ಭಾಗ- 3 | ನೀವು ಹುಟ್ಟಾ ದ್ವಿಭಾಷಿಗರೆ? ಹಾಗಿದ್ದರೇ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ಎಂತಹದಿರಬಹುದು ಗೊತ್ತಾ?

ಕುತೂಹಲದ ವಿಷಯವೆಂದರೆ ಒಂದು ಭಾಷಿಗರೊಂದಿಗೆ ಮಾತಾಡುವಾಗ ಆ ಭಾಷೆಯೊಂದಿಗೆ ಒಳಮನಸಿನಲ್ಲಿ ಅಂಟಿಕೊಳ್ಳುವ ವ್ಯಕ್ತಿತ್ವದ ಲಕ್ಷಣಗಳು ಯಾವುದೇ ಶ್ರಮವಿಲ್ಲದೆಯೇ ಸಂದರ್ಭಕ್ಕನುಗುಣವಾಗಿ ವ್ಯಕ್ತಗೊಳ್ಳುವುದು. ಇಂತಹದೊಂದು ಪ್ರಕ್ರಿಯೆಯ ಮುೂಲವು ಸುಪ್ತಚೇತನದ ಚಾಕಚಕ್ಯತೆ ಇಂದ ಎನ್ನುತ್ತದೆ ಮನೋವಿಜ್ಞಾನ.

news18-kannada
Updated:April 29, 2020, 8:00 AM IST
ಭಾಗ- 3 | ನೀವು ಹುಟ್ಟಾ ದ್ವಿಭಾಷಿಗರೆ? ಹಾಗಿದ್ದರೇ ನಿಮ್ಮ ವ್ಯಕ್ತಿತ್ವದ ಲಕ್ಷಣಗಳು ಎಂತಹದಿರಬಹುದು ಗೊತ್ತಾ?
ಡಾ. ಅ.ಶ್ರೀಧರ.
  • Share this:
ಆಧುನಿಕ ಮನೋವಿಜ್ಞಾನವು ಪ್ರಯೋಗ, ಪರೀಕ್ಷೆ, ಮರುಪರೀಕ್ಷೆಗಳ ನಂತರವಷ್ಟೇ ವರ್ತನೆಗಳ ಸತ್ಯಾಸತ್ಯತೆ ಒಪ್ಪಬಹುದಾದ ತತ್ವಗಳು ಎಂದು ಗುರುತಿಸುವುದು. ಉದಾಹರಣೆಗೆ ಹೇಳುವುದಾದರೆ: “ಹುಚ್ಚ”(ಮ್ಯಾಡ್) ಎನ್ನುವಂತಹ ಶಬ್ದಗಳು ಇಂದಿನ ಮನೋವಿಜ್ಞಾನದ ಅಧ್ಯಯನಗಳಲ್ಲಿ ಕಂಡುಬರುವುದಿಲ್ಲ. ಆದರೂ ಈ ಮಾದರಿಯ ಜನಬಳಕೆಯ ಪದ, ತಿಳಿವಳಿಕೆಗಳನೇಕವು ಮನೋವೈಜ್ಞಾನಿಕ ಪ್ರಯೋಗ ಮತ್ತು ಪ್ರಯೋಗಗಳ ಮುೂಲ ಪ್ರಾಗಲ್ಪನೆಯಾಗಿದ್ದು (ಹೈಪಾತಿಸಿಸ್) ಪ್ರಯೋಗ ಯಶಸ್ವಿಯಾದ ನಂತರದಲ್ಲಿ ವೈಜ್ಞಾನಿಕ ಸತ್ಯಗಳಾಗಿ ಬಳಕೆಗೆ ಬರುವುದು.

ಇಂತಹದೊಂದು ಕುತೂಹಲದ ಸಂಗತಿ ಎಂದರೇ ತಾಯಿನುಡಿ ಮತ್ತು ಅದರೊಂದಿಗೆ ಕಲಿತ ಇನ್ನೊಂದು ಭಾಷೆ. ಹೀಗೆ ಎರಡು ಭಾಷೆಗಳನ್ನು ಬಾಲ್ಯದ ದಿನಗಳಿಂದಲೇ ಕಲಿಯಲು ಅವಕಾಶವಿರುವ ಪರಿಸರದಲ್ಲಿರುವವರು ಸಮಯೋಚಿತವಾಗಿ ಸಂಬಂಧಿಸಿದ ಭಾಷಿಗರೊಂದಿಗೆ ಅವರವರ ಭಾಷೆಯಲ್ಲಿ ಮಾತಾಡುವುದನ್ನು ಕಂಡಿದ್ದೇವೆ. ಇದೇನೋ ಬಲ್ಲ ಸಂಗತಿಯೇ; ಆದರೂ ತಿಳಿಯದ ಸಂಗತಿ ಎಂದರೇ ಭಾಷೆಯೊಂದಿಗೆ ವ್ಯಕ್ತಿತ್ವದ ಲಕ್ಷಣಗಳೂ ಗಟ್ಟಿಯಾಗುವುದೂ ಸಾಮಾನ್ಯ.

ಕುತೂಹಲದ ವಿಷಯವೆಂದರೆ ಒಂದು ಭಾಷಿಗರೊಂದಿಗೆ ಮಾತಾಡುವಾಗ ಆ ಭಾಷೆಯೊಂದಿಗೆ ಒಳಮನಸಿನಲ್ಲಿ ಅಂಟಿಕೊಳ್ಳುವ ವ್ಯಕ್ತಿತ್ವದ ಲಕ್ಷಣಗಳು ಯಾವುದೇ ಶ್ರಮವಿಲ್ಲದೆಯೇ ಸಂದರ್ಭಕ್ಕನುಗುಣವಾಗಿ ವ್ಯಕ್ತಗೊಳ್ಳುವುದು. ಇಂತಹದೊಂದು ಪ್ರಕ್ರಿಯೆಯ ಮುೂಲವು ಸುಪ್ತಚೇತನದ ಚಾಕಚಕ್ಯತೆ ಇಂದ ಎನ್ನುತ್ತದೆ ಮನೋವಿಜ್ಞಾನ. ಉದಾಹರಣೆಗೆ ಮಗುವಿನ ತಂದೆ ಒಂದು ತಾಯ್ನುಡಿಯನ್ನು ಮಾತಾಡುತ್ತಿದ್ದು, ತಾಯಿ ಮತ್ತೊಂದು ತಾಯ್ನುಡಿಯವರಾಗಿದ್ದಾಗ ಮಗುವು ಈ ಎರಡೂ ಭಾಷೆಗಳನ್ನು ಕಲಿಯುವುದು ಸಾಮಾನ್ಯವಷ್ಟೇ ಅಲ್ಲ ಇದರೊಂದಿಗೆ ಭಾಷಾ ಸೂಕ್ಷ್ಮ ವ್ಯಕ್ತಿತ್ವದ ಲಕ್ಷಣಗಳನ್ನು ಗ್ರಹಿಸಿಕೊಳ್ಳುವುದು. ಹೀಗಾಗಿ ನೀವೇನಾದರೂ ದ್ವಿಭಾಷಿಗರಾಗಿದ್ದರೇ ನಿಮ್ಮ ವ್ಯಕ್ತಿತ್ವ ಲಕ್ಷಣಗಳು ಪಾದರಸದಂತೆ ಅತ್ತಿಂದಿತ್ತ ಚಲಿಸಲು ಸದಾ ಸಿದ್ಧವಿರುತ್ತದೆ.

ಇದನ್ನು ಓದಿ: ಭಾಗ 2 | ಎಚ್ಚರ! ಸಮೂಹ ಸನ್ನಿ ಅವಕಾಶಕ್ಕಾಗಿ ಸುತ್ತಾಡುತ್ತಿರಬಹುದು…!

ಲೇಖಕರು: ಡಾ. ಆಚಾರ್ಯ ಶ್ರೀಧರ, ಮನೋವಿಜ್ಞಾನಿ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ: http://www.bruhanmati.com/
First published: April 29, 2020, 8:00 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading