ಎಸ್​​ಎಸ್​​ಎಲ್​ಸಿ ಪರೀಕ್ಷೆ: ರಾಜ್ಯಕ್ಕೆ ಪ್ರಥಮ ಬಂದ ಅನುಷ್​​​ - ಪೋಷಕರಲ್ಲಿ ಮನೆ ಮಾಡಿದ ಸಂಭ್ರಮ

ರಾಜ್ಯದಲ್ಲಿ ಈ ಬಾರಿ ದಕ್ಷಿಣಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದ್ದರೂ, ಅನುಷ್ ಸಾಧನೆಯಿಂದ ಜಿಲ್ಲೆಯ‌ ಕೀರ್ತಿ ಮತ್ತೆ ಬೆಳಗಿದೆ. ಎಲ್ಲಾ ವಿಷಯಗಳಲ್ಲೂ ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಅನುಷ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

news18-kannada
Updated:August 11, 2020, 2:43 PM IST
ಎಸ್​​ಎಸ್​​ಎಲ್​ಸಿ ಪರೀಕ್ಷೆ: ರಾಜ್ಯಕ್ಕೆ ಪ್ರಥಮ ಬಂದ ಅನುಷ್​​​ - ಪೋಷಕರಲ್ಲಿ ಮನೆ ಮಾಡಿದ ಸಂಭ್ರಮ
ಪುತ್ತೂರು ವಿದ್ಯಾರ್ಥಿ ಅನುಷ್
  • Share this:
ಪುತ್ತೂರು(ಆ.11): ಎಸ್​ಎಸ್​​ಎಲ್​​ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿ ಅನುಷ್ ಎ.ಎಲ್ 625 ಅಂಕಗಳಲ್ಲಿ 625 ಅಂಕ ಪಡೆದುಕೊಳ್ಳುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಯ ಈ ಸಾಧನೆಗೆ ಪೋಷಕರು ಹಾಗೂ ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ.

ಮೆಸ್ಕಾಂ ಸಿಬ್ಬಂದಿಯಾಗಿರುವ ಲೋಕೇಶ್ ಹಾಗೂ ಉಷಾ ದಂಪತಿಗಳ ಮಗನಾಗಿರುವ ಅನುಷ್ ಬಾಲ್ಯದಿಂದಲೇ ಓದಿನಲ್ಲಿ ಬಹಳ ಮಂದು. ತನ್ನ ಓದಿನ ಸಾಮರ್ಥ್ಯವನ್ನು ಈ ಬಾರಿ ಎಸ್​ ಎಸ್​ಎಲ್​​ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮವಾಗಿ ಹೊರಹೊಮ್ಮುವ ಮೂಲಕ ತೋರಿಸಿಕೊಟ್ಟಿದ್ದಾನೆ.

ತರಗತಿಯಲ್ಲಿ ಕಲಿತದ್ದನ್ನು ಮನೆಗೆ ಬಂದು ಮತ್ತೆ ಮತ್ತೆ  ಪುನರಾವರ್ತನೆ ಮಾಡಿರುವುದೇ ಈ ಸಾಧನೆಯ‌ ಹಿಂದಿನ ಶಕ್ತಿ ಎನ್ನುವುದು ಅನುಷ್ ನಂಬಿಕೆ. ಅನುಷ್ ಸಾಧನೆಯ ಹಿಂದೆ‌ ಕುಮಾರಸ್ವಾಮಿ  ಶಿಕ್ಷಣ ಸಂಸ್ಥೆಯ ಆಡಳಿತವರ್ಗ‌ ಹಾಗೂ ಶಿಕ್ಷಕ ವೃಂದದ ಶ್ರಮವೂ ಇದೆ.

ರಾಜ್ಯದಲ್ಲಿ ಈ ಬಾರಿ ದಕ್ಷಿಣಕನ್ನಡ ಜಿಲ್ಲೆ 12 ಸ್ಥಾನಕ್ಕೆ ಕುಸಿದಿದ್ದರೂ, ಅನುಷ್ ಸಾಧನೆಯಿಂದ ಜಿಲ್ಲೆಯ‌ ಕೀರ್ತಿ ಮತ್ತೆ ಬೆಳಗಿದೆ. ಎಲ್ಲಾ ವಿಷಯಗಳಲ್ಲೂ ಪೂರ್ಣ ಅಂಕಗಳನ್ನು ಗಳಿಸುವ ಮೂಲಕ ಅನುಷ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ.

ಕೊರೋನಾ ಆತಂಕದ ನಡುವೆ ನಡೆಸಲಾಗಿದ್ದ 2019-20ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರೇ ನಿನ್ನೆ ಫಲಿತಾಂಶ ಬಿಡುಗಡೆ ಮಾಡಿದ್ದು, ಈ ಬಾರಿ ಒಟ್ಟು ಶೇ.71.80 ಫಲಿತಾಂಶ ಬಂದಿದೆ. ಈ ಬಾರಿ ಆರು ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ಟಾಪರ್​ ಆಗಿ ಹೊರಹೊಮ್ಮಿದ್ದಾರೆ.

ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಭ ಪಿಯು ಕಾಲೇಜ್ ಸರ್ಕಾರಿ ಶಾಲೆಯ ಸನ್ನಿಧಿ ಮಹಾಬಲೇಶ್ವರ ಹೆಗ್ಡೆ 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ನಾಗಸಂಧ್ರದ ಸೆಂಟ್ ಮೇರಿಸ್ ಹೈಸ್ಕೂಲ್​ನ ಚಿರಾಯು ಕೆ.ಎಸ್. ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಪೂರ್ಣಪ್ರಜ್ಞಾ ಎಜುಕೇಷನ್ ಸೆಂಟರ್​ನ ನಿಖಿಲೇಶ್ ಎನ್​ ಮರಲಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಹಾವೇರಿ: ಎಸ್​​ಎಸ್​​ಎಲ್​ಸಿ ಪರೀಕ್ಷೆಯಲ್ಲಿ ಶೇ.61 ಬಂದ್ರೂ ಕಡಿಮೆ ಅಂಕ ಎಂದು ಆತ್ಮಹತ್ಯೆ

ಹಾಗೆಯೇ ಮಂಡ್ಯ ಜಿಲ್ಲೆಯ ಮಾರದೇವನಹಳ್ಳಿಯ ಶ್ರೀ ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮೀಡಿಯಂ ಬಾಯ್ಸ್​ ಹೈಸ್ಕೂಲ್​ನ ಧೀರಜ್ ರೆಡ್ಡಿ ಎಂಪಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯಾ ತಾಲೂಕಿನ ಸುಬ್ರಹ್ಮಣ್ಯ ಪೋಸ್ಟ್​ನ ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್​ನ ಅನುಷಾ ಎ.ಎಲ್​ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಹಾಗೂ ಚಿಕ್ಕಮಗಳೂರಿನ ಸೆಂಟ್ ಜೋಸೆಫ್ ಕಾನ್ವೆಂಟ್ ಗರ್ಲ್ಸ್​ ಹೈಸ್ಕೂಲ್​ನ ತನ್ಮಯಿ ಐಪಿ ಅವರು 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
Published by: Ganesh Nachikethu
First published: August 11, 2020, 2:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading