ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಕೊರೊನಾ ಇದೆ ಎಂದು ತಪ್ಪಾಗಿ ತಿಳಿದು ವ್ಯಕ್ತಿ ಆತ್ಮಹತ್ಯೆ

54 ವರ್ಷದ ವ್ಯಕ್ತಿ ಸತ್ತಿದ್ದು ಕೊರೊನಾ ವೈರಸ್​​ನಿಂದ ಅಲ್ಲ, ಬದಲಾಗಿ ತಪ್ಪು ಗ್ರಹಿಕೆಯಿಂದ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸುತ್ತಿವೆ ಎಂದು ಆತಂಕಗೊಂಡ ಆತ ವೈದ್ಯರ ಬಳಿ ಹೋಗಿದ್ದಾನೆ. ಆಗ ವೈದ್ಯರು ಆತನನ್ನು ಪರೀಕ್ಷಿಸಿ ಕೊರೊನಾ ಸೋಂಕು ಇಲ್ಲ ಎಂದೂ ಹೇಳಿದ್ದಾರೆ.

news18-kannada
Updated:February 12, 2020, 1:30 PM IST
ಮಾಸ್ಕ್ ಹಾಕಿಕೊಳ್ಳಿ ಎಂದಿದ್ದಕ್ಕೆ ಕೊರೊನಾ ಇದೆ ಎಂದು ತಪ್ಪಾಗಿ ತಿಳಿದು ವ್ಯಕ್ತಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಆಂಧ್ರಪ್ರದೇಶ(ಫೆ.12): ಚೀನಾದಲ್ಲಿ ಹರಡುತ್ತಿರುವ ಮಾರಕ ಕಾಯಿಲೆ ಕೊರೊನಾ ಬೇರೆ ದೇಶಗಳಿಗೂ ವ್ಯಾಪಿಸುವ ಆತಂಕ ಹೆಚ್ಚಾಗಿದೆ. ಈಗಾಗಲೇ ಚೀನಾದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಅಸುನೀಗಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯು ಈ ಕೊರೊನಾ ವೈರಸ್​ಗೆ ಕೋವಿಡ್​-19 ಎಂದು ಹೆಸರಿಟ್ಟಿದ್ದು, ಈ ಮಾರಕ ರೋಗದ ಬಗ್ಗೆ ಎಚ್ಚರಿಕೆ ನೀಡಿದೆ.

ಭಾರತಕ್ಕೂ ಕಾಲಿಟ್ಟಿರುವ ಈ ಕೊರೊನಾ ಜನರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಕೇರಳದ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಜನರು ಜಾಗರೂಕವಾಗಿರುವಂತೆ ಎಚ್ಚರಿಕೆ ನೀಡಲಾಗಿದೆ.

ಆಂಧ್ರ ಪ್ರದೇಶದಲ್ಲಿ ಕೊರೊನಾ ತಗುಲದ ವ್ಯಕ್ತಿಯೊಬ್ಬ ಸೋಂಕು ಇದೆಯೆಂದು ಭಾವಿಸಿ, ತನ್ನ ಹಳ್ಳಿಯ ಜನರಿಗೆ ಈ ರೋಗ ಹರಡಿ ಬಿಡುತ್ತದೆ ಎಂಬ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವಿಚಿತ್ರ ಘಟನೆ ಚಿತ್ತೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

ಕೊರೊನಾ ವೈರಸ್: ಚಿಂತೆಗೊಂಡ ಭಾರತದ ಸ್ಮಾರ್ಟ್​ಫೋನ್ ಉದ್ಯಮ; ಅತಂತ್ರಗೊಂಡ ಹಡಗುಗಳು

54 ವರ್ಷದ ವ್ಯಕ್ತಿ ಸತ್ತಿದ್ದು ಕೊರೊನಾ ವೈರಸ್​​ನಿಂದ ಅಲ್ಲ, ಬದಲಾಗಿ ತಪ್ಪು ಗ್ರಹಿಕೆಯಿಂದ. ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸುತ್ತಿವೆ ಎಂದು ಆತಂಕಗೊಂಡ ಆತ ವೈದ್ಯರ ಬಳಿ ಹೋಗಿದ್ದಾನೆ. ಆಗ ವೈದ್ಯರು ಆತನನ್ನು ಪರೀಕ್ಷಿಸಿ ಕೊರೊನಾ ಸೋಂಕು ಇಲ್ಲ ಎಂದೂ ಹೇಳಿದ್ದಾರೆ.

ಆದರೆ ಆತ ನನಗೆ ಕೊರೊನಾ ಇದೆಯೆಂದು ನನ್ನ ಬಳಿ ಯಾರೂ ಸಹ ಬರುತ್ತಿಲ್ಲ. ಅವರಿಗೂ ಹರಡುತ್ತದೆಂಬ ಭಯದಿಂದ ಎಲ್ಲರೂ ದೂರ ಹೋಗುತ್ತಾರೆ ಎಂದು ವೈದ್ಯರ ಬಳಿ ಹೇಳಿದ್ದಾನೆ. ಆಗ ವೈದ್ಯರು ಆ ವ್ಯಕ್ತಿಗೆ ಮಾಸ್ಕ್​ ಹಾಕಿಕೊಂಡು ತಿರುಗಾಡುವಂತೆ ಸಲಹೆ ನೀಡಿದ್ದಾರೆ. ಇದರಿಂದ ನಿಮಗೆ ಬೇರೆ ಯಾವುದೇ ಸೋಂಕು ಹರಡುವುದಿಲ್ಲ ಎಂದು ಸಹ ಹೇಳಿದ್ದಾರೆ. ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಆತ ತನಗೆ ಕೊರೊನಾ ಇದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊರೊನಾ ವೈರಸ್​ಗೆ ಕೋವಿಡ್​​-19 ಎಂದು ಅಧಿಕೃತವಾಗಿ ಹೆಸರಿಟ್ಟ ವಿಶ್ವ ಆರೋಗ್ಯ ಸಂಸ್ಥೆ
First published:February 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading