Anil Kumble: ಖಾಕಿ ಪಡೆಯ ನೆರವಿಗೆ ನಿಂತ ಅನಿಲ್ ಕುಂಬ್ಳೆ; ಒಂದು ಸಾವಿರ ಸೇಫ್ಟಿ ಕಿಟ್ ವಿತರಣೆ

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ತೆರಳಿದ ಅನಿಲ್ ಕುಂಬ್ಳೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರನ್ನ ಬೇಟಿ ಮಾಡಿ ಕಿಟ್ ಹಸ್ತಾಂತರ ಮಾಡಿದರು.

ಅನಿಲ್ ಕುಂಬ್ಳೆ- ಪೊಲೀಸ್ ಕಮೀಷನರ್ ಭಾಸ್ಕರ್ ರಾವ್

ಅನಿಲ್ ಕುಂಬ್ಳೆ- ಪೊಲೀಸ್ ಕಮೀಷನರ್ ಭಾಸ್ಕರ್ ರಾವ್

  • Share this:
ಬೆಂಗಳೂರು (ಮೇ. 27): ಕೊರೋನಾ ಸೋಂಕು ಹರಡುವಿಕೆ ತಡೆಯಲು ಲಕ್ಷಾಂತರ ಜನ ವಾರಿಯರ್ಸ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ಪೊಲೀಸರು ಸಹ ಹಗಲಿರುಳು ಶ್ರಮಿಸುತ್ತಿದ್ದು ಮನೆ ಮಠ ತೊರೆದು ಸಾರ್ವಜನಿಕರ ಸುರಕ್ಷತೆಗಾಗಿ ಕೆಲಸ ಮಾಡ್ತಿದ್ದಾರೆ. ಅಲ್ಲದೆ ಪೊಲೀಸರಿಗೆ ಸೂಕ್ತ ಸೇಫ್ಟಿ ಕಿಟ್ ಇಲ್ಲದೆ ಇದ್ದರೂ ಕಳೆದ ಎರಡು ತಿಂಗಳಿಂದ ನಗರದ ರಸ್ತೆಗಳಲ್ಲಿ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಪೊಲೀಸರ ಕಾರ್ಯ ನಿರ್ವಹಣೆ ಕಂಡು  ಅನೇಕ ಸಂಘ ಸಂಸ್ಥೆಗಳು ಪೊಲೀಸರಿಗೆ ನೆರವಿನ ಹಸ್ತ ಚಾಚುತ್ತಿದೆ. ಸದ್ಯ ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ ಸಹ ಪೊಲೀಸರ ನೆರವಿಗೆ ಧಾವಿಸಿದ್ದಾರೆ.

T20 World Cup: ಭಾರತದಲ್ಲಿ ನಡೆಯಲಿದೆ ಬಹುನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿ; ಐಸಿಸಿ ಅಂತಿಮ ನಿರ್ಧಾರ?

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ಕೊರೋನಾ ವಾರಿಯರ್ಸ್​ಗೆ ಸಹಾಯಹಸ್ತ ಚಾಚಿದ್ದಾರೆ. ಅನಿಲ್ ಕುಂಬ್ಳೆ ಬೆಂಗಳೂರು ಪೊಲೀಸರಿಗೆ ಒಂದು ಸಾವಿರ ಸೇಫ್ಟಿ ಕಿಟ್ ವಿತರಣೆ ಮಾಡಿ ಖಾಕಿ ಪಡೆಗೆ ನೆರವು ನೀಡಿದ್ದಾರೆ. ಅನಿಲ್ ಕುಂಬ್ಳೆ ಯುವ ಎನ್ ಜಿಒ ಜೊತೆಗೂಡಿ ಸೇಫ್ಟಿ ಕಿಟ್ ಒದಗಿಸಿದ್ದಾರೆ. ಪೊಲೀಸರ ಆರೋಗ್ಯದ ದೃಷ್ಟಿಯಿಂದ ಅಗತ್ಯವಾದ ಕಿಟ್ ಇದಾಗಿದ್ದು, ಕಿಟ್​ನಲ್ಲಿ ಮಾಸ್ಕ್, ಸ್ಯಾನಿಟೈಸರ್, ಸಾಬೂನು, ರೋಗ ನಿರೋಧಕ ಔಷಧಿ ಒಳಗೊಂಡಿದೆ.

ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಛೇರಿಗೆ ತೆರಳಿದ ಅನಿಲ್ ಕುಂಬ್ಳೆ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಅವರನ್ನ ಬೇಟಿ ಮಾಡಿ ಕಿಟ್ ಹಸ್ತಾಂತರ ಮಾಡಿದರು.

‘ದೇಶದ ಕಾನೂನು ಎಲ್ಲರಿಗೂ ಅನ್ವಯ, ದೇವಸ್ಥಾನ, ಮಸೀದಿ, ಚರ್ಚ್​​​ ಎಲ್ಲವೂ ಒಂದೇ‘ - ಬಿಎಸ್​ವೈ

ಲಾಕ್ ಡೌನ್ ಜಾರಿ ವೇಳೆ ಬೆಂಗಳೂರು ನಗರದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದರು. ನಗರದಲ್ಲಿ ಸಾರ್ವಜನಿಕರ ನಿಯಂತ್ರಣ, ವಾಹನಗಳ ತಪಾಸಣೆ, ಸಾರ್ವಜನಿಕರಿಗೆ ಅರಿವು ಮೂಡಿಸುವುದು ಸೇರಿ ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿದ್ದಾರೆ. ಪೊಲೀಸರ ಕಾರ್ಯ ವೈಖರಿಗೆ ಅನಿಲ್ ಕುಂಬ್ಳೆ ಮೆಚ್ಚುಗೆ ವ್ಯಕ್ತಪಡಿಸಿ ಸೇಫ್ಟಿ ಕಿಟ್ ವಿತರಣೆ ಮಾಡಿದ್ದಾರೆ.
First published: