ಕೊರೋನಾ ನಿಯಂತ್ರಣಕ್ಕೆ ಇನ್ನೊಂದು ಔಷಧ; ಪುತ್ತೂರಿನಲ್ಲಿ ಸಿದ್ಧಗೊಂಡಿದೆ ಆಯುಷ್- 64 ಮಾತ್ರೆ

ಕೊರೋನಾದ ವಿವಿಧ ಪ್ರಕಾರದ ವೈರಾಣುಗಳ ವಿರುದ್ಧ ಪ್ರಭಾವಶಾಲಿಯಾಗಿ ಬಳಕೆಯಾಗುತ್ತದೆ ಎನ್ನುವುದನ್ನು ಪ್ರಮಾಣೀಕರಿಸಲಾಗಿದೆ.

ಆಯುಷ್- 64 ಮಾತ್ರೆ

ಆಯುಷ್- 64 ಮಾತ್ರೆ

 • Share this:
  ಪುತ್ತೂರು (ಜೂ. 10): ದೇಶವನ್ನು ಕಾಡುತ್ತಿರುವ ಮಹಾಮಾರಿ ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗಾಗಲೇ ಕೊರೊನಾ ತಡೆಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ಇದರ ಜೊತೆಗೆ ಇನ್ನೂ ಹಲವು ರೀತಿಯ ಔಷಧಿಗಳ ಮೂಲಕ ಕೊರೋನಾ ಸೋಂಕು ಮಟ್ಟ ಹಾಕಲು ಪ್ರಯತ್ನಿಸಲಾಗುತ್ತಿದೆ. ಈ ನಡುವೆ ಆಯುಷ್ ಮಂತ್ರಾಲಯ ಆಯುಷ್-64 ಎನ್ನುವ ಮಾತ್ರೆಯನ್ನೂ ಕೊರೋನಾ ಸೋಂಕಿತರಿಗೆ ನೀಡಲು ತೀರ್ಮಾನಿಸಿದ್ದು, ಈ ಮಾತ್ರೆಗಳು ಇದೀಗ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ದೇಶದೆಲ್ಲೆಡೆ ಕೊರೊನಾ ಸೋಂಕಿತರಿಗಾಗಿ ಲಭ್ಯವಿರುವ ಈ ಮಾತ್ರೆಯನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ತಯಾರಿಸಲಾಗುತ್ತಿದೆ.

  ಕೊರೋನಾ ಸೋಂಕು  ತಡೆಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ದೇಶದಲ್ಲಿ ಕೊರೊನಾ ತಡೆಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ವೇಗ ನೀಡಲಾಗಿದ್ದು, ಲಸಿಕೆಯ ಜೊತೆಗೆ ಮಾತ್ರೆಗಳ ಮೂಲಕವೂ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಕೇಂದ್ರ ಆಯುಷ್ ಮಂತ್ರಾಲಯ ಇದೀಗ ಆಯುಷ್-64 ಎನ್ನುವ ಮಾತ್ರೆಯನ್ನು ಕೊರೋನಾ ಪಾಸಿಟಿವ್ ಸೋಂಕಿತರಿಗೆ ನೀಡಲು ಮುಂದಾಗಿದೆ. ದೇಶದ 9 ಉನ್ನತ ವೈದ್ಯಕೀಯ ಸಂಶೋಧನಾ ಸಂಸ್ಥೆಗಳು ಕೊರೋನಾ ಸೋಂಕು ತಡೆಗೆ ಈ ಮಾತ್ರೆಗಳು ಪರಿಣಾಮಕಾರಿ ಎನ್ನುವ ವರದಿಯನ್ನೂ ನೀಡಿದ್ದು, ಈ ಮಾತ್ರೆಗಳು ಈಗಾಗಲೇ ದೇಶದಾದ್ಯಂತ ಬಳಕೆಗೆ ಸಿಗಲಿದೆ.

  ಇದನ್ನು ಓದಿ: ಸಾಲ ಮಾಡಿಯಾದರೂ ಶುಲ್ಕ ಕಟ್ಟಿ; ಲೋನ್​ ನಾವೇ ಕೊಡಿಸುತ್ತೇವೆ ಎನ್ನುತ್ತಿರುವ ಖಾಸಗಿ ಶಾಲೆ

  ಸೋಂಕಿತರ ಪಾಲಿಗೆ ಪರಿಣಾಮಕಾರಿಯಾಗಿರುವ ಈ ಮಾತ್ರೆಗಳು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ತಯಾರಾಗುತ್ತಿದೆ. ಕಳೆದ 30 ವರ್ಷಗಳಿಂದ ಆಯುರ್ವೇದ ಔಷಧಿಗಳ ತಯಾರಿಯಲ್ಲಿ ನಿರತವಾಗಿರುವ ಎಸ್.ಡಿ.ಪಿ ರೆಮೆಡೀಸ್ ಆ್ಯಂಡ್ ರಿಸರ್ಚ್ ಸೆಂಟರ್ ನಲ್ಲಿ ಈ ಮಾತ್ರೆಗಳು ತಯಾರಾಗುತ್ತಿದೆ. ಸೆಂಟ್ರಲ್ ಕೌನ್ಸಿಲ್ ಆಫ್ ರಿಸರ್ಚ್ ಇನ್ ಆಯುರ್ವೇದ ಸೈನ್ಸ್ ಮತ್ತು ನ್ಯಾಷನಲ್  ರಿಸರ್ಚ್ ಡೆವಲೆಪ್ಮೆಂಟ್ ಕಾರ್ಪೋರೇಷನ್ ಇದರಿಂದ ಪ್ರಮಾಣಿಕರಿಸಲ್ಪಟ್ಟಿರುವ ಈ ಮಾತ್ರೆಯು ಕೋವಿಡ್ ಸೋಂಕಿತನ ಮೇಲೆ ಪರಿಣಾಮಕಾರಿ ಪ್ರಭಾವವನ್ನು ಬೀರುತ್ತದೆ ಎನ್ನುವ ಬಗ್ಗೆ ಹಲವು  ಸಂಶೋಧನಾ ಸಂಸ್ಥೆಗಳು ಪ್ರಯೋಗ ನಡೆಸಿವೆ. ಕೊರೋನಾ ಲಕ್ಷಣಗಳು ಕಂಡು ಬಂದ ರೋಗಿಯನ್ನು ಸೋಂಕಿನಿಂದ ಬೇಗ ಗುಣಮುಖವಾಗುವಂತೆ ಮಾಡುವ, ಆಸ್ಪತ್ರೆಯಿಂದ ಚೇತರಿಸಿಕೊಳ್ಳುವಂತೆ ಮಾಡುವ ಹಾಗೂ ಯಾವುದೇ ಅಡ್ಡಪರಿಣಾಮವಿಲ್ಲದ ಈ ಮಾತ್ರೆ ತನ್ನ ಕೆಲಸ ನಿರ್ವಹಿಸುತ್ತದೆ ಎನ್ನುವ ವರದಿಯನ್ನೂ ಹಲವು ಸಂಶೋಧನಾ ಸಂಸ್ಥೆಗಳು ನೀಡಿದೆ ಎನ್ನುತ್ತಾರೆ ಎಸ್.ಡಿ.ಪಿ ರೆಮೆಡೀಸ್ ಎಂಡ್ ರಿಸರ್ಚ್ ನ ನಿರ್ದೇಶಕರು.

  ಇದನ್ನು ಓದಿ:ಪಾಕಿಸ್ತಾನದಿಂದ ಅಕ್ರಮವಾಗಿ ಬಂದು ಭಟ್ಕಳ ವ್ಯಕ್ತಿಯೊಡನೆ ಸಂಸಾರ; ಮಹಿಳೆ ವಶಕ್ಕೆ ಪಡೆದ ಪೊಲೀಸರು

  ಕಳೆದ 30 ವರ್ಷಗಳಿಂದ ಆಯುರ್ವೇದ ಔಷಧಿಗಳನ್ನು ತಯಾರಿಸಿಕೊಂಡು ಬರುತ್ತಿರುವ ಎಸ್.ಡಿ.ಪಿ ರೆಮಿಡೀಸ್ ಎಂಡ್ ರಿಸರ್ಚ್ ಸೆಂಟರ್ ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ಇಮ್ಯುನಿಟಿ ಹೆಚ್ಚಿಸುವ ಮಾತ್ರೆಗಳನ್ನು ತಯಾರಿಸಿತ್ತು. ಇದನ್ನು  ಕೊರೋನಾ ಫ್ರಂಟ್ ಲೈನ್ ವಾರಿಯರ್ಸ್ ಗೆ ನೀಡುವ ಮೂಲಕ ಕೊರೋನಾ ನಿಯಂತ್ರಣದಲ್ಲಿ ತನ್ನ ಪಾತ್ರವನ್ನು ವಹಿಸಿತ್ತು. ಆಯುಷ್ ಮಂತ್ರಾಲಯದಿಂದ ಪರಿಚಯಿಸಲ್ಪಟ್ಟ ಈ ಮಾತ್ರೆಯ ಸಿದ್ಧತೆ ಇದೇ ಸಂಶೋಧನಾ ಘಟಕದಲ್ಲಿ ನಡೆಯುತ್ತಿದ್ದು, ಆಯುಷ್ ಮಂತ್ರಾಲಯದ ಸಂಶೋಧಕರು ಸೂಚಿಸಿದ ಪ್ರಮಾಣದ ವಸ್ತುಗಳನ್ನು ಹಾಕುವ ಮೂಲಕ ಮಾತ್ರೆಗಳನ್ನು ತಯಾರಿಸಲಾಗುತ್ತಿದೆ.

  ಸುಮಾರು 35 ಬಗೆಯ ಆಯುರ್ವೇದ ಔಷಧೀಯ ವಸ್ತುಗಳನ್ನು ಈ ಮಾತ್ರೆ ತಯಾರಿಸಲು ಬಳಸಲಾಗುತ್ತಿದ್ದು, ಇವುಗಳು ಕೊರೋನಾದ ವಿವಿಧ ಪ್ರಕಾರದ ವೈರಾಣುಗಳ ವಿರುದ್ಧ ಪ್ರಭಾವಶಾಲಿಯಾಗಿ ಬಳಕೆಯಾಗುತ್ತದೆ ಎನ್ನುವುದನ್ನು ಪ್ರಮಾಣೀಕರಿಸಲಾಗಿದೆ. ಕೋವಿಡ್ ನ ಸಾಮಾನ್ಯ ಲಕ್ಷಣ ಹೊಂದಿರುವ ವ್ಯಕ್ತಿ ಅಥವಾ ಎ ಸಿಂಟಮ್ ಹೊಂದಿರುವ ವ್ಯಕ್ತಿಯು ಪಾಸಿಟೀವ್ ವರದಿ ಬಂದ 7 ದಿನಗಳ ಬಳಿಕ ಈ ಮಾತ್ರೆಯನ್ನು ಆಯುರ್ವೇದ ವೈದ್ಯರ ಸೂಚನೆಯ ಮೇರೆಗೆ ಸೇವಿಸಬಹುದಾಗಿದೆ. ಕೊರೊನಾ ದಿಂದ ಶ್ವಾಸಕೋಶದ ಸಮಸ್ಯೆಯು ಹೆಚ್ಚಾಗಿದ್ದು, ಈ ಸಮಸ್ಯೆಯನ್ನೂ ಪರಿಣಾಮಕಾರಿಯಾಗಿ ಗುಣಪಡಿಸುವ ಸಾಮರ್ಥ್ಯವನ್ನೂ ಈ ಮಾತ್ರೆ ಹೊಂದಿದೆ.
  Published by:Seema R
  First published: