ಚನ್ನಪಟ್ಟಣದಲ್ಲಿ ಪೊಲೀಸರು, ವೈದ್ಯರು, ಪೌರಕಾರ್ಮಿಕರಿಗೆ ಕೊಕೊಕೋಲಾದ ಆ್ಯಪಲ್ ಜ್ಯೂಸ್ ವಿತರಣೆ

ಮುಂದಿನ ದಿನಗಳಲ್ಲಿ ಮಾಗಡಿ, ಕನಕಪುರ, ರಾಮನಗರ ಹಾಗೂ ಬಿಡದಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಪತ್ರಕರ್ತರು, ವೈದ್ಯರು, ನಗರಸಭೆ ಸಿಬ್ಬಂದಿಗೂ ಆ್ಯಪಲ್ ಜ್ಯೂಸ್ ವಿತರಿಸುವುದಾಗಿ ಕೊಕೋ ಕೋಲಾ ಉದ್ಯೋಗಿ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಪೊಲೀಸರಿಗೆ ಕೊಕೊಕೋಲಾದ ಆ್ಯಪಲ್ ಜ್ಯೂಸ್ ಹಂಚುತ್ತಿರುವುದು.

ಚನ್ನಪಟ್ಟಣದಲ್ಲಿ ಪೊಲೀಸರಿಗೆ ಕೊಕೊಕೋಲಾದ ಆ್ಯಪಲ್ ಜ್ಯೂಸ್ ಹಂಚುತ್ತಿರುವುದು.

 • Share this:
  ರಾಮನಗರ: ವಿಶ್ವಾದ್ಯಂತ ಜನರು ಕೊರೋನಾ ವೈರಸ್​ನಿಂದಾಗಿ ತಲ್ಲಣಗೊಂಡಿದ್ದಾರೆ. ಈ ನಡುವೆ ಹಗಲುರಾತ್ರಿ ಸಾರ್ವಜನಿಕರಿಗಾಗಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರಿಗಳು, ನಗರಸಭೆ ಸಿಬ್ಬಂದಿ, ವೈದ್ಯರಿಗೆ ಕೊಕೊಕೋಲಾ ಕಂಪನಿಯ ಆ್ಯಪಲ್ ಜ್ಯೂಸ್ ಬಾಟಲ್​ಗಳನ್ನ ವಿತರಣೆ ಮಾಡಲಾಯಿತು.

  ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪೊಲೀಸರಿಗೆ, ವೈದ್ಯರಿಗೆ, ನಗರಸಭೆ ಸಿಬ್ಬಂದಿಗೆ ಸುಮಾರು 1,000 ಕ್ಕೂ ಹೆಚ್ಚು ಜ್ಯೂಸ್ ಬಾಟಲ್​ಗಳನ್ನ ವಿತರಣೆ ಮಾಡಲಾಯಿತು. ಸಮಾಜಸೇವಕರಾದ ಜಯರಾಮು ಹಾಗೂ ಕೊಕೊಕೋಲಾ ಕಂಪನಿಯ ಉದ್ಯೋಗಿ ಶ್ರವಣ್ ಜೊತೆಗೂಡಿ ಈ ಕಾರ್ಯಕ್ರಮ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿನಿತ್ಯ ನಮಗಾಗಿ ಪೊಲೀಸರು, ವೈದ್ಯರು, ನಗರಸಭೆ ಸಿಬ್ಬಂದಿ ಹಗಲುರಾತ್ರಿ ಕೆಲಸ ಮಾಡ್ತಿದ್ದಾರೆ. ಈ ಸಂದರ್ಭದಲ್ಲಿ ಸಾರ್ವಜನಿಕರಾದ ನಾವು ಅವರ ನೆರವಿಗೆ ಬರಬೇಕು. ಈಗ ಬೇಸಿಗೆಯಿರುವ ಕಾರಣ ಇವರೆಲ್ಲರು ಬಿಸಿಲಿನಲ್ಲಿ ಕೆಲಸ ಮಾಡ್ತಿದ್ದಾರೆ. ಹಾಗಾಗಿ ನಾವು ಕೊಕೊಕೋಲಾ ಕಂಪನಿಯ ಜೊತೆಗೂಡಿ ಆ್ಯಪಲ್ ಜ್ಯೂಸ್ ಬಾಟಲ್ ಗಳನ್ನ ವಿತರಣೆ ಮಾಡ್ತಿದ್ದೇವೆಂದು ತಿಳಿಸಿದರು.

  ಇದನ್ನೂ ಓದಿ: ಹೊಂಗಸಂದ್ರದಲ್ಲಿ 29 ಮಂದಿಗೆ ರೋಗ ಅಂಟಿಸಿದ್ದ ಬಿಹಾರಿ ಕೂಲಿ ಕಾರ್ಮಿಕನಿಗೆ ಸೋಂಕು ತಗುಲಿದ್ದು ಹೇಗೆ?

  ಇನ್ನು ಮುಂದಿನ ದಿನಗಳಲ್ಲಿ ಮಾಗಡಿ, ಕನಕಪುರ, ರಾಮನಗರ ಹಾಗೂ ಬಿಡದಿ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸರು, ಪತ್ರಕರ್ತರು, ವೈದ್ಯರು, ನಗರಸಭೆ ಸಿಬ್ಬಂದಿಗೂ ಆ್ಯಪಲ್ ಜ್ಯೂಸ್ ಬಾಟಲ್ ಗಳನ್ನ ವಿತರಣೆ ಮಾಡ್ತೇವೆಂದು ತಿಳಿಸಿದರು.

  ವರದಿ: ಎ.ಟಿ. ವೆಂಕಟೇಶ್

  First published: