ಆನೇಕಲ್ ಜನರಿಗೂ ಕಾದಿದ್ಯಾ 'ಮಹಾ' ಕಂಟಕ; ಮಹಾಮಾರಿ ಕೊರೋನಾ ಭೀತಿಯಲ್ಲಿ ಜಿಲ್ಲೆಯ ಜನ

ಮುಂಬೈ ಸೋಂಕಿತರಿಂದ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇದರ ನಡುವೆ ಕ್ಯಾಬ್ ಚಾಲಕ  ಮುಂಬೈ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ವಿಚಾರ ಆನೇಕಲ್ ತಾಲ್ಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಮುಂಬೈ ಸೋಂಕಿತರಿಂದ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇದರ ನಡುವೆ ಕ್ಯಾಬ್ ಚಾಲಕ  ಮುಂಬೈ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ವಿಚಾರ ಆನೇಕಲ್ ತಾಲ್ಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಮುಂಬೈ ಸೋಂಕಿತರಿಂದ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇದರ ನಡುವೆ ಕ್ಯಾಬ್ ಚಾಲಕ  ಮುಂಬೈ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ವಿಚಾರ ಆನೇಕಲ್ ತಾಲ್ಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. 

  • Share this:
ಆನೇಕಲ್ :  ರಾಜ್ಯದ ಹಲವು ಜಿಲ್ಲೆಗಳಲ್ಲಿ ಅರ್ಭಟಿಸುತ್ತಿರುವ  ಮಹಾ ಸೋಂಕಿತರ ಕಾಟ ಬೆಂಗಳೂರು ಹೊರವಲಯ ಆನೇಕಲ್ ಜನರಿಗೂ ಕಾದಿದ್ಯಾ....? ಆನೇಕಲ್ ತಾಲ್ಲೂಕಿನ ವ್ಯಕ್ತಿಗೂ ಮುಂಬೈ ಸೋಂಕಿತರಿಗೂ ಲಿಂಕ್ ಇದ್ಯಾ....?ಇಂತಹದೊಂದು ಆತಂಕ ಆನೇಕಲ್ ತಾಲ್ಲೂಕಿನ ಜನರಲ್ಲಿ ಕಾಡುತ್ತಿದೆ.

ಆನೇಕಲ್ ತಾಲ್ಲೂಕಿನ ಹೆನ್ನಾಗರ ಗೇಟ್ ವಾಸಿ ಕ್ಯಾಬ್ ಚಾಲಕ ಮಂಜುನಾಥ್ ಇದೇ ತಿಂಗಳು 16ನೇ ತಾರೀಖು ಮಹಾರಾಷ್ಟ್ರದ ಕೊರೆಗಾವ್ ಮುಂಬೈ ವೆಸ್ಟ್ ನ ಮೂವರು ನಿವಾಸಿಗಳನ್ನು ಕೆ ಆರ್ ಪೇಟೆಗೆ ಕರೆ ತರಲು 9738889260 ಪೋನ್ ನಂಬರಿನ ಮೂಲಕ ಬಾಡಿಗೆ ಮಾತನಾಡಿಕೊಂಡಿದ್ದಾರೆ. ಅಂದೇ ರಾತ್ರಿ 1:30 ಕ್ಕೆ ಕೊರೆಗಾವ್ ಮುಂಬೈ ವೆಸ್ಟ್ ಪ್ರದೇಶದಿಂದ ಮೂರು ಮಂದಿ ಮಹಾರಾಷ್ಟ್ರ ಕನ್ನಡಿಗರನ್ನು ತನ್ನ  KA- 51 ML- 4009 ನಂಬರಿನ ಕಾರಿಗೆ ಹತ್ತಿಸಿಕೊಂಡು ಮಂಡ್ಯದ ಕೆ ಆರ್ ಪೇಟೆಯತ್ತ ಹೊರಟಿದ್ದಾನೆ.

ಅದೇನಾಯ್ತೋ ಕೆ ಆರ್ ಪೇಟೆಗೆ ನೇರವಾಗಿ ಹೋಗುವ ಬದಲು ತಾನು ವಾಸವಿರುವ ಚಂದಾಪುರ ಮನೆಗೆ ಬಂದು ಮೂರು ಮಂದಿಯನ್ನು ಐದಾರು ತಾಸು ಮನೆಯಲ್ಲಿಯೇ ಉಳಿಸಿಕೊಂಡಿದ್ದಾನೆ. ಬಳಿಕ 17 ನೇ ತಾರೀಖು ಸಂಜೆ ವೇಳೆಗೆ ಮಂಡ್ಯದ ಕೆ ಆರ್ ಪೇಟೆಗೆ ಡ್ರಾಪ್ ಮಾಡಿ ಬಾಡಿಗೆ ತೆಗೆದುಕೊಂಡು ವಾಪಸ್ ಆಗಿದ್ದಾನೆ.

ಇತ್ತ ಮನೆಗೆ ಬಂದ ಕ್ಯಾಬ್ ಚಾಲಕ ಓಡಾಡಿಕೊಂಡು ಪತ್ನಿಯೊಂದಿಗೆ ಆರಾಮವಾಗಿ ಇದ್ದ. ಆದ್ರೆ ಇಂದು ವೈದ್ಯಾಧಿಕಾರಿಗಳ ತಂಡ ಮನೆಯ ಬಳಿ ಬಂದು ಮಾಹಿತಿ ಮುಂಬೈ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಇರುವುದಾಗಿ ತಿಳಿಸುತ್ತಿದ್ದಂತೆ ಕಕ್ಕಾ ಬಿಕ್ಕಿಯಾಗಿದ್ದಾನೆ. ಈತ ಕೆ ಆರ್ ಪೇಟೆಗೆ ಮುಂಬೈ ವಾಸಿಗಳನ್ನು ಬಿಟ್ಟು ಬಂದ ಮೂರೇ ದಿನಕ್ಕೆ ಅಂದರೇ 21ನೇ ತಾರೀಖು ಮೂವರಲ್ಲಿಯು ಕೊರೊನಾ ಪಾಸಿಟಿವ್ ದೃಡಪಟ್ಟಿದೆ.

P1555, P1556, P1557 ಟ್ರಾವೆಲ್ ಹಿಸ್ಟರಿ ಹಿಂದೆ ಬಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಆನೇಕಲ್ನ ಚಾಲಕ ಮತ್ತು ಆತನ ಪತ್ನಿ ಮುಂಬೈ ಸೋಂಕಿತರ ಜೊತೆ ಪ್ರಾಥಮಿಕ ಸಂಪರ್ಕ ಇರುವುದು ದೃಡಪಟ್ಟಿದೆ. ಕೂಡಲೇ ಮಂಡ್ಯ ಜಿಲ್ಲಾಡಳಿತ ಬೆಂಗಳೂರು ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂದು ಚಾಲಕ ಮತ್ತು ಆತನ ಪತ್ನಿಯನ್ನು ನಗರದ ಸಿ ವಿ ರಾಮನ್ ಆಸ್ಪತ್ರೆ ಐಸೋಲೇಷನ್ ವಾರ್ಡ್ಗೆ ದಾಖಲಿಸಿ ನಿಗಾ ವಹಿಸಿದ್ದಾರೆ.

ಒಟ್ಟಲ್ಲಿ ಮುಂಬೈ ಸೋಂಕಿತರಿಂದ ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಉಲ್ಬಣಿಸುತ್ತಿದೆ. ಇದರ ನಡುವೆ ಕ್ಯಾಬ್ ಚಾಲಕ  ಮುಂಬೈ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವ ವಿಚಾರ ಆನೇಕಲ್ ತಾಲ್ಲೂಕಿನ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಮುಂಬೈನಿಂದ ವಾಪಸ್ ಆದ ಬಳಿಕ ಸಿಕ್ಕ ಸಿಕ್ಕ ಕಡೆ ಕ್ಯಾಬ್ ಚಾಲಕ ಸುತ್ತಾಡಿದ್ದಾನೆ ಎನ್ನಲಾಗುತ್ತಿದ್ದು, ಕ್ಯಾಬ್ ಚಾಲಕ ವೈದ್ಯಕೀಯ ವರದಿ ನಾಳೆ ಬರುವ ನೀರಿಕ್ಷೆ ಇದ್ದು, ಒಂದು ವೇಳೆ ವರದಿ ನೆಗೆಟಿವ್ ಬಂದರೇ ಆನೇಕಲ್ ತಾಲ್ಲೂಕಿನ ಜನತೆಗೆ ಬಿಗ್ ರಿಲೀಫ್ ಸಿಗಲಿದೆ. ದುರಾದೃಷ್ಟವಶಾತ್ ಪಾಸಿಟಿವ್ ಬಂದರೆ ಆನೇಕಲ್ ಜನತೆಗೆ ಮುಂಬೈ ಸೋಂಕು ಕಾಡುವುದರಲ್ಲಿ ಅನುಮಾನವಿಲ್ಲ.

(ವರದಿ : ಆದೂರು ಚಂದ್ರು)

ಇದನ್ನೂ ಓದಿ : ಕಾರ್ಮಿಕರ ಕೆಲಸದ ಸಮಯವನ್ನ ಹೆಚ್ಚಿಸಿದ ರಾಜ್ಯ ಸರ್ಕಾರ; 8ರ ಬದಲು ಇನ್ನೂ 10 ಗಂಟೆ ಕೆಲಸ ಕಡ್ಡಾಯ
First published: