ಕೊರೋನಾ ನಿಯಂತ್ರಣಕ್ಕೆ 2.5 ಲಕ್ಷ ಸ್ವಯಂ ಸೇವಕರಿಂದ ಡೋರ್​​ ಟು ಡೋರ್​​ ಕ್ಯಾಂಪೇನ್​​ ; ಆಂಧ್ರ ಸಿಎಂ ಜಗನ್​​

ಜತೆಗೆ ಮನೆ-ಮನೆಗಳಿಗೆ ತೆರಳಿ ಕ್ಯಾಂಪೇನ್​​ ಮಾಡುತ್ತಿರುವ ಸ್ವಯಂ ಸೇವಕರಿಗೂ ಸರ್ಕಾರದ ಪರವಾಗಿ ಸಿಎಂ ಜಗನ್​​ ಧನ್ಯವಾದ ತಿಳಿಸಿದರು. ತಮ್ಮ ಪ್ರಾಣವನ್ನು ಲೆಕ್ಕಿಸದೇ ಈ ಕಾರ್ಯ ಕೈಗೊಂಡ ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಜಗನ್​ ಮೋಹನ್​ ರೆಡ್ಡಿ

ಜಗನ್​ ಮೋಹನ್​ ರೆಡ್ಡಿ

 • Share this:
  ಅಮರಾವತಿ(ಮಾ.25): ಆಂಧ್ರಪ್ರದೇಶದಲ್ಲಿ ಕೊರೋನಾ ವೈರಸ್​​ ಸೋಂಕು ನಿಯಂತ್ರಣಕ್ಕೆ 2.5 ಲಕ್ಷ ಸ್ವಯಂ ಸೇವಕರಿಂದ ಮನೆ–ಮನೆಗಳಿಗೆ ತೆರಳಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಿಎಂ ಜಗನ್​​ ಮೋಹನ್​​ ರೆಡ್ಡಿ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಜಗನ್​​ ಮೋಹನ್​​ ರೆಡ್ಡಿ, ಕೇಂದ್ರ ಸರ್ಕಾರದ ಮಾಹಿತಿ ನೀಡಿದಂತೆ ವಿದೇಶದಿಂದ ಬಂದ 10 ಸಾವಿರ ಜನ ಪತ್ತೆ ಹಚ್ಚಲು ರಾಜ್ಯದಲ್ಲಿ ಕ್ಯಾಂಪೇನ್​​ ಮಾಡಲಾಗಿತ್ತು. ಈ ಕ್ಯಾಂಪೇನ್​​ನಲ್ಲಿ ನಾವು ಯಶಸ್ವಿ ಕೂಡ ಆಗಿದ್ದೆವು. ಆದರೀಗ, ಒಂದೆಜ್ಜೆ ಮುಂದೋಗಿ ಡೋರ್​​ ಟು ಡೋರ್​​ ಕ್ಯಾಂಪೇನ್​​ ಮಾಡಲು ಆದೇಶಿಸಿಲಾಗಿದೆ ಎಂದರು.

  ಮೊದಲ ಬಾರಿ ಕ್ಯಾಂಪೇನ್​​ ಮಾಡಿದಾಗ ಕೇವಲ ವಿದೇಶದಿಂದ ಬಂದವರನ್ನು ಪತ್ತೆ ಹಚ್ಚುವ ಕೆಲಸ ಮಾಡಿದ್ದೆವು. ಆದರೀಗ ಮಾಡುವ ಡೋರ್​​ ಟು ಡೋರ್​ ಕ್ಯಾಂಪೇನ್​​ನಲ್ಲಿ ಇಡೀ ರಾಜ್ಯದ ಜನತೆಯನ್ನು ಯಾರನ್ನು ಬಿಡದೇ ಆರೋಗ್ಯ ತಪಾಸಣೆ ಮಾಡಲಾಗುವುದು. ಈ ಕ್ಯಾಂಪೇನ್​​ನ​​ ಸರ್ವೇ ಆಧಾರದ ಮೇಲೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಂಡು ಜಾರಿಗೊಳಿಸಲಾಗುವುದು. ಈ ಮೂಲಕ ಕೊರೋನಾ ವಿರುದ್ಧ ಹೋರಾಟ ಮಾಡಲಾಗುವುದು ಎಂದರು ಜಗನ್​​.

  ಗುರುವಾರ(ಮಾ.26) ಈ ಕ್ಯಾಂಪೇನ್​​ಗೆ ಡೆಡ್​ಲೈನ್​​ ನೀಡಲಾಗಿದೆ. ನಾಳೆಯೊಳಗೆ ಎಷ್ಟೇ ಕಷ್ಟವಾದರೂ ಪರ್ವಾಗಿಲ್ಲ ಡೋರ್​​ ಟು ಡೋರ್​​ ಕ್ಯಾಂಪೇನ್​​ ಮೂಲಕ ಸರ್ವೇ ಮಾಡಲೇಬೇಕು. ಕಳೆದ ವಾರವೇ ರಾಜ್ಯದ 1,43,91,654 ಮನೆಗಳನ್ನು ಸ್ವಯಂ ಸೇವಕರು ಸ್ಕ್ರೀನಿಂಗ್​ ಮಾಡಿದ್ದಾರೆ. ಈ ವೇಳೆ 10 ಸಾವಿರ ವಿದೇಶದಿಂದ ಪತ್ತೆ ಹಚ್ಚಲಾಗಿದೆ. ಈ ಪೈಕಿ 140 ಮಂದಿಗೆ ಕೊರೋನಾ ವೈರಸ್​​ ಲಕ್ಷಣಗಳು ಕಾಣಸಿಕೊಂಡಿವೆ. ಹಾಗಾಗಿ ಅವರಿಗೆ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಿಎಂ ಜಗನ್​ ಮಾಹಿತಿ ನೀಡಿದರು.

  ಇದನ್ನೂ ಓದಿ: ಕೊರೋನಾ ವೈರಸ್​​ ನಿಯಂತ್ರಣಕ್ಕೆ ಅಗತ್ಯ ಕ್ರಮ: ಕರ್ನಾಟಕ-ಮಹಾರಾಷ್ಟ್ರ ಗಡಿಭಾಗದಲ್ಲಿ ಹೈ ಅಲರ್ಟ್

  ಇನ್ನು, ಜನ ಕೊರೋನಾ ವಿರುದ್ಧ ಹೋರಾಡಲು ಸಹಕರಿಸಬೇಕು. ದಯವಿಟ್ಟು ಎಲ್ಲರೂ ಮನೆಯಿಂದ ಹೊರಬಾರದೇ ಸರ್ಕಾರದ ಆದೇಶ ಪಾಲಿಸಬೇಕು. ತಮ್ಮೊಂದಿಗೆ ಇಡೀ ರಾಜ್ಯವನ್ನು ಕೊರೋನಾದಿಂದ ಪಾರು ಮಾಡಬೇಕು ಎಂದು ಜನರಲ್ಲಿ ಜಗನ್​​ ವಿನಂತಿಸಿದರು.

  ಜತೆಗೆ ಮನೆ-ಮನೆಗಳಿಗೆ ತೆರಳಿ ಕ್ಯಾಂಪೇನ್​​ ಮಾಡುತ್ತಿರುವ ಸ್ವಯಂ ಸೇವಕರಿಗೂ ಸರ್ಕಾರದ ಪರವಾಗಿ ಸಿಎಂ ಜಗನ್​​ ಧನ್ಯವಾದ ತಿಳಿಸಿದರು. ತಮ್ಮ ಪ್ರಾಣವನ್ನು ಲೆಕ್ಕಿಸದೇ ಈ ಕಾರ್ಯ ಕೈಗೊಂಡ ಎಲ್ಲರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

  (ವರದಿ: ಬಾಲಕೃಷ್ಣ)
  First published: