ನೆಲ್ಲೂರು: ಕೊರೊನಾ ವಿರುದ್ಧ ಆನಂದಯ್ಯ ಅವರ ಗಿಡಮೂಲಿಕೆಗಳ ಔಷಧ ಪರಿಣಾಮಕಾರಿಯಾಗಿದೆ ಎಂದು ಆಂಧ್ರ ಸರ್ಕಾರ ಅನುಮತಿ ನೀಡುತ್ತಿದಂತೆ ಔಷಧ ವಿತರಣೆ ಶುರುವಾಗಿದೆ. ಜಿಲ್ಲೆಯ ಗೊಲಗಮುಡಿಯಲ್ಲಿ ಆನಂದಯ್ಯ ಔಷಧ ವಿತರಣೆ ಶುರುವಾಗಿದೆ. ಇಲ್ಲಿನ ವೆಂಕಯ್ಯ ಸ್ವಾಮಿ ಆಶ್ರಮದಲ್ಲಿ ಔಷಧ ವಿತರಿಸಲಾಗುತ್ತಿದ್ದ, ಔಷಧಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಜನಕ್ಕೆ ಮೊದಲು ಔಷಧ ಲಭ್ಯವಾಗಲಿದೆ. ಅಧಿಕಾರಿಗಳಿಂದ ಅನುಮತಿ ಪಡೆದ ಕೂಡಲೇ ರಾಜ್ಯದ ಇತರೆ ಜಿಲ್ಲೆಗಳಲ್ಲಿ ಆನಂದಯ್ಯ ಕೊರೊನಾ ಔಷಧಿ ವಿತರಣೆ ಆಗಲಿದೆ. ಇನ್ನು ಈ ಔಷಧವನ್ನು ಆನಂದಯ್ಯ ಉಚಿತವಾಗಿ ಆಂಧ್ರದ ಜನಕ್ಕೆ ನೀಡಲು ಮುಂದಾಗಿದ್ದಾರೆ.
ರಾಜ್ಯಾದ್ಯಂತ ಜನಕ್ಕೆ ಉಚಿತವಾಗಿ ಔಷಧ ನೀಡಬೇಕೆಂದರೆ ಸರ್ಕಾರದ ಸಹಾಯದಿಂದ ಮಾತ್ರ ಸಾಧ್ಯ. ಔಷಧಕ್ಕಾಗಿ ಬೇಡಿಕೆಗಳ ಬರುತ್ತಿದ್ದರೂ ಅಗತ್ಯಕ್ಕೆ ತಕ್ಕಂತೆ ಔಷಧ ತಯಾರಿಸಲು ಸಾಧ್ಯವಾಗುತ್ತಿಲ್ಲ. ಮೂಲ ಸೌಕರ್ಯದ ಸಮಸ್ಯೆ ಎದುರಾಗಿದೆ ಎಂದು ಆನಂದಯ್ಯ ತಿಳಿಸಿದ್ದಾರೆ. ಇನ್ನು ಈ ಹಳ್ಳಿ ಮದ್ದಿನಲ್ಲಿ 16 ಬಗೆಯ ಗಿಡಮೂಲಿಕೆಗಳನ್ನು ಬಳಸಲಾಗಿದೆಯಂತೆ. ಆನಂದಯ್ಯ ಅವರು 10 ಬಗೆಯ ಕಚ್ಛಾ ವಸ್ತುಗಳನ್ನು ಕೃಷ್ಣಪಟ್ನಂನಿಂದ ತಂದು ಬಳಸಿದ್ದಾರೆ.
ಆನಂದಯ್ಯ ಕೊರೊನಾ ಔಷಧಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಅನುಮತಿ ಸಿಕ್ಕಿದ್ದರೂ ಸ್ಥಳೀಯರಿಗೆ ಔಷಧ ಪೂರೈಕೆ ಆಗುತ್ತಿಲ್ಲ ಎಂದು ಆಂಧ್ರದ ಜನ ದೂರುತ್ತಿದ್ದಾರೆ.ಆನ್ಲೈನ್ ಮೂಲಕವೂ ಔಷಧವನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಆನಂದಯ್ಯ ತಂಡ ವಿಶೇಷ ವೆಬ್ಸೈಟನ್ನು ಸಿದ್ಧಪಡಿಸಿದೆ.
ಇದನ್ನೂ ಓದಿ : ಬ್ರಾಹ್ಮಣರ ವಿರುದ್ಧ ನಟ ಚೇತನ್ ಹೇಳಿಕೆ: ಪೊಲೀಸ್ ಆಯುಕ್ತರಿಗೆ ಬಾಹ್ಮಣ ಸಮುದಾಯದಿಂದ ದೂರು
ಇನ್ನು ಜೂನ್ 1ರಂದು ಗಿಡಮೂಲಿಕೆ ಔಷಧಿಯನ್ನು ಪಡೆದಿದ್ದ ಕೊರೋನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇತ್ತೀಚೆಗೆ ವೈರಲ್ ಆಗಿದ್ದ ವಿಡಿಯೋದಲ್ಲಿ ಸೋಂಕಿತ ವ್ಯಕ್ತಿ, ಗಿಡಮೂಲಿಕೆ ಔಷಧಿ ಉತ್ತಮವಾಗಿದೆ. ನಾನು ಆ ಚಿಕಿತ್ಸೆ ಪಡೆದ ಬಳಿಕ ಸುಧಾರಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆದರೆ, ಅದೇ ವ್ಯಕ್ತಿ ನಿನ್ನೆ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೊರೋನಾಗೆ ರಾಮಬಾಣ ಎನ್ನುತ್ತಿದ್ದ ಕೃಷ್ಣಪಟ್ನಂ ಗಿಡಮೂಲಿಕೆ ಔಷಧಿಯನ್ನು ನಿವೃತ್ತ ಹೆಡ್ ಮಾಸ್ಟರ್ ಪಡೆದಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎನ್ನಲಾಗಿದ್ದು, ಸಾವನ್ನಪ್ಪಿದ್ದಾರೆ.
ಕೊಟ್ಟಯ್ಯ ಮೃತಪಟ್ಟ ವ್ಯಕ್ತಿ. ಇವರು ನೆಲ್ಲೂರು ಜಿಲ್ಲೆಯ ಕೋಟ ಮಂಡಲ ಶಾಲೆಯ ನಿವೃತ್ತ ಹೆಡ್ ಮಾಸ್ಟರ್. ಇವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಹೀಗಾಗಿ ಕೃಷ್ಣಪಟ್ನಂಗೆ ತೆರಳಿ ಕೊರೋನಾಗೆ ರಾಮಬಾಣ ಎನ್ನುತ್ತಿದ್ದ ಗಿಡಮೂಲಿಕೆ ಔಷಧಿಯನ್ನು ಪಡೆದಿದ್ದರು. ಅದು ಕಣ್ಣಿಗೆ ಹಾಕುವ ಡ್ರಾಪ್ ಆಗಿತ್ತು. ಇದಾದ ಬಳಿಕ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿತ್ತು. ಹೀಗಾಗಿ ಕೊಟ್ಟಯ್ಯ ಅವರನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆಕ್ಸಿಜನ್ ಕೂಡ ನೀಡಲಾಗಿತ್ತು.
ನೆಲ್ಲೂರು ಜಿಲ್ಲೆಯ ಕೃಷ್ಣಪಟ್ನಂ ಗ್ರಾಮದಲ್ಲಿ ಆನಂದಯ್ಯ ಎಂಬುವರು ಕೊರೋನಾ ಔಷಧವನ್ನು ಉಚಿತವಾಗಿ ನೀಡುತ್ತಿದ್ದರು. ಇದನ್ನು ಪಡೆದ ಕೊಟ್ಟಯ್ಯ ಬಳಿಕ ಸಾವನ್ನಪ್ಪಿದ್ದಾರೆ. ಕೊಟ್ಟಯ್ಯ ಅವರಿಗೆ ಬೇರೆ ಆರೋಗ್ಯ ಸಮಸ್ಯೆಗಳೂ ಸಹ ಇದ್ದವು ಎಂದು ವೈದ್ಯರು ಹೇಳಿದ್ದಾರೆ. ಆನಂದಯ್ಯ ಅವರ ಗಿಡಮೂಲಿಕೆ ಔಷಧಿ ಪಡೆದಿದ್ದ ಇನ್ನೂ 24 ಮಂದಿ ಕೊರೋನಾ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರೆಲ್ಲರೂ ಕಣ್ಣಿನ ತುರಿಕೆ ಇದೆ ಎಂದು ದೂರಿದ್ದಾರೆ.
ಇದನ್ನೂ ಓದಿ: ಅರಿಯದ ಮಕ್ಕಳಿಗೆ ಬಾಡೂಟದ ಜೊತೆ ಮದ್ಯ ನೀಡಿ ಕಿಡಿಗೇಡಿತನ; ವಿಡಿಯೋ ವೈರಲ್ ಬೆನ್ನಲ್ಲೇ ಬಂಧನ
ಆನಂದಯ್ಯ ಅವರು ನೀಡುವ ಔಷಧದಲ್ಲಿ ಬೇವು, ಹರಿಶಿಣ, ಮೆಣಸು, ಶುಂಠಿ ಸೇರಿದಂತೆ ಹಲವು ಔಷಧೀಯ ಸಾಮಗ್ರಿಗಳು ಇವೆಯಂತೆ. ಇದರಿಂದ ನೈಸರ್ಗಿಕವಾಗಿ ರೋಗನಿರೋಧಕ ಶಕ್ತಿ ಹೆಚ್ಚಾಗಿ ಕೊರೋನಾದಿಂದ ಗುಣಮುಖವಾಗಬಹುದು ಎನ್ನಲಾಗುತ್ತಿದೆ. ಆನಂದಯ್ಯ ಅವರ ಔಷಧಕ್ಕೆ ಕೇಂದ್ರ ಸರ್ಕಾರ ಸೇರಿದಂತೆ ಆಂಧ್ರ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗಿಡಮೂಲಿಕೆ ಔಷಧಕ್ಕಾಗಿ ಜನ ಮುಗಿ ಬೀಳುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ