• ಹೋಂ
  • »
  • ನ್ಯೂಸ್
  • »
  • Corona
  • »
  • Anant Ambani: ಉತ್ತರಾಖಂಡ್ ಸರ್ಕಾರಕ್ಕೆ 5 ಕೋಟಿ ರೂ. ದೇಣಿಗೆ ನೀಡಿದ ಅನಂತ್ ಅಂಬಾನಿ

Anant Ambani: ಉತ್ತರಾಖಂಡ್ ಸರ್ಕಾರಕ್ಕೆ 5 ಕೋಟಿ ರೂ. ದೇಣಿಗೆ ನೀಡಿದ ಅನಂತ್ ಅಂಬಾನಿ

ಫೈಲ್​ ಫೋಟೋ

ಫೈಲ್​ ಫೋಟೋ

ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಉತ್ತರಾಖಂಡ್​ ಮುಖ್ಯಮಂತ್ರಿ ತೀರ್ಥ ಸಿಂಗ್​ ರಾವತ್​ ಅವರಿಗೆ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್​ ಅಂಬಾನಿ ಅವರ ಪುತ್ರ ಅನಂತ್​​ ಅಂಬಾನಿ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ.

  • Share this:

ಡೆಹರಾಡೂನ್​​:  ಕೊರೊನಾ 2ನೇ ಅಲೆಯಿಂದ ಭಾರತ ವಿಷಮಸ್ಥಿತಿಯನ್ನು ಎದುರಿಸುತ್ತಿದೆ. ಕೊರೋನಾ ವಿರುದ್ಧದ ಭಾರತದ ಯುದ್ಧದಲ್ಲಿ ಅನೇಕ ಸಂಸ್ಥೆಗಳು ಕೈ ಜೋಡಿಸಿವೆ. ದೇಶದ ದೈತ್ಯ ಸಂಸ್ಥೆ ರಿಯಲನ್ಸ್​​ ಇದರಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್​ ಕೇರ್​ ಸೆಂಟರ್​ ನಿರ್ಮಾಣ, ವಿದೇಶಿ ತಂತ್ರಜ್ಞಾನ ಆಮದು, ತನ್ನ ಸಂಸ್ಥೆಯ ಎಲ್ಲಾ ನೌಕರರಿಗೂ ಹಾಗೂ ಅವರ ಕುಟುಂಬಸ್ಥರಿಗೆ ಉಚಿತವಾಗಿ ಲಸಿಕೆ ನೀಡುವ ಸೇರಿದಂತೆ ಹಲವು ವಿಧಗಳಲ್ಲಿ ರಿಲಯನ್ಸ್​​ ನೆರವಾಗುತ್ತಿದೆ. ಈಗ ಉತ್ತರಾಖಂಡ್​ ರಾಜ್ಯ ಸರ್ಕಾರಕ್ಕೆ ಬರೋಬ್ಬರಿ 5 ಕೋಟಿ ರೂ. ದೇಣಿಗೆ ನೀಡುವ ಮೂಲಕ ಅನಂತ್​​​​ ಅಂಬಾನಿ ಮಾದರಿಯಾಗಿದೆ. ಕೋವಿಡ್​ ಪರಿಸ್ಥಿತಿಯನ್ನು ನಿರ್ವಹಿಸಲು ಉತ್ತರಾಖಂಡ್​ ವಿಪತ್ತು ನಿರ್ವಹಣಾ ನಿಗಮಕ್ಕೆ ರಿಲಯನ್ಸ್​ 5 ಕೋಟಿ ರೂ. ದೇಣಿಗೆ ನೀಡಿದೆ.


ಕೊರೋನಾ ವಿರುದ್ಧದ ಯುದ್ಧದಲ್ಲಿ ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಉತ್ತರಾಖಂಡ್​ ಮುಖ್ಯಮಂತ್ರಿ ತೀರ್ಥ ಸಿಂಗ್​ ರಾವತ್​ ಅವರಿಗೆ ರಿಲಯನ್ಸ್​ ಸಂಸ್ಥೆಯ ಮುಖ್ಯಸ್ಥರಾದ ಮುಕೇಶ್​ ಅಂಬಾನಿ ಅವರ ಪುತ್ರ ಅನಂತ್​​ ಅಂಬಾನಿ ಅಧಿಕೃತ ಪತ್ರದ ಮೂಲಕ ತಿಳಿಸಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ದೇಶದ ಜನರಿಗೆ ನೆರವಾಗಲು ರಿಲಯನ್ಸ್​ ಸಂಸ್ಥೆ ನಿರಂತರವಾಗಿ ಶ್ರಮಿಸುತ್ತಿದೆ. ಕೋವಿಡ್​​ ಪರಿಸ್ಥಿತಿಯಲ್ಲಿ ತನ್ನ ರಾಜ್ಯ ಜನತೆಗೆ ಉತ್ತಾರಾಖಂಡ್​ ಸರ್ಕಾರ ಕೈಗೊಂಡಿರುವ ಕಾರ್ಯಗಳನ್ನು ಶ್ಲಾಘಿಸುತ್ತೇವೆ. ನಿಮ್ಮ ಈ ಕೊರೋನಾ ಹೋರಾಟಕ್ಕೆ ನಾವು ಕೈಜೋಡಿಸಲು ಇಚ್ಛಿಸುತ್ತೇವೆ. ಹೀಗಾಗಿ ಉತ್ತರಾಖಂಡ್​ ರಾಜ್ಯ ವಿಪತ್ತು ನಿರ್ವಹಣಾ ನಿಗಮಕ್ಕೆ 5 ಕೋಟಿ ರೂ. ದೇಣಿಗೆ ನೀಡುತ್ತಿದ್ದೇವೆ. ನಾವೆಲ್ಲಾ ಒಗ್ಗಟ್ಟಿನಿಂದ ಕೊರೋನಾ ವಿರುದ್ಧ ಹೋರಾಡೋಣ ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಈವರೆಗೆ ರಿಲಯನ್ಸ್​ ಸಂಸ್ಥೆ ಮೂಲಕ ಮುಕೇಶ್​ ಅಂಬಾನಿ ಹಾಗೂ ಅವರ ಪತ್ನಿ ನೀತಾ ಅಂಬಾನಿ ನೆರವನ್ನು ನೀಡುತ್ತಿದ್ದರು. ಈಗ ಅವರ ಪುತ್ರ ಅನಂತ್​​ ಅಂಬಾನಿ ಸಹ ಕೈ ಜೋಡಿಸಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ನಮ್ಮ ಇಡೀ ಕುಟುಂಬ ಕೋವಿಡ್​ ನೆರವಿಗೆ ನಿಂತಿದೆ ಎಂದು ನೀತಾ ಅಂಬಾನಿ ತಿಳಿಸಿದ್ದರು. ಕೋವಿಡ್​​ ಪರಿಸ್ಥಿತಿ ವೇಳೆ ರಿಲಯನ್ಸ್​ ಸಂಸ್ಥೆ ನೆರವಾಗುತ್ತಿರುವ ರೀತಿಗೆ ಸುಪ್ರೀಂ ಕೋರ್ಟ್​​ನಲ್ಲೂ ಮೆಚ್ಚುಗೆ ವ್ಯಕ್ತವಾಗಿತ್ತು. ಇನ್ನು ರಿಲಯನ್ಸ್​ ಸಂಸ್ಥೆ ಜೆಮ್​ಶೆಡ್​ಪುರದಲ್ಲಿ ನೂರಾರು ಆಕ್ಸಿಜನ್​ ಬೆಡ್​ಗಳಿರುವ ಕೋವಿಡ್​ ಕೇರ್​ ಸೆಂಟರ್​  ನಿರ್ಮಿಸಿ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನು ದೇಶಾದ್ಯಂತ ತನ್ನ ಸಂಸ್ಥೆಯ ಎಲ್ಲಾ ನೌಕರರು ಹಾಗೂ ಅವರ ಕುಟುಂಬಸ್ಥದ ಎಲ್ಲಾ ಸದಸ್ಯರಿಗೂ ಉಚಿತವಾಗಿ ಲಸಿಕೆ ನೀಡುತ್ತಿದೆ.

Published by:Kavya V
First published: