವು ಮನೆಯಿಂದ ಹೊರ ಹೋದ್ರೆ ಕೋವಿಡ್ ಸೋಂಕಿನ ಅಪಾಯದ ಬಗ್ಗೆ ಎಚ್ಚರವಿರಲಿ..!

    ಬೂಸ್ಟರ್ ಡೋಸ್‌ನಿಂದ ಓಮೈಕ್ರಾನ್ ತಡೆಯಬಹುದೇ?

    ಬೂಸ್ಟರ್ ಡೋಸ್‌ನಿಂದ ಓಮಿಕ್ರಾನ್ ಆಗಲಿ ಅಥವಾ ಕೋವಿಡ್ ಆಗಲಿ ತಡೆಯಲು ಸಾಧ್ಯವಿಲ್ಲ. ಆದರೆ, ಇದರಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಯನ್ನು ತಡೆಯಲು ಶಕ್ತವಾಗಿದೆ. ಓಮೈಕ್ರಾನ್ ಬಗ್ಗೆ ಅಸಡ್ಡೆ ಒಳ್ಳೆಯದಲ್ಲ. ಹೊರ ದೇಶಗಳಲ್ಲಿ ಓಮೈಕ್ರಾನ್ ತೀವ್ರತೆ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಕೆಲವು ದೇಶಗಳಲ್ಲಿ ಬೂಸ್ಟರ್ ಡೋಸ್‌ನನ್ನು ಕಡ್ಡಾಯ ಮಾಡಲಾಗಿದೆ. ನಮ್ಮಲ್ಲಿಯೂ ಕಡ್ಡಾಯ ಮಾಡಿದರೆ ಜನರು ಬೂಸ್ಟರ್ ಡೋಸ್ ಪಡೆಯಲು ತೆರಳುತ್ತಾರೆ,

    ಯಾವ ಲಸಿಕೆ ಒಳ್ಳೆಯದು?

    ಈಗಾಗಲೇ ಕೆಲವರು ಕೋವಿಡ್ ಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಪಡೆದುಕೊಂಡಿದ್ದಾರೆ. ಈ ಬೂಸ್ಟರ್ ಡೋಸ್‌ಗೆ ಯಾವ ಲಸಿಕೆ ಪಡೆಯಬೇಕು ಎಂಬ ಗೊಂದಲ ಇದೆ. ಈಗಾಗಲೇ ಕೋವಿಡ್ ಶೀಲ್ಡ್ ಪಡೆದವರು ಯಾವುದೇ ಲಸಿಕೆ ಪಡೆದರೂ ಸಮಸ್ಯೆ ಇಲ್ಲ. ಆದರೆ ಸಾಧ್ಯವಾದಷ್ಟು ಮೊದಲು ಯಾವ ಲಸಿಕೆ ಪಡೆದಿದ್ದರೋ ಅದೇ ಪಡೆದುಕೊಂಡರೆ ಉತ್ತಮ.

    ಮಕ್ಕಳಿಗೆ ಬೂಸ್ಟರ್ ಡೋಸ್ ಬೇಕೆ?

    ಸದ್ಯ ಮಕ್ಕಳಿಗೆ ಮೊದಲೆರಡು ಲಸಿಕೆ ವಿತರಣೆ ಬಳಿಕ ಬೂಸ್ಟರ್ ಡೋಸ್ ಬಗ್ಗೆ ಯೋಚನೆ ಮಾಡಬಹುದು. ಪಸ್ತುತ ಮಕ್ಕಳಿಗೆ ಬೂಸ್ಟರ್ ಡೋಸ್ ಅಗತ್ಯವಿಲ್ಲ. ಅಲ್ಲದೆ ಮಕ್ಕಳಲ್ಲಿ ಆಂಟಿಬಾಡಿ ಹೆಚ್ಚಿರುವುದರಿಂದ ಅವರಿಗೆ ಓಮೈಕ್ರಾನ್ ತೀವ್ರತೆ ಕಡಿಮೆ ಇರಲಿದೆ.

    ಇದನ್ನೂ ಓದಿ: Omicron: ಎಚ್ಚರ.. ಎಚ್ಚರ.. ನಿಮ್ಮ ಕರುಳಿನ ಮೇಲೆ ಈ ಪರಿಣಾಮ ಬೀರುತ್ತೆ ಓಮಿಕ್ರಾನ್​ ಸೋಂಕು!

    ಎಷ್ಟು ಬೂಸ್ಟರ್ ಡೋಸ್ ಪಡೆಯಬೇಕು?

    ಐಸಿಎಂಆರ್ ಮಾರ್ಗಸೂಚಿ ಪ್ರಕಾರ ಸದ್ಯಕ್ಕೆ ಒಂದೇ ಬೂಸ್ಟರ್ ಡೋಸ್ ನೀಡಲು ಅನುಮತಿ ಸಿಕ್ಕಿದೆ. ಯಾವುದೇ ಕಾರಣಕ್ಕೂ ಎರಡು ಮೂರು ಬೂಸ್ಟರ್ ಡೋಸ್ ಪಡೆಯುವುದು ಒಳ್ಳೆಯದಲ್ಲ. ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗದೇ ಹೋದರೂ ಸರ್ಕಾರದ ಸೌಲಭ್ಯವನ್ನು ದುರುಪಯೋಗ ಪಡಿಸಿಕೊಂಡಂತಾಗಲಿದೆ.

    ಬೂಸ್ಟರ್ ಡೋಸ್‌ನಿಂದ ಮೈಕೈ ನೋವು ಇರಲಿದೆಯೇ?

    ಕೋವಿಡ್ ಲಸಿಕೆ ಈಗಾಗಲೇ ನಮ್ಮ ದೇಹಕ್ಕೆ ಹೊಂದಿಕೊಂಡಿದೆ. ಮೊದಲ ಡೋಸ್ ಪಡೆದವರಿಗೆ ಹೆಚ್ಚು ಜ್ವರ ಹಾಗೂ ಮೈಕೈನೋವು ಕಾಣಿಸಿಕೊಂಡಿತ್ತು. ಆದರೆ ಎರಡನೇ ಡೋಸ್ ಅಷ್ಟಾಗಿ ಸಮಸ್ಯೆ ನೀಡಿರಲಿಲ್ಲ. ಈಗ ಲಸಿಕೆ ನಮ್ಮ ದೇಹಕ್ಕೆ ಹೊಂದಿಕೊಂಡಿರುವುದರಿಂದ ಮೂರನೇ ಡೋಸ್ ಅಷ್ಟಾಗಿ ಜ್ವರ ಮೈ ಕೈನೋವು ನೀಡುವ ಸಾಧ್ಯತೆ ಕಡಿಮೆ.
    Published by:Soumya KN
    First published: