HOME » NEWS » Coronavirus-latest-news » APEX COURT SETS UP 12 MEMBER NATIONAL TASK FORCE FOR OXYGEN DISTRIBUTION TO STATES RHHSN

Covid-19: ರಾಜ್ಯಗಳಿಗೆ ಆಕ್ಸಿಜನ್ ಹಂಚಿಕೆಗೆ ಡಾ.ದೇವಿಪ್ರಸಾದ್ ಶೆಟ್ಟಿ ಸೇರಿ 12 ಜನ ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್

ಕೋವಿಡ್-19 ಸಂಬಂಧ ಸಾರ್ವಜನಿಕರ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ, ತಮ್ಮ ಕ್ಷೇತ್ರದ ವಿಫುಲ ಜ್ಞಾನದಿಂದ ಉತ್ತರಿಸುವ ಸೌಲಭ್ಯ ಮತ್ತು ಜವಾಬ್ದಾರಿಯನ್ನು ಈ ಕಾರ್ಯಪಡೆಗೆ ನೀಡಲಾಗಿದೆ. ಮತ್ತು ತನ್ನದೇ ಆದ ವಿಧಾನಗಳು ಮತ್ತು ಕಾರ್ಯನಿರ್ವಹಣೆಯ ವಿಧಾನವನ್ನು ರೂಪಿಸಲು ಈ  ಕಾರ್ಯಪಡೆಗೆ ಸ್ವಾತಂತ್ರ್ಯವಿದೆ.

news18-kannada
Updated:May 8, 2021, 7:20 PM IST
Covid-19: ರಾಜ್ಯಗಳಿಗೆ ಆಕ್ಸಿಜನ್ ಹಂಚಿಕೆಗೆ ಡಾ.ದೇವಿಪ್ರಸಾದ್ ಶೆಟ್ಟಿ ಸೇರಿ 12 ಜನ ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂಕೋರ್ಟ್
ಸುಪ್ರೀಂ ಕೋರ್ಟ್​.
 • Share this:
ನವದೆಹಲಿ: ದೇಶಾದ್ಯಂತ ರಾಜ್ಯಗಳಿಗೆ ಆಮ್ಲಜನಕದ ಹಂಚಿಕೆಯನ್ನು ಸುಗಮಗೊಳಿಸಲು ಸುಪ್ರೀಂಕೋರ್ಟ್ ಶನಿವಾರ ರಾಷ್ಟ್ರೀಯ ಕಾರ್ಯಪಡೆ (ಎನ್‌ಟಿಎಫ್) ಅನ್ನು ನೇಮಕಗೊಳಿದೆ. ದೇಶಾದ್ಯಾಂತ ಕೊರೋನಾ ವೈರಸ್ ಎರಡನೇ ಅಲೆ ರುದ್ರನರ್ತನ ಮುಂದುವರೆದು, ಆಕ್ಸಿಜನ್ ಬಿಕ್ಕಟ್ಟು ಸೃಷ್ಟಿಯಾಗಿರುವ ನಡುವೆ ಈ ಬೆಳೆವಣಿಗೆ ನಡೆದಿದೆ. ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೆಚ್ಚಾಗುತ್ತಿರುವ ಕಾರಣ ಸೋಂಕಿತರಿಗೆ ಆಕ್ಸಿಜನ್ ಅಭಾವ ತಲೆದೋರಿದೆ. ಹೀಗಾಗಿ ಕೇಂದ್ರದಿಂದ ಸಮರ್ಪಕವಾಗಿ ವೈದ್ಯಕೀಯ ಆಕ್ಸಿಜನ್ ಪೂರೈಕೆಯಾಗದ ಸಂಬಂಧ ಹಲವಾರು ರಾಜ್ಯಗಳು ದೂರು ನೀಡಿವೆ. ಹಲವಾರು ರಾಜ್ಯಗಳಲ್ಲಿ ಆಕ್ಸಿಜನ್ ಅಭಾವದಿಂದ ಸಾಕಷ್ಟು ಸಾವುಗಳು ಸಂಭವಿಸಿರುವ ಬಗ್ಗೆ ವರದಿಯಾಗಿವೆ.

"ಆಮ್ಲಜನಕದ ಹಂಚಿಕೆ ಮತ್ತು ವಿತರಣೆಯು ತರ್ಕಬದ್ಧ ಮತ್ತು ಸಮನಾದ ಆಧಾರದ ಮೇಲೆ ನಡೆಯುತ್ತದೆ ಎಂದು ಖಚಿತಪಡಿಸಿಕೊಳ್ಳಲು, ತಜ್ಞರ ರಾಷ್ಟ್ರೀಯ ಕಾರ್ಯಪಡೆಯೊಂದನ್ನು ರಚಿಸುವುದು ಅವಶ್ಯಕವಾಗಿದೆ. ಈ ಕಾರ್ಯಪಡೆ ರಾಜ್ಯಗಳು, ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಮ್ಲಜನಕದ ಹಂಚಿಕೆ ಮತ್ತು ವಿತರಣೆಯ ವಿಧಾನವನ್ನು ನಿರ್ಧರಿಸುತ್ತದೆ," ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಹಾಗೆಯೇ, "ಸಣ್ಣ ತಜ್ಞರ ಸಮಿತಿಗಳು ಅಥವಾ ಉಪ-ಗುಂಪುಗಳು ಪ್ರತಿ ರಾಜ್ಯ, ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರಬರಾಜುಗಳನ್ನು ವಿತರಿಸುವ ಮತ್ತು ಬಳಸಿಕೊಳ್ಳುವ ವಿಧಾನವನ್ನು ಲೆಕ್ಕಪರಿಶೋಧನೆಯ ಸಮಸ್ಯೆಗಳನ್ನು ಪರಿಶೀಲಿಸಬಹುದು" ಎಂದು ಸೂಚಿಸಿದೆ.

ಸುಪ್ರೀಂ ಕೋರ್ಟ್ ರಚಿಸಿರುವ 12 ಸದಸ್ಯರ ಕಾರ್ಯಪಡೆಯು ಅಗತ್ಯ ಔಷಧಗಳು ಮತ್ತು ಲಸಿಕೆಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಪರಿಶೀಲಿಸುತ್ತದೆ ಮತ್ತು ಸಲಹೆ ನೀಡುತ್ತದೆ. ಭವಿಷ್ಯದ ತುರ್ತು ಪರಿಸ್ಥಿತಿಗಳಿಗೆ ಸಿದ್ಧತೆ ಬಗ್ಗೆಯೂ ಪರಿಹಾರ ಕ್ರಮಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳಿಗೆ ಈ ಕಾರ್ಯಪಡೆ ಸಹಾಯ ಮಾಡುತ್ತದೆ.


ಇದನ್ನು ಓದಿ: 2 DG Drug: ಡಿಆರ್​ಡಿಒ ಅಭಿವೃದ್ಧಿಪಡಿಸಿದ ಆ್ಯಂಟಿ ಕೋವಿಡ್ ಔಷಧಕ್ಕೆ ಅನುಮೋದನೆ ನೀಡಿದ ಡಿಸಿಜಿಐ

ಕೋವಿಡ್-19 ಸಂಬಂಧ ಸಾರ್ವಜನಿಕರ ಪ್ರಶ್ನೆಗಳಿಗೆ ವೈಜ್ಞಾನಿಕವಾಗಿ, ತಮ್ಮ ಕ್ಷೇತ್ರದ ವಿಫುಲ ಜ್ಞಾನದಿಂದ ಉತ್ತರಿಸುವ ಸೌಲಭ್ಯ ಮತ್ತು ಜವಾಬ್ದಾರಿಯನ್ನು ಈ ಕಾರ್ಯಪಡೆಗೆ ನೀಡಲಾಗಿದೆ. ಮತ್ತು ತನ್ನದೇ ಆದ ವಿಧಾನಗಳು ಮತ್ತು ಕಾರ್ಯನಿರ್ವಹಣೆಯ ವಿಧಾನವನ್ನು ರೂಪಿಸಲು ಈ  ಕಾರ್ಯಪಡೆಗೆ ಸ್ವಾತಂತ್ರ್ಯವಿದೆ.

 • ಡಾ.ಭಬತೋಷ್ ಬಿಸ್ವಾಸ್; ಕೋಲ್ಕತ್ತಾದ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ
 • ಡಾ.ದೇವೇಂದರ್ ಸಿಂಗ್ ರಾಣಾ, ಅಧ್ಯಕ್ಷರು, ಸರ್ ಗಂಗಾ ರಾಮ್ ಆಸ್ಪತ್ರೆ ಆಡಳಿತ ಮಂಡಳಿ, ದೆಹಲಿ

 • ಡಾ.ದೇವಿ ಪ್ರಸಾದ್ ಶೆಟ್ಟಿ, ನಾರಾಯಣ ಹೆಲ್ತ್‌ಕೇರ್‌ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ, ಬೆಂಗಳೂರು

 •  ಡಾ.ಗಗನ್‌ದೀಪ್ ಕಾಂಗ್, ಪ್ರೊಫೆಸರ್, ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ವೆಲ್ಲೂರು, ತಮಿಳುನಾಡು.

 • ಡಾ.ಜೆ.ವಿ.ಪೀಟರ್, ತಮಿಳುನಾಡಿನ ವೆಲ್ಲೂರು, ಕ್ರಿಶ್ಚಿಯನ್ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ

 • ಡಾ.ನರೇಶ್ ಟ್ರೆಹನ್, ಮೆಡಂತ ಆಸ್ಪತ್ರೆ ಮತ್ತು ಹೃದಯ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ, ಗುರುಗ್ರಾಮ್

 • ಡಾ. ರಾಹುಲ್ ಪಂಡಿತ್, ನಿರ್ದೇಶಕರು, ಕ್ರಿಟಿಕಲ್ ಕೇರ್ ಮೆಡಿಸನ್ ಆ್ಯಂಡ್ ಐಸಿಯೂ, ಫೋರ್ಟಿಸ್ ಆಸ್ಪತ್ರೆ, ಮುಲುಂಡ್, ಮುಂಬೈ

 • ಡಾ. ಸೌಮಿತ್ರ ರಾವತ್, ಸರ್ ಗಂಗರಾಮ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮುಖ್ಯಸ್ಥರು ಮತ್ತು ಅಧ್ಯಕ್ಷರು.

 • ಡಾ ಶಿವಕುಮಾರ್ ಸರಿನ್, ಹಿರಿಯ ಪ್ರಾಧ್ಯಾಪಕರು ಮತ್ತು ಹೆಪಟಾಲಜಿ ವಿಭಾಗದ ಮುಖ್ಯಸ್ಥ, ನಿರ್ದೇಶಕ, ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸ್ (ಐಎಲ್​ಬಿಎಸ್​), ದೆಹಲಿ

 • ಡಾ. ಝರೀರ್ ಎಫ್​ ಉದ್ವಾಡಿಯಾ, ಸಲಹೆಗಾರ ಎದೆ ವೈದ್ಯ, ಹಿಂದೂಜಾ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಆಸ್ಪತ್ರೆ ಮತ್ತು ಪಾರ್ಸಿ ಜನರಲ್ ಆಸ್ಪತ್ರೆ, ಮುಂಬೈ.

 • ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಸಚಿವಾಲಯದ ಕಾರ್ಯದರ್ಶಿ

 • ಕೇಂದ್ರದ ಕ್ಯಾಬಿನೆಟ್ ಕಾರ್ಯದರ್ಶಿಯೂ ರಾಷ್ಟ್ರೀಯ ಕಾರ್ಯಪಡೆಯ ಕನ್ವಿನರ್ ಆಗಿರುತ್ತಾರೆ


Youtube Video

ಸಮಾಲೋಚನೆ ಮತ್ತು ಮಾಹಿತಿಗಾಗಿ ಕೇಂದ್ರ ಸರ್ಕಾರದ ಎನ್‌ಟಿಎಫ್ ಈ ಕೆಳಗಿನ ಅಧಿಕಾರಿಗಳು ಸಹ ಇರಲಿದ್ದಾರೆ.

 • ನೀತಿ ಆಯೋಗದ ಸದಸ್ಯರು, ಉಪಾಧ್ಯಕ್ಷರಿಂದ ನಾಮನಿರ್ದೇಶನ

 • ಕಾರ್ಯದರ್ಶಿ, ಮಾನವ ಹಕ್ಕುಗಳ ಆಯೋಗ

 • ಕಾರ್ಯದರ್ಶಿ, ಕೈಗಾರಿಕೆ ಉತ್ತೇಜನ ಮತ್ತು ಆಂತರಿಕ ವ್ಯವಹಾರ

 • ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ

 • ನಿರ್ದೇಶಕರು ಏಮ್ಸ್, ದೆಹಲಿ

 • ಆರೋಗ್ಯ ಸೇವೆಯ ಪ್ರಧಾನ ನಿರ್ದೇಶಕರು

 • ರಾಷ್ಟ್ರೀಯ ಮಾಹಿತಿ ಕೇಂದ್ರದ ನಿರ್ದೇಶಕರು

 • ಸಿ- ಡಿಎಸಿ ಮುಖ್ಯಸ್ಥರು

Published by: HR Ramesh
First published: May 8, 2021, 7:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories