ಇಟಲಿಯಿಂದ ಭಾರತಕ್ಕೆ ಆಗಮಿಸಿದ ಸಚಿವ ಆನಂದ್​​ ಸಿಂಗ್​ ಮಗಳು: ಕೊರೋನಾದಿಂದ ಪಾರು, ಪರೀಕ್ಷೆಯಿಂದ ಧೃಡ

​​​ಇಟಲಿಯಿಂದ ಬಂದಿರುವ ಎಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆ ಮಾಡಲಾದ 15 ಜನರ ಪೈಕಿ ಎಲ್ಲರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ. ನೆಗಟಿವ್ ಬಂದಿದ್ದರೂ ಯಾವುದೋ ಹೋಟೆಲ್​ವೊಂದರಲ್ಲಿ 15 ಜನರನ್ನು ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

ಸಚಿವ ಆನಂದ್ ಸಿಂಗ್ ಮತ್ತು ಅವರ ಮಗಳು ವೈಷ್ಣವಿ.

ಸಚಿವ ಆನಂದ್ ಸಿಂಗ್ ಮತ್ತು ಅವರ ಮಗಳು ವೈಷ್ಣವಿ.

 • Share this:
  ಬೆಂಗಳೂರು(ಮಾ.18): ಕೊರೋನಾ ವೈರಸ್​​ಗೆ ತತ್ತರಿಸಿದ ಇಟಲಿಯ ರೋಮ್ ನಗರದಲ್ಲಿ ಸಿಲುಕಿಕೊಂಡಿದ್ದ ಅರಣ್ಯ ಸಚಿವ ಆನಂದ್ ಸಿಂಗ್​​ ಮಗಳು ಭಾರತಕ್ಕೆ ಆಗಮಿಸಿದ್ದಾಳೆ. ಮಂಗಳವಾರ(ನಿನ್ನೆ) ರಾತ್ರಿಯೇ ಬಾಂಬೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಂಗ್ ಮಗಳು ವೈಷ್ಣವಿ ಇನ್ನೂ ಬೆಂಗಳೂರಿಗೆ ಬಂದ ಬಗ್ಗೆ ಮಾಹಿತಿಯಿಲ್ಲ. ಆದರೆ, ಬಾಂಬೆಗೆ ಬಂದ ವಿಚಾರವನ್ನು ಮಾತ್ರ ಸಚಿವ ಆನಂದ್​​ ಸಿಂಗ್​​ ಆಪ್ತರು ಖಚಿತಪಡಿಸಿದ್ದಾರೆ.

  ಕರ್ನಾಟಕದ 150 ಮಂದಿ ಸೇರಿದಂತೆ ಭಾರತದ 445 ಜನ ಇಟಲಿಯಲ್ಲಿ ಸಿಲುಕಿಕೊಂಡಿದ್ದರು. ಕೊರೊನಾ ಪರೀಕ್ಷೆಯ ನೆಗಟಿವ್ ಸರ್ಟಿಫಿಕೇಟ್ ಪಡೆಯದ ಯಾರನ್ನು ಏರ್ ಇಂಡಿಯಾದವರು ವಿಮಾನ ಹತ್ತಿಸಿಕೊಂಡಿರಲಿಲ್ಲ. ಈ ಪೈಕಿ ವೈಷ್ಣವಿ ಕೂಡ ಒಬ್ಬರಾಗಿದ್ದರು. ಹಾಗಾಗಿ ಸಚಿವ ಆನಂದ್​ ಸಿಂಗ್​​​ ಈ ಬಗ್ಗೆ ತಮ್ಮ ಅಸಹಾಯಕತೆ ತೋಡಿಕೊಂಡಿದ್ದರು.

  ಇನ್ನು, ಬಾಂಬೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಆನಂದ್ ಸಿಂಗ್  ಮಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಆನಂದ್ ಸಿಂಗ್ ಮಗಳ ಜತೆಗೆ ಕರ್ನಾಟಕದ ಇನ್ನೂ 15 ಜನ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಅದೃಷ್ಟವಶಾತ್​​ ಯಾರದು ಪಾಸಿಟಿವ್​​ ವರದಿ ಬಂದಿಲ್ಲ. ಆದ್ದರಿಂದ ಆನಂದ್​​ ಸಿಂಗ್​​ ಮಗಳು ಈ ಮಹಾಮಾರಿ ಕೊರೋನಾ ವೈರಾಣುವಿನಿಂದ ಪಾರಾಗಿದ್ದಾಳೆ.

  ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಕೊರೋನಾ; ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 13ಕ್ಕೆ ಏರಿಕೆ

  ​​​ಇಟಲಿಯಿಂದ ಬಂದಿರುವ ಎಲ್ಲರಿಗೂ ಕೊರೊನಾ ವೈರಸ್ ಪರೀಕ್ಷೆ ಮಾಡಲಾಗಿದೆ. ಪರೀಕ್ಷೆ ಮಾಡಲಾದ 15 ಜನರ ಪೈಕಿ ಎಲ್ಲರಿಗೂ ಕೊರೊನಾ ನೆಗೆಟಿವ್ ವರದಿ ಬಂದಿದೆ. ನೆಗಟಿವ್ ಬಂದಿದ್ದರೂ ಯಾವುದೋ ಹೋಟೆಲ್​ವೊಂದರಲ್ಲಿ 15 ಜನರನ್ನು ಪ್ರತ್ಯೇಕವಾಗಿಟ್ಟು ನಿಗಾ ವಹಿಸಲಾಗಿದೆ ಎಂದು ತಿಳಿದು ಬಂದಿದೆ.

  ಅರಣ್ಯ ಸಚಿವ ಆನಂದ್ ಸಿಂಗ್ ತನ್ನ ಮಗಳು ಇಟಲಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರ ಬಗ್ಗೆ ನಿನ್ನೆಯೇ ವಿಧಾನಸಭೆಯಲ್ಲಿ ಮಾತನಾಡಲು ಪ್ರಯತ್ನಪಟ್ಟರು. ಆದರೆ ಪ್ರತಿಪಕ್ಷ ಶಾಸಕರ ಗಲಾಟೆ ಗದ್ದಲದ ನಡುವೆ ಆನಂದ್ ಸಿಂಗ್‌ಗೆ ವಿಷಯ ಪ್ರಸ್ತಾಪಿಸಲು ಅವಕಾಶ ಸಿಗದೆ ಕಂಗಾಲಾದರು. ಕೊರೊನಾದಿಂದ ಮಗಳು ಸಿಕ್ಕಿಹಾಕಿಕೊಂಡ ಬಗ್ಗೆ ತಮ್ಮ ಪೂರ್ತಿ ಮಾತನ್ನು ಸಚಿವ ಆನಂದ್ ಸಿಂಗ್ ಆಡಲು ಆಗಲಿಲ್ಲ.

  !function(e,i,n,s){var t="InfogramEmbeds",d=e.getElementsByTagName("script")[0];if(window[t]&&window[t].initialized)window[t].process&&window[t].process();else if(!e.getElementById(n)){var o=e.createElement("script");o.async=1,o.id=n,o.src="https://e.infogram.com/js/dist/embed-loader-min.js",d.parentNode.insertBefore(o,d)}}(document,0,"infogram-async");

   
  Loading...

   

  First published: